ಸಂಪುಟ

ಕೇಂದ್ರೀಯ ಕೈಗಾರಿಕಾ ಭದ್ರತೆ ಪಡೆ ಗ್ರೂಪ್ 'ಎ' ಕಾರ್ಯನಿರ್ವಾಹಕರ ಕೇಡರ್ ಪರಾಮರ್ಶೆಗೆ ಸಂಪುಟದ ಅನುಮೋದನೆ

Posted On: 10 JAN 2018 1:12PM by PIB Bengaluru

ಕೇಂದ್ರೀಯ ಕೈಗಾರಿಕಾ ಭದ್ರತೆ ಪಡೆ ಗ್ರೂಪ್ 'ಕಾರ್ಯನಿರ್ವಾಹಕರ ಕೇಡರ್ ಪರಾಮರ್ಶೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರೀಯ ಕೈಗಾರಿಕಾ ಭದ್ರತೆ ಪಡೆ (ಸಿಐಎಸ್.ಎಫ್.) ಗ್ರೂಪ್ ''ಕಾರ್ಯನಿರ್ವಾಹಕರ ಕೇಡರ್ ಪರಾಮರ್ಶೆಗೆ ತನ್ನ ಅನುಮೋದನೆ ನೀಡಿದೆ. ಇದು ಸಿಐಎಸ್.ಎಫ್.ನಲ್ಲಿ ಹಿರಿಯ ಕರ್ತವ್ಯದ ಹುದ್ದೆಗಳಲ್ಲಿ ಮೇಲುಸ್ತುವಾರಿ ಸಿಬ್ಬಂದಿಯ ಹೆಚ್ಚಳಕ್ಕಾಗಿ ಸಹಾಯಕ ಕಮಾಂಡೆಂಟ್ ನಿಂದ ಹೆಚ್ಚುವರಿ ಮಹಾ ನಿರ್ದೇಶಕರವರೆಗೆ ವಿವಿಧ ಶ್ರೇಣಿಯ 25 ಹುದ್ದೆಗಳ ಸೃಷ್ಟಿಗೆ ಅವಕಾಶ ಒದಗಿಸುತ್ತದೆ.

ಸಿಐಎಸ್.ಎಫ್. ಕೇಡರ್ ಪುನಾರಚನೆಯು, ಹೆಚ್ಚುವರಿ ಮಹಾ ನಿರ್ದೇಶಕರ 2, ಮಹಾ ನಿರೀಕ್ಷಕರ 7, ಉಪ ಮಹಾ ನಿರೀಕ್ಷಕರ 8 ಮತ್ತು ಕಮಾಂಡೆಂಟ್ ಗಳ 8 ಹುದ್ದೆ ಸಹಿತ ಗ್ರೂಪ್ ಎ ಹುದ್ದೆಗಳನ್ನು 1252ರಿಂದ 2177ಕ್ಕೆ ಹೆಚ್ಚಿಸಲಿದೆ.

ಪರಿಣಾಮ:

ಸಿ.ಐ.ಎಸ್.ಎಫ್. ನಲ್ಲಿ ಈ ಗ್ರೂಪ್ ಎ ಹುದ್ದೆಗಳ ಸೃಷ್ಟಿಯ ತರುವಾಯ, ಪಡೆಗಳ ನಿಗಾ ದಕ್ಷತೆ ಮತ್ತು ಸಾಮರ್ಥ್ಯವರ್ಧನೆಯಲ್ಲಿ ಹೆಚ್ಚಳವಾಗಲಿದೆ. ಪಡೆಯಲ್ಲಿ ಎ ಗುಂಪಿನಲ್ಲಿ ಸಕಾಲದಲ್ಲಿ ಕೇಡರ್ ಪರಾಮರ್ಶೆ ಮಾಡುವ ಪ್ರಸ್ತಾಪವು ಉಸ್ತುವಾರಿ ಮತ್ತು ಆಡಳಿತಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಹಿನ್ನೆಲೆ:

ಸಿಐಎಸ್.ಎಫ್.ಕಾಯಿದೆ 1968 ಕಾಯಿದೆ ಅಡಿಯಲ್ಲಿ ಸಿಐಎಸ್.ಎಫ್. ಅಸ್ತಿತ್ವಕ್ಕೆ ಬಂದಿದ್ದು, 1983ರಲ್ಲಿ ತಿದ್ದುಪಡಿಯೊಂದಿಗೆ ಪಡೆಯನ್ನು ಕೇಂದ್ರ ಸರ್ಕಾರದ ಸಶಸ್ತ್ರಪಡೆ ಎಂದು ಘೋಷಿಸಲಾಗಿದೆ. ಸಿಐಎಸ್.ಎಫ್.ನ ಮೂಲ ಉದ್ದೇಶ, ಸಾರ್ವಜನಿಕ ವಲಯದ ಉದ್ದಿಮೆಗಳ ಆಸ್ತಿಪಾಸ್ತಿಗೆ ರಕ್ಷಣೆ ಮತ್ತು ಭದ್ರತೆ ಒದಗಿಸುವುದಾಗಿದೆ. ಖಾಸಗಿ ವಲಯದ ಘಟಕಗಳಿಗೆ ರಕ್ಷಣೆ ನೀಡುವುದೂ ಸೇರಿದಂತೆ ಕರ್ತವ್ಯವನ್ನು ಹೆಚ್ಚಿಸಲು ಮತ್ತು ಕೇಂದ್ರ ಸರ್ಕಾರ ಸೂಚಿಸುವ ಇತರ ಕರ್ತವ್ಯಗಳನ್ನು ಪಡೆ ಪಾಲಿಸಲು ಅನುವಾಗುವಂತೆ ಈ ಕಾಯಿದೆಗೆ 1989, 1999 ಮತ್ತು 2009ರಲ್ಲಿ ಮತ್ತೆ ತಿದ್ದುಪಡಿ ತರಲಾಗಿದೆ.

ಸಿ.ಐ.ಎಸ್.ಎಫ್. 1969ರಲ್ಲಿ ಮಂಜೂರಾದ ಮೂರು ಬೆಟಾಲಿಯನ್ ಗಳ ಬಲದೊಂದಿಗೆ ಅಸ್ತಿತ್ವಕ್ಕೆ ಬಂದಿತು. ಸಿಐಎಸ್.ಎಫ್., 12 ಮೀಸಲು ಬೆಟಾಲಿಯನ್ ಗಳು ಮತ್ತು ಎಚ್.ಕ್ಯು.ಆರ್. ಹೊರತು ಪಡಿಸಿ ಇತರ ಸಿ.ಎ.ಪಿ.ಎಫ್.ಗಳಂತೆ ಬೆಟಾಲಿಯನ್ ಸ್ವರೂಪವನ್ನು ಒಳಗೊಂಡಿಲ್ಲ. ಪ್ರಸ್ತುತ ಪಡೆಯು ದೇಶಾದ್ಯಂತ 336 ಕೈಗಾರಿಕೋದ್ಯಮಗಳಿಗೆ (59 ವಿಮಾನ ನಿಲ್ದಾಣಗಳು ಸೇರಿದಂತೆ) ಭದ್ರತೆ ಒದಗಿಸುತ್ತಿದೆ. 1969ರಲ್ಲಿ ಮಂಜೂರಾದ 3192 ಬಲದೊಂದಿಗೆ ಆರಂಭಗೊಂಡ ಪಡೆ, 2017ರ ಜೂನ್ 30ರಲ್ಲಿದ್ದಂತೆ 1,49,088ಕ್ಕೆ ವೃದ್ಧಿಸಿದೆ.  ಸಿಐಎಸ್.ಎಫ್. ಕೇಂದ್ರ ಕಚೇರಿ ದೆಹಲಿಯಲ್ಲಿದೆ. ಈ ಸಂಘಟನೆಗೆ ಡಿಜಿ ಮುಖ್ಯಸ್ಥರಾಗಿದ್ದಾರೆ. ಇದು ಎಕ್ಸ್ ಕೇಡರ್ ಹುದ್ದೆಯಾಗಿದೆ.

 ******



(Release ID: 1516167) Visitor Counter : 95


Read this release in: English , Telugu