ಪ್ರಧಾನ ಮಂತ್ರಿಯವರ ಕಛೇರಿ

ಪಿಐಓ-ಸಂಸದೀಯಪಟುಗಳ ಸಮಾವೇಶದ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಿ ಭಾಷಣ

Posted On: 09 JAN 2018 1:31PM by PIB Bengaluru

ಪಿಐಓ-ಸಂಸದೀಯಪಟುಗಳ ಸಮಾವೇಶದ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಿ ಭಾಷಣ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೆಹಲಿಯಲ್ಲಿಂದು ಪಿಐಓ – ಸಂಸದೀಯಪಟುಗಳ ಸಮಾವೇಶದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು.

ಸಮಾವೇಶಕ್ಕೆ ಪ್ರತಿನಿಧಿಗಳನ್ನು ಸ್ವಾಗತಿಸಿದ, ಪ್ರಧಾನಿ, ನೂರಾರು ವರ್ಷಗಳಿಂದ ಅನೇಕ ಜನರು ಭಾರತವನ್ನು ತೊರೆದಿದ್ದರೂತಮ್ಮ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ಭಾರತಕ್ಕೆ ಸ್ಥಾನ ನೀಡಿದ್ದಾರೆ ಎಂದರು. ಭಾರತೀಯ ಮೂಲದ ಜನರು ತಾವು ನೆಲೆ ಪಡೆದ ಭೂಮಿಯನ್ನು ಸಮಗ್ರಗೊಳಿಸಿದ್ದಾರೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಅವರು ಹೇಳಿದರು. ತಮ್ಮಲ್ಲಿ ಭಾರತೀಯತೆಯನ್ನು ಜೀವಂತವಾಗಿಟ್ಟುಕೊಂಡಿರುವ ಅವರು, ಆಯಾ ರಾಷ್ಟ್ರಗಳ ಆಹಾರ, ಭಾಷೆ, ಉಡುಗೆಯನ್ನು ಅಳವಡಿಸಿಕೊಂಡಿದ್ದಾರೆ ಎಂದರು.

ಇಂದು ದೆಹಲಿಯಲ್ಲಿ ಭಾರತೀಯ ಮೂಲದವರ ವಿಶ್ವದ ಮಿನಿ ಸಂಸತ್ತು ನಡೆಯುತ್ತಿದೆ ಎಂದು ಅನಿಸುತ್ತಿದೆ ಎಂದರು. ಭಾರತೀಯ ಮೂಲದವರು ಇಂದು ಮಾರಿಷಸ್, ಪೋರ್ಚುಗಲ್, ಮತ್ತು ಐರ್ಲೆಂಡ್ ನ ಪ್ರಧಾನಮಂತ್ರಿಗಳಾಗಿದ್ದಾರೆ ಎಂದರು. ಭಾರತೀಯ ಮೂಲದವರು ಇನ್ನೂ ಹಲವು ರಾಷ್ಟ್ರಗಳಲ್ಲಿ ರಾಷ್ಟ್ರಗಳ ಮತ್ತು ಸರ್ಕಾರಗಳ ಮುಖ್ಯಸ್ಥರಾಗಿದ್ದಾರೆ ಎಂದರು.

ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಭಾರತದ ಬಗ್ಗೆ ಇದ್ದ ವಿಶ್ವದ ಅಭಿಪ್ರಾಯ ಬದಲಾಗಿದೆ ಎಂದು ಪ್ರಧಾನಿ ಹೇಳಿದರು. ಇದಕ್ಕೆ ಕಾರಣ ಏನೆಂದರೆ, ಭಾರತವು ತನ್ನನ್ನು ತಾನು ಪರಿವರ್ತಿಸಿಕೊಳ್ಳುತ್ತಿದೆ ಎಂದರು. ಭಾರತದ ಆಶಯಗಳು ಮತ್ತು ವಿಶ್ವಾಸಗಳು ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದರು. ಎಲ್ಲ ವಲಯಗಳಲ್ಲೂ ಹಿಂತಿರುಗಿಸಲಾಗದಂಥ ಬದಲಾವಣೆಗಳು ಕಾಣಿಸುತ್ತಿವೆ ಎಂದರು.

ಪಿಐಓಗಳು ಭಾರತದ ಶಾಶ್ವತ ರಾಯಭಾರಿಗಳು ಎಂದು ಹೇಳಿದ ಪ್ರಧಾನಿ, ಅವರು ಎಲ್ಲೆಲ್ಲಿ ನೆಲೆಸಿದ್ದಾರೋ, ಅಲ್ಲಿ ಅವರು ತಾವು ವಿದೇಶಕ್ಕೆ ಹೋದಾಗ ಸದಾ ಭೇಟಿ ಮಾಡುವ ಪ್ರಯತ್ನ ಮಾಡುತ್ತಾರೆ ಎಂದರು.  

ವಿದೇಶಗಳಲ್ಲಿರುವ ಭಾರತೀಯ ಪ್ರಜೆಗಳು ಎದುರಿಸುವ ಸಮಸ್ಯೆಗಳ ಮೇಲೆ ಸದಾ ಒಂದು ಕಣ್ಣಿಟ್ಟಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಪ್ರಧಾನಿ ಶ್ಲಾಘಿಸಿದರು. ಈ ನಿಟ್ಟಿನಲ್ಲಿ ಅವರು, ಕುಂದುಕೊರತೆಯ ಪರಿಹಾರಕ್ಕೆ ಸಕಾಲದ ನಿಗಾ ಮತ್ತು ಸ್ಪಂದನೆ ನೀಡುವ ಮದದ್ (ಸಹಾಯ) ಪೋರ್ಟಲ್ ಪ್ರಸ್ತಾಪಿಸಿದರು.

ಭಾರತದ ಅಭಿವೃದ್ಧಿಯಲ್ಲಿ ಎನ್.ಆರ್.ಐ.ಗಳು ಪಾಲುದಾರರು ಎಂದು ಸರ್ಕಾರ ನಂಬಿದೆ ಎಂದು ಪ್ರಧಾನಿ ಹೇಳಿದರು. ನೀತಿ ಆಯೋಗ ಸಿದ್ಧಪಡಿಸಿರುವ 2020ರವರೆಗಿನ ಕಾರ್ಯ ಕಾರ್ಯಕ್ರಮದಲ್ಲಿ ಎನ್.ಆರ್.ಐ.ಗಳು ಮಹತ್ವದ ಸ್ಥಾನ ಪಡೆದಿದ್ದಾರೆ ಎಂದರು.

ಅಸ್ಥಿರತೆಯ ಯುಗದಲ್ಲಿ ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ಮೌಲ್ಯಗಳು ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲವಾಗಿವೆ ಎಂದರು.

ಆಸಿಯಾನ್ ರಾಷ್ಟ್ರಗಳೊಂದಿಗೆ ಭಾರತ ಆಪ್ತವಾದ ಬಾಂಧವ್ಯ ಹೊಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಇದನ್ನು ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು ಎಂದು ಪ್ರಧಾನಿ ಹೇಳಿದರು.

*****



(Release ID: 1516024) Visitor Counter : 88


Read this release in: English