ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷರು ಮತ್ತು ಸದಸ್ಯರಿಗೆ ನಿರ್ದಿಷ್ಟ ಕಾಲಾವಧಿ ನಿಗದಿಗೆ ಸಂಪುಟದ ಸಮ್ಮತಿ

Posted On: 10 JAN 2018 1:11PM by PIB Bengaluru

ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷರು ಮತ್ತು ಸದಸ್ಯರಿಗೆ ನಿರ್ದಿಷ್ಟ ಕಾಲಾವಧಿ ನಿಗದಿಗೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ರಾಷ್ಟ್ರೀಯ ಟ್ರಸ್ಟ್ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರ ಕಾಲಾವಧಿಯನ್ನು 3 ವರ್ಷಗಳಿಗೆ ನಿಗದಿ ಪಡಿಸಲು ಆಟಿಸಂ,  ಸೆರೆಬ್ರಲ್ ಪ್ಲಾಸಿಮಾನಸಿಕ ಅಸ್ವಸ್ಥತೆ ಮತ್ತು ಬಹು ಅಂಗಾಂಗ ನ್ಯೂನತೆ ಇರುವ ವ್ಯಕ್ತಿಗಳ ಕಲ್ಯಾಮ ಕುರಿತ ರಾಷ್ಟ್ರೀಯ ಟ್ರಸ್ಟ್  ಕಾಯಿದೆ 1999ರ ಸೆಕ್ಷನ್ 4 (1) ಮತ್ತು ಸೆಕ್ಷನ್ 5 (1)ಕ್ಕೆ  ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ತನ್ನ  ಅನುಮೋದನೆ ನೀಡಿದೆ.

ರಾಷ್ಟ್ರೀಯ ಟ್ರಸ್ಟ್ ಕಾಯಿದೆ 1999ರ ಸೆಕ್ಷನ್ 4(1) ರಾಷ್ಟ್ರೀಯ ಟ್ರಸ್ಟ್ ಮಂಡಳಿಯ ಅಧ್ಯಕ್ಷರು ಅಥವಾ ಸದಸ್ಯರಿಗೆ, ಅವರ ಉತ್ತರಾಧಿಕಾರಿಯನ್ನು ಸೂಕ್ತವಾಗಿ ನೇಮಕ ಮಾಡುವ ತನಕ ನಿಗದಿತ ಮೂರು ವರ್ಷಗಳ ಅವಧಿಯ ನಂತರವೂ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ಕೊಡುತ್ತದೆ. ಒಂದೊಮ್ಮೆ ಅಧ್ಯಕ್ಷರು ರಾಜೀನಾಮೆ ಕೊಟ್ಟರೂ, ಕಾಯಿದೆಯ ಸೆಕ್ಷನ್ 5 (1) ಸರ್ಕಾರದಿಂದ ಅವರ ಉತ್ತರಾಧಿಕಾರಿ ನೇಮಕಗೊಳ್ಳುವ ತನಕ ಕಚೇರಿಯಲ್ಲಿ ಮುಂದುವರಿಯಲು ಅವಕಾಶ ನೀಡುತ್ತದೆ. ಕಾಯಿದೆಯಲ್ಲಿನ ಮೇಲಿನ ಶಬ್ದಪ್ರಯೋಗಗಳ ಅವಕಾಶಗಳು, ಸೂಕ್ತ ಉತ್ತರಾಧಿಕಾರಿಗಳು ಸಿಗದೆ ಸೂಕ್ತವಾದ ವ್ಯಕ್ತಿಯ ನೇಮಕಾತಿಯಾಗದ ಕಾರಣ  ಅಧ್ಯಕ್ಷರು ಅನಿರ್ದಿಷ್ಟಾವಧಿಗೆ ಮುಂದುವರಿಯಲು ಕಾರಣವಾಗಿತ್ತು. ಕಾಯಿದಿಯ ಉದ್ದೇಶಿತ ತಿದ್ದುಪಡಿಗಳು, ಇಂಥ ಪರಿಸ್ಥಿತಿ ಬಾರದಂತೆ ತಪ್ಪಿಸುತ್ತವೆ ಮತ್ತು ದೀರ್ಘಕಾಲ ಅದೇ ಹುದ್ದೆಯಲ್ಲಿ ಯಾವುದೇ ಸ್ಥಾನಮಾನದಿಂದ ಮುಂದುವರಿಯುವ ಅವಕಾಶವನ್ನು ತಪ್ಪಿಸುತ್ತದೆ.

*****



(Release ID: 1516183) Visitor Counter : 70


Read this release in: English