ಸಂಪುಟ

2017 ರ ಡಿಸೆಂಬರ್ 10-13ರ ಅವಧಿಯಲ್ಲಿ ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ನಡೆದ ಡಬ್ಲ್ಯು.ಟಿ.ಓ.ದ ಹನ್ನೊಂದನೆಯ ಸಚಿವ ಮಟ್ಟದ ಸಮಾವೇಶದಲ್ಲಿ ಭಾರತವು ಅಳವಡಿಸಿಕೊಳ್ಳಬೇಕಾದ ನಿಲುವಿಗೆ ಸಂಪುಟದ ಅನುಮೋದನೆ

Posted On: 03 JAN 2018 2:44PM by PIB Bengaluru

2017 ರ ಡಿಸೆಂಬರ್ 10-13ರ ಅವಧಿಯಲ್ಲಿ ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ನಡೆದ ಡಬ್ಲ್ಯು.ಟಿ.ಓ.ದ ಹನ್ನೊಂದನೆಯ ಸಚಿವ ಮಟ್ಟದ ಸಮಾವೇಶದಲ್ಲಿ ಭಾರತವು ಅಳವಡಿಸಿಕೊಳ್ಳಬೇಕಾದ ನಿಲುವಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ವಾಣಿಜ್ಯ ಇಲಾಖೆ ಸಲ್ಲಿಸಿದ್ದ ಟಿಪ್ಪಣಿಗೆ ಪೂರ್ವಾನ್ವಯ ಅನುಮೋದನೆ ನೀಡಿ, ಭಾರತವು 2017ರ ಡಿಸೆಂಬರ್ ನಲ್ಲಿ ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ನಡೆದ ಡಬ್ಲ್ಯುಟಿಓ 11ನೇ ಸಚಿವರ ಮಟ್ಟದ ಸಮಾವೇಶದಲ್ಲಿ ಭಾರತ ಅಳವಡಿಸಿಕೊಳ್ಳಬೇಕಾದ ನಿಲುವಿಗೆ ಅನುಮೋದನೆ ನೀಡಿತು. ಸಚಿವರ ಸಮ್ಮೇಳನದಲ್ಲಿ ಭಾರತದ ಆಸಕ್ತಿಗಳು, ಆದ್ಯತೆಗಳು ಮತ್ತು ಕಾಳಜಿಯನ್ನು ಕಾಪಾಡುವ ಉದ್ದೇಶದಿಂದ ನಿಲುವು ಅಳವಡಿಕೆಯ ಆದೇಶದ  ವಿಧಾನವನ್ನು ಅನುಸರಿಸಲಾಯಿತು.

ಹಿನ್ನೆಲೆ

ಈ ಸಮಾವೇಶದ ವೇಳೆ, ಬಾಲಿ/ನೈರೋಬಿ ಆದೇಶದ ರೀತ್ಯ ಆಹಾರ ಭದ್ರತೆ ಉದ್ದೇಶಕ್ಕಾಗಿ ಸಾರ್ವಜನಿಕ ಹಿಡುವಳಿ ವಿಷಯ ಮತ್ತು ಇತರ ಕೃಷಿ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇತ್ತು. ಕೆಲವು ಡಬ್ಲ್ಯುಟಿಓ ಸದಸ್ಯ ರಾಷ್ಟ್ರಗಳು ಸೇವೆಯಲ್ಲಿ ದೇಶೀಯ ನಿಯಂತ್ರಣ, ಮೀನುಗಾರಿಕೆ ಸಬ್ಸಿಡಿಗಳು, ಇ-ವಾಣಿಜ್ಯ, ಹೂಡಿಕೆ ಸೌಲಭ್ಯ ಮತ್ತು ಸೂಕ್ಷ್ಮ, ಮಧ್ಯಮ ಮತ್ತು ಸಣ್ಣ ಉದ್ಯಮಗಳು (ಎಮ್ಎಸ್ಎಮ್ಇಗಳು) ವಿಷಯಗಳ ಮೇಲಿನ ಫಲಶ್ರುತಿಯನ್ನು ಬಯಸಿದವು.

ಆದಾಗ್ಯೂ, ಅಂತಿಮವಾಗಿ, ಒಮ್ಮತದ ಕೊರತೆಯಿಂದಾಗಿ ಆಹಾರ ಭದ್ರತೆ ಅಥವಾ ಇತರ ಕೃಷಿ ವಿಷಯಗಳ ಉದ್ದೇಶಕ್ಕಾಗಿ ಸಾರ್ವಜನಿಕ ಹಿಡುವಳಿಯಲ್ಲಿ ಯಾವುದೇ ಫಲಶ್ರುತಿ ಬರಲಿಲ್ಲ.

ನವೆಂಬರ್ 2014 ರ ಸಾಮಾನ್ಯ ಮಂಡಳಿ ನಿರ್ಧಾರದೊಂದಿಗೆ ಬಾಲಿ ಸಚಿವ ಮಟ್ಟದ ಸಭೆಯ ನಿರ್ಧಾರವು 2015ರ ಡಬ್ಲ್ಯುಟಿಒದ 10 ನೇ ಸಚಿವ ಮಟ್ಟದ ಸಮಾವೇಶದಲ್ಲಿ ಡಬ್ಲ್ಯುಟಿಓ ಶಾಶ್ವತ ಪರಿಹಾರವನ್ನು ಒಪ್ಪಿ ಅಂಗೀಕರಿಸುವವರೆಗೆ, ಆಹಾರ ಭದ್ರತಾ ಉದ್ದೇಶಗಳಿಗಾಗಿ ಸಾರ್ವಜನಿಕ ಹಿಡುವಳಿಗಾಗಿ ಲಭ್ಯವಿರುವ ಮಧ್ಯಂತರ ಕಾರ್ಯವಿಧಾನದ ಮೂಲಕ ಭಾರತವನ್ನು ರಕ್ಷಿಸುವುದನ್ನು ಪುನಃ ದೃಢೀಕರಿಸಲ್ಪಟ್ಟಿದೆ.  ಹೀಗಾಗಿ, ಕನಿಷ್ಠ ಬೆಂಬಲ ಬೆಲೆಯಲ್ಲಿ ಭಾರತದ ಆಹಾರಧಾನ್ಯ ದಾಸ್ತಾನು ಕಾರ್ಯಕ್ರಮ ಸಂರಕ್ಷಿತವಾಗಿದೆ. 2019ರ 12ನೇ ಡಬ್ಲ್ಯುಟಿಓ  ಸಚಿವರ ಮಟ್ಟದ ಸಮಾವೇಶದಲ್ಲಿ ಒಡ ಮೂಡಬಹುದಾದ ನಿರ್ಧಾರಗಳನ್ನು ಗಮನದಲ್ಲಿಟ್ಟುಕೊಂಡು ಸಮಾವೇಶದ ವೇಳೆ ಕೈಗೊಳ್ಳಲಾದ ಸಚಿವರ ಮಟ್ಟದ ನಿರ್ಧಾರಗಳು ಮೀನುಗಾರಿಕೆ ಸಬ್ಸಿಡಿ ಮೇಲಿನ ವಿಭಾಗಗಳ ಕಾರ್ಯ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಭಾರತ ಪ್ರಸ್ತಾಪಿಸುವಂತೆ ಇ – ವಾಣಿಜ್ಯ ಕುರಿತ ಹಾಲಿ ಕಾರ್ಯಕ್ರಮಗಳ ಮಾತುಕತೆ ರಹಿತ ಆದೇಶಗಳ ಮುಂದುವರಿಕೆಗೂ ನಿರ್ಧರಿಸಲಾಗಿದೆ. ಹಿಂದಿನ ಸಚಿವರ ಮಟ್ಟದ ಸಮ್ಮೇಳನಗಳಲ್ಲಿ ಮಾಡಿದಂತೆ, ಎಲೆಕ್ಟ್ರಾನಿಕ್ ಪ್ರಸರಣದ ಮೇಲೆ ಸೀಮಾ ಸುಂಕ ವಿಧಿಸುವ ಹಾಲಿ ನಿಷೇಧವನ್ನು ಎರಡು ವರ್ಷಗಳ ಕಾಲ ವಿಸ್ತರಿಸಲು ತೀರ್ಮಾನಿಸಲಾಗಿದೆ. ಟಿ.ಆರ್.ಐ.ಪಿ.ಎಸ್. ಕುರಿತ ಮತ್ತೊಂದು ನಿಷೇಧ ಉಲ್ಲಂಘನೆ ಮಾಡದ ಕಂಪನಿಗಳನ್ನು ಉಳಿಸಿಕೊಳ್ಳಲಾಗಿದ್ದು, ಇದು ಔಷಧೀಯ ವಲಯದಲ್ಲಿ 'ಎವರ್-ಗ್ರೀನಿಂಗ್' ಪೇಟೆಂಟ್ ಗಳನ್ನು ತಡೆಯುತ್ತದೆ, ಆ ಮೂಲಕ ಜೆನೆರಿಕ್ ಔಷಧಿಗಳ ಲಭ್ಯತೆಯನ್ನು ಖಾತರಿಪಡಿಸುತ್ತದೆ.

ಹೊಸ ವಿಷಯಗಳಾದ ಹೂಡಿಕೆ ಅವಕಾಶಗಳು, ಎಂ.ಎಸ್.ಎಂ.ಇ.ಗಳು, ಲಿಂಗ ಮತ್ತು ವಾಣಿಜ್ಯಗಳ ಕುರಿತ ನಿರ್ಧಾರಗಳನ್ನು ಒಮ್ಮತ ಅಥವಾ ಅಭಿಪ್ರಾಯದ ಕೊರತೆಯಿಂದ ಸಚಿವರುಗಳ ಮಟ್ಟದ ಸಭೆಯು ಮುಂದೂಡಿತು.

ಸದಸ್ಯರಲ್ಲಿ ವ್ಯಾಪಕ ಭಿನ್ನಾಭಿಪ್ರಾಯಗಳು ಇದ್ದ ಹಿನ್ನೆಲೆಯಲ್ಲಿ ಹಾಗೂ ಕೆಲವು ಸದಸ್ಯರು ಡಬ್ಲ್ಯೂಟಿಒ ಮತ್ತು ವಿವಿಧ ಒಪ್ಪಿಗೆ ಆದೇಶಗಳನ್ನು ಮಾರ್ಗದರ್ಶಿಗೆ ಪ್ರಮುಖ ಆಧಾರವಾಗಿರುವ ತತ್ವಗಳ ಅಂಗೀಕಾರ ಮತ್ತು ಪುನರುಚ್ಚರಣೆಯನ್ನು ಬೆಂಬಲಿಸದ ಕಾರಣ, ಸಚಿವರುಗಳಿಗೆ ಒಮ್ಮತದ ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ. ಕೈಬಿಡಲಾಗಿದೆ ಅಥವಾ ಬಹುಪಕ್ಷೀಯತೆಯ, ದೋಹಾ ಅಭಿವೃದ್ಧಿ ಕಾರ್ಯಕ್ರಮ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ವಿಶೇಷ ಮತ್ತು ವಿಭಿನ್ನವಾದ ಪ್ರಮುಖ ಸಮಸ್ಯೆಗಳನ್ನು ಸಮರ್ಪಕವಾಗಿ ಸೇರಿಸಿಕೊಳ್ಳಲು ವಿಫಲವಾಗಿದೆ ಎಂಬ ಹಿನ್ನೆಲೆಯಲ್ಲಿ ಭಾರತವು ಸಚಿವರ ಮಟ್ಟದ ಸಭೆಯ ನಿರ್ಣಯದ ಕರಡಿಗೆ ಬೆಂಬಲ ವ್ಯಕ್ತಪಡಿಸಿಲ್ಲ.

ಆದಾಗ್ಯೂ, ಬಹುಪಕ್ಷೀಯ ವಾಣಿಜ್ಯ ವ್ಯವಸ್ಥೆಗೆ ಮತ್ತು ಡಬ್ಲ್ಯುಟಿಓದ ವಿವಿಧ ಕಾರ್ಯ ಕ್ಷೇತ್ರಗಳ ನಿಲುವನ್ನು ಮುಂದೆ ತೆಗೆದುಕೊಂಡು ಹೋಗುವ ಬದ್ಧತೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಚಿವರುಗಳ ಮಟ್ಟದ ಸಭೆಯ ನಿರ್ಣಯದ ಅನುಪಸ್ಥಿತಿಯಲ್ಲೂ ಉಲ್ಲೇಖಾರ್ಹವಾದುದೆಂದರೆ, ಹಾಲಿ ಇರುವ ಆದೇಶಗಳು ಮತ್ತು ನಿರ್ಣಯಗಳು ಕೆಲಸ ಮುಂದುವರಿದುಕೊಂಡು ಹೋಗುವ ಖಾತ್ರಿ ಒದಗಿಸುತ್ತವೆ ಮತ್ತು ಸದಸ್ಯರು ಕೃಷಿ ಸಬ್ಸಿಡಿ ಮತ್ತು ಇತರ ವಿಚಾರಗಳಿಗೆ ಸಂಬಂಧಿಸಿದ  ಆಹಾರ ಭದ್ರತೆಯ ಉದ್ದೇಶಕ್ಕಾಗಿ ಸಾರ್ವಜನಿಕ ಹಿಡುವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶ್ರಮಿಸಲು ಅವಕಾಶ ಒದಗಿಸುತ್ತದೆ.

 ***



(Release ID: 1515434) Visitor Counter : 112


Read this release in: English