ಸಂಪುಟ

ಭಾರತ ಮತ್ತು ಮ್ಯಾನ್ಮಾರ್ ನಡುವೆ ಭೂಗಡಿ ದಾಟುವಿಕೆ ಕುರಿತ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 03 JAN 2018 2:41PM by PIB Bengaluru

ಭಾರತ ಮತ್ತು ಮ್ಯಾನ್ಮಾರ್ ನಡುವೆ ಭೂಗಡಿ ದಾಟುವಿಕೆ ಕುರಿತ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತ ಮತ್ತು ಮ್ಯಾನ್ಮಾರ್ ನಡುವೆ ಭೂ ಗಡಿ ದಾಟುವಿಕೆ ಕುರಿತ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

ಈ ಒಪ್ಪಂದವು ಎರಡೂ ರಾಷ್ಟ್ರಗಳ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಈಗಾಗಲೇ ಇರುವ ಚಲನವಲನದ ಹಕ್ಕನ್ನು ನಿಯಂತ್ರಿಸುತ್ತದೆ ಮತ್ತು ಸಾಮರಸ್ಯಗೊಳಿಸಲು ಅವಕಾಶ ನೀಡುತ್ತದೆ. ಜೊತೆಗೆ ಇದು ಎರಡೂ ದೇಶಗಳ ನಡುವೆ ಸಮಂಜಸವಾದ ಪಾಸ್ ಪೋರ್ಟ್ ಮತ್ತು ವೀಸಾ ಆಧಾರದ ಮೇಲೆ ಜನರ ಓಡಾಟಕ್ಕೂ ಅವಕಾಶ ನೀಡುತ್ತದೆ ಮತ್ತು  ಆರ್ಥಿಕ ಸಾಮಾಜಿಕ ಮಾತುಕತೆಯನ್ನೂ ಹೆಚ್ಚಿಸುತ್ತದೆ.

ಈ ಒಪ್ಪಂದವು ಭಾರತ- ಮ್ಯಾನ್ಮಾರ್ ಗಡಿಯಲ್ಲಿ ಜನರ ಸಂಚಾರಕ್ಕೆ ಅವಕಾಶ ನೀಡುವ ಒಪ್ಪಂದವಾಗಿದೆ. ಇದು ಮ್ಯಾನ್ಮಾರ್ ನೊಂದಿಗೆ ಭಾರತದ ಈಶಾನ್ಯ ರಾಜ್ಯಗಳ ಜನರ ಸಂಪರ್ಕ ಮತ್ತು ಸಂವಾದವನ್ನು ಹೆಚ್ಚಿಸುವ ನಿರೀಕ್ಷೆ ಇದೆ.

ಈ ಒಪ್ಪಂದವು ಈಶಾನ್ಯ ರಾಜ್ಯಗಳ ಆರ್ಥಿಕತೆಗೆ ಇಂಬು ನೀಡುತ್ತದೆ ಮತ್ತು ಮ್ಯಾನ್ಮಾರ್ ನೊಂದಿಗೆ ವಾಣಿಜ್ಯ ಮತ್ತು  ಜನರೊಂದಿಗಿನ ಸಂಪರ್ಕ ಉತ್ತೇಜಿಸಲು ನಮ್ಮ ಜನಸಂಖ್ಯೆಯನ್ನು ಬಳಕೆ ಮಾಡಲು ಅವಕಾಶ ಕಲ್ಪಿಸುತ್ತದೆ.

ಈ ಒಪ್ಪಂದವು ಗಡಿ ಗುಂಟಾ ಹೆಚ್ಚಾಗಿ ವಾಸಿಸುತ್ತಿರುವ ಗುಡ್ಡಗಾಡು ಸಮುದಾಯದ ಜನರು ಗಡಿಯಲ್ಲಿ ಮುಕ್ತ ಸಂಚಾರಕ್ಕೆ ಒಗ್ಗಿಕೊಂಡ ಸಾಂಪ್ರದಾಯಿಕ ಹಕ್ಕನ್ನು ರಕ್ಷಿಸುತ್ತದೆ.
***



(Release ID: 1515419) Visitor Counter : 86


Read this release in: English