ಸಂಪುಟ

ಪ್ರಮುಖ ಬಂದರುಗಳಲ್ಲಿನ ಪಿಪಿಪಿ ಯೋಜನೆಗಳಿಗೆ ಪರಿಷ್ಕೃತ ಮಾದರಿ ರಿಯಾಯಿತಿ ಒಪ್ಪಂದಕ್ಕೆಸಂಪುಟದ ಅನುಮೋದನೆ

Posted On: 03 JAN 2018 2:34PM by PIB Bengaluru

ಪ್ರಮುಖ ಬಂದರುಗಳಲ್ಲಿನ ಪಿಪಿಪಿ ಯೋಜನೆಗಳಿಗೆ ಪರಿಷ್ಕೃತ ಮಾದರಿ ರಿಯಾಯಿತಿ ಒಪ್ಪಂದಕ್ಕೆಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬಂದರು ಯೋಜನೆಗಳನ್ನು ಹೆಚ್ಚು ಹೂಡಿಕೆ ಸ್ನೇಹಿ ಮಾಡಲು ಮತ್ತು ಬಂದರು ಕ್ಷೇತ್ರದಲ್ಲಿ ಹೂಡಿಕೆಯ ವಾತಾವರಣವನ್ನು ಮತ್ತಷ್ಟು ಆಕರ್ಷಕಗೊಳಿಸಲು ಮಾದರಿ ರಿಯಾಯಿತಿ ಒಪ್ಪಂದ (ಎಂ.ಸಿ.ಎ.)ದಲ್ಲಿ ತಿದ್ದುಪಡಿಗಳಿಗೆ ತನ್ನ ಅನುಮೋದನೆ ನೀಡಿದೆ.

ಪ್ರಮುಖ ಅಂಶಗಳು:

ಎಂ.ಸಿ.ಎ.ಯಲ್ಲಿನ ತಿದ್ದುಪಡಿಗಳು ಹೆದ್ದಾರಿ ವಲಯದಲ್ಲಿರುವ ರೀತಿಯಲ್ಲೇ ವಿವಾದಗಳ ಇತ್ಯರ್ಥ ವ್ಯವಸ್ಥೆಯಾಗಿ ಸೊಸೈಟಿ ಫಾರ್ ಆಫೋರ್ಡಬಲ್ ರಿಡ್ರೆಸೆಲ್ ಆಫ್ ಡಿಸ್ಪ್ಯೂಟ್ಸ್ – ಪೋರ್ಟ್ಸ್ (ಎಸ್.ಎ.ಆರ್.ಓ.ಡಿ.-ಪೋರ್ಟ್ಸ್) ಸ್ಥಾಪನೆಗೆ ಅವಕಾಶ ನೀಡುತ್ತದೆ.

ಪರಿಷ್ಕೃತ ಎಂ.ಸಿ.ಎ.ಯ ಇತರ ಪ್ರಮುಖ ಅಂಶಗಳು ಈ ಕೆಳಗಿನವುಗಳನ್ನು ಒಳಗೊಂಡಿದೆ:- 

       i.            ವಾಣಿಜ್ಯ ಕಾರ್ಯಾಚರಣೆ ದಿನಾಂಕ (ಸಿಒಡಿ) ನಿಂದ 2 ವರ್ಷಗಳು ಪೂರ್ಣಗೊಂಡ ನಂತರ ಶೇ.100ವರೆಗೆ ತಮ್ಮ ಷೇರುಗಳನ್ನು ವಿನಿಯೋಗಿಸುವ ಮೂಲಕ ಡೆವಲಪರ್ ಗಳಿಗೆ ನಿರ್ಗಮನ ಮಾರ್ಗವನ್ನು ಒದಗಿಸುವುದು. ಇದು ಈಗ ಹೆದ್ದಾರಿ ವಲಯದ ಎಂ.ಸಿ.ಎ. ನಿಬಂಧನೆಗಳನ್ನು ಹೋಲುತ್ತದೆ.

     ii.            ರಿಯಾಯಿತಿದಾರರಿಗೆ ಹೆಚ್ಚುವರಿ ಭೂಮಿ ಒದಗಿಸುವ ನಿಬಂಧನೆಗಳ ಅಡಿಯಲ್ಲಿ, ಪ್ರಸ್ತಾವಿತ ಹೆಚ್ಚುವರಿ ಭೂಮಿಗೆ ಅನ್ವಯವಾಗುವ ದರಗಳಲ್ಲಿ ಭೂಮಿ ಬಾಡಿಗೆಯನ್ನು ಪ್ರತಿಶತ 200ರಿಂದ ಶೇ.120ಕ್ಕೆ ಇಳಿಸಲಾಗಿದೆ.

  iii.            ರಿಯಾಯಿತಿದಾರರು "ನಿರ್ವಹಿಸಲಾದ ಪ್ರತಿ ಮೆಟ್ರಿಕ್ ಟನ್ ಸರಕು/ಟಿಇಯು" ಮೇಲೆ ರಾಯಲ್ಟಿ ನೀಡಬೇಕಾಗಿದ್ದು, ಇದರ ಆಧಾರದ ಮೇಲೆ ವಾರ್ಷಿಕವಾಗಿ ಡಬ್ಲ್ಯುಪಿಐನಲ್ಲಿ ಬದಲಾವಣೆ ಸೂಚಿಸಲಾಗುತ್ತದೆ. ಇದು ಹಾಲಿ ರಾಯಲ್ಟಿ ವಿಧಿಸುವ ಪ್ರಕ್ರಿಯೆಯನ್ನು ಬದಲಾಯಿಸಲಿದ್ದು, ಇದು ಪ್ರಮುಖ ಬಂದರುಗಳಿಗೆ ದರ ಪ್ರಾಧಿಕಾರ (ಟಿಎಎಂಪಿ) ಸೂಚಿಸಿದ ಅಪ ಫ್ರಂಟ್ ಪ್ರಮಾಣಕ ದರದ ಮಿತಿ ಆಧಾರದ ಮೇಲೆ ಲೆಕ್ಕ ಹಾಕಿ, ಬಿಡ್ಡಿಂಗ್ ಅವಧಿಯಲ್ಲಿ ನಮೂದಿಸಲಾದ, ನಿವ್ವಳ ಆದಾಯದ ಪ್ರತಿಶತಕ್ಕೆ ಸಮನಾಗಿರುತ್ತದೆ. ಇದು ಸಾರ್ವಜನಿಕ ಖಾಸಗಿ ಪಾಲುದಾರಿಕೆಯ (ಪಿಪಿಪಿ) ಆಪರೇಟರುಗಳ ದೀರ್ಘಕಾಲದಿಂದ ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ನೆರವಾಗುತ್ತದೆ ಇದು ಆದಾಯ ಹಂಚಿಕೆ ಮಿತಿ ದರದ ಮೇಲೆ ಪಾವತಿಸಲ್ಪಡುತ್ತದೆ ಮತ್ತು ಬೆಲೆ ರಿಯಾಯಿತಿಗಳು ಉಪೇಕ್ಷಿಸಲಾಗುತ್ತದೆ. ಟಿ.ಎ.ಎಂ.ಪಿಯಿಂದ  ದಾಸ್ತಾನು ಶುಲ್ಕ ನಿಗದಿಗೆ ಸಂಬಂಧಿಸಿದ ಸಮಸ್ಯೆಗಳ ಮತ್ತು ಸಂಹ್ರಹಣೆ ಶುಲ್ಕ ಆದಾಯ ಸಂಗ್ರಹದ ಹಂಚಿಕೆಯೊಂದಿಗೆ ಹೊಂದಿಕೊಂಡ ಹಲವು ಯೋಜನೆಗಳು ಸಹ ರದ್ದಾಗುತ್ತವೆ.

  iv.            ರಿಯಾಯಿತಿದಾರರು ಹೆಚ್ಚಿನ ಸಾಮರ್ಥ್ಯದ ಸಾಧನ/ಸೌಲಭ್ಯಗಳು/ತಂತ್ರಜ್ಞಾನ ನಿಯುಕ್ತಿಗೊಳಿಸಲು ಮತ್ತು ಹೆಚ್ಚಿನ ಉತ್ಪಾದನೆಗಾಗಿ ಮೌಲ್ಯಯುತ ಎಂಜಿನಿಯರಿಂಗ್ ಕೈಗೊಳ್ಳಲು ಹಾಗೂ ಬಳಕೆ ಸುಧಾರಿಸಲು ಮತ್ತು/ಅಥವಾ ಯೋಜನಾ ಆಸ್ತಿಯ ವೆಚ್ಚ ಉಳಿತಾಯ ಮಾಡಲು  ಮುಕ್ತರಾಗಿರುತ್ತಾರೆ.

     v.            "ವಾಸ್ತವ ಯೋಜನಾ ವೆಚ್ಚ"ವನ್ನು "ಒಟ್ಟಾರೆ ಯೋಜನಾ ವೆಚ್ಚ"ದೊಂದಿಗೆ ಬದಲಾಯಿಸಲಾಗುತ್ತದೆ.

  vi.            "ಕಾನೂನಿನಲ್ಲಿನ ಬದಲಾವಣೆ"ಯ ಹೊಸ ವ್ಯಾಖ್ಯೆಯನ್ನೂ ಸೇರಿಸಲಾಗಿದೆ.

a.     ಟಿಎಎಂಪಿ ಮಾರ್ಗದರ್ಶನಗಳು / ಆದೇಶಗಳು, ಪರಿಸರದ ಕಾನೂನು ಮತ್ತು ಕಾರ್ಮಿಕ ಕಾನೂನುಗಳಿಂದ ಉಂಟಾಗುವ ಮಾನದಂಡಗಳು ಮತ್ತು ಷರತ್ತುಗಳ ಹೇರಿಕೆ, ಮತ್ತು

b.     ರಿಯಾಯಿತಿದಾರರಿಗೆ ಪರಿಹಾರ ಒದಗಿಸಲು ಹೊಸ ತೆರಿಗೆಗಳು, ಸುಂಕ ಇತ್ಯಾದಿ ಹೆಚ್ಚಳ ಮತ್ತು ಹೇರುವುದು. ಯೋಜನೆಯ ಕಾರ್ಯಸಾಧ್ಯತೆಯು ಬಾಧಿತವಾದ ಕಾರಣ, ರಿಯಾಯಿತಿದಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೇರ ತೆರಿಗೆ ಹೇರುವಿಕೆ / ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೊಸ ತೆರಿಗೆಯ ಹೇರುವಿಕೆ / ಹೆಚ್ಚಳ, ಸುಂಕಗಳು ಇತ್ಯಾದಿಗಳ ವಿಚಾರದಲ್ಲಿ ಪರಿಹಾರವನ್ನು ಒದಗಿಸಲಾಗುತ್ತದೆ.

vii.            ಸಿ.ಓ.ಡಿ.ಗೆ ಮೊದಲ ಕಾರ್ಯಾಚರಣೆಯ ಆರಂಭದ ನಿಬಂಧನೆಗಳು. ಇದು ಔಪಚಾರಿಕ ಪೂರ್ಣತೆಯ ಪ್ರಮಾಣ ಪತ್ರಕ್ಕೆ ಮೊದಲು ಹಲವು ಯೋಜನೆಗಳಲ್ಲಿ ಒದಗಿಸಿದ ಆಸ್ತಿಗಳ ಉತ್ತಮ ಬಳಕೆಗೆ ಇಂಬು ನೀಡುತ್ತದೆ.

viii.            ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆಯನ್ನು ಸುಧಾರಿಸುವ ಸಲುವಾಗಿ ರಿಯಾಯಿತಿದಾರರಿಗೆ ಅಲ್ಪ ವೆಚ್ಚದ ದೀರ್ಘಕಾಲೀನ ಹಣಕಾಸು ಲಭ್ಯತೆಯನ್ನು ಗುರಿಯಾಗಿಟ್ಟುಕೊಂಡು ಮರು ಹಣಕಾಸು ನೆರವಿಗೆ ಸಂಬಂಧಿಸಿದಂತೆ ಅವಕಾಶ ಕಲ್ಪಿಸಲಾಗಿದೆ.

  ix.            ರಿಯಾಯಿತಿದಾರ ಮತ್ತು ಅನುಷ್ಠಾನ ಪ್ರಾಧಿಕಾರದ ನಡುವೆ ಅಂಕಿತ ಹಾಕಲಾಗುವ ಪೂರಕ ಒಪ್ಪಂದ ಪರಿಚಯಿಸುವುದರಿಂದ ಹಾಲಿ ಇರುವ ರಿಯಾಯಿತಿದಾರರಿಗಾಗಿ ವಿವಾದಗಳ ಇತ್ಯರ್ಥಕ್ಕಾಗಿ ಎಸ್.ಎ.ಆರ್.ಡಿ.ಓ.-ಪೋರ್ಟ್ಸ್ ನಿಬಂಧನೆಗಳನ್ನು ವಿಸ್ತರಿಸಲಾಗುತ್ತದೆ.

     x.            ಬಂದರು ಬಳಕೆದಾರರ ಅನುಕೂಲಕ್ಕಾಗಿ ದೂರು ಪೋರ್ಟಲ್ ಆರಂಭಿಸುವುದು.

  xi.            ಯೋಜನೆಯ ನಿಯತಕಾಲಿಕ ಸ್ಥಿತಿಯ ವರದಿ ಸಲುವಾಗಿ ನಿಗಾ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ಬಂದರು ವಲಯದಲ್ಲಿನ ಪಿಪಿಪಿ ಯೋಜನೆಗಳ  ನಿರ್ವಹಣೆಯಿಂದ ಮತ್ತು ಅಸ್ತಿತ್ವದಲ್ಲಿರುವ ಎಂ.ಸಿ.ಎ.ಯ ಕೆಲವು ನಿಬಂಧನೆಗಳ ಕಾರಣದಿಂದಾಗಿ ಸಮಸ್ಯೆಗಳನ್ನು ಎದುರಿಸುವುದರಿಂದ ಲಭಿಸಿದ ಅನುಭವದ ಹಿನ್ನೆಲೆಯಲ್ಲಿ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ. ಎಂ.ಸಿ.ಎ.ಯಲ್ಲಿನ ತಿದ್ದುಪಡಿಗಳನ್ನು ಬಾಧ್ಯಸ್ಥರೊಂದಿಗೆ ವಿಸ್ತೃತವಾಗಿ ಚರ್ಚಿಸಿದ ತರುವಾಯ ಆಖೈರುಗೊಳಿಸಲಾಗುತ್ತದೆ.

 *****



(Release ID: 1515617) Visitor Counter : 108


Read this release in: English