ಸಂಪುಟ

ಭಾರತ ಮತ್ತು “ಟ್ರಾನ್ಸ್ ಪೋರ್ಟ್ ಫಾರ್ ಲಂಡನ್’ ನಡುವೆ ಎಂ.ಓ.ಯು.ಗೆ ಸಂಪುಟದ ಅನುಮೋದನೆ ಭಾರತದಲ್ಲಿ ಸಾರ್ವಜನಿಕ ಸಾರಿಗೆ ಸುಧಾರಣೆ ಮಾಡಲಿರುವ ಯುನೈಟೆಡ್ ಕಿಂಗ್ಡಮ್

प्रविष्टि तिथि: 03 JAN 2018 2:38PM by PIB Bengaluru

ಭಾರತ ಮತ್ತು “ಟ್ರಾನ್ಸ್ ಪೋರ್ಟ್ ಫಾರ್ ಲಂಡನ್’ ನಡುವೆ ಎಂ.ಓ.ಯು.ಗೆ ಸಂಪುಟದ ಅನುಮೋದನೆ

ಭಾರತದಲ್ಲಿ ಸಾರ್ವಜನಿಕ ಸಾರಿಗೆ ಸುಧಾರಣೆ ಮಾಡಲಿರುವ ಯುನೈಟೆಡ್ ಕಿಂಗ್ಡಮ್

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತದಲ್ಲಿ ಸಾರ್ವಜನಿಕ ಸಾರಿಗೆಯ ಸುಧಾರಣೆಗಾಗಿ ಬೃಹತ್ ಲಂಡನ್ ಪ್ರಾಧಿಕಾರ ಕಾಯಿದೆ 1999 (ಯುಕೆ) ಅಡಿಯಲ್ಲಿ ಸ್ಥಾಪಿಸಲಾಗಿರುವ ಶಾಸನಾತ್ಮಕ ಕಾಯ “ಟ್ರಾನ್ಸ್ ಪೋರ್ಟ್ ಫಾರ್ ಲಂಡನ್’ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಗಳ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಸಹಿ ಹಾಕಲು ಮತ್ತು ಅದನ್ನು ಅನುಷ್ಠಾನಗೊಳಿಸಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು  ದೇಶದಲ್ಲಿ ಒಟ್ಟಾರೆಯಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಣೆ ಮಾಡಲು, ಪ್ರಯಾಣಿಕರ ಸೇವೆಗಳನ್ನು ಉತ್ತಮ ಪಡಿಸಲು ಮತ್ತು ಹೆಚ್ಚಿನ ಸಾಮರ್ಥ್ಯದ ಬಸ್ ಗಳನ್ನು ಭಾರತದಲ್ಲಿ ಬಳಕೆ ಮಾಡಲು ನೆರವಾಗುತ್ತದೆ. ಇದು ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ನಡುವೆ ದ್ವಿಪಕ್ಷೀಯ ಸಹಕಾರ ಉತ್ತೇಜಿಸಲು ಮತ್ತು ಬಾಂಧವ್ಯವನ್ನು ದೀರ್ಘಕಾಲದವರೆಗೆ ಬಲಪಡಿಸಲಿದೆ.

ಈ ತಿಳಿವಳಿಕೆ ಒಪ್ಪಂದವು ಸರ್ವರಿಗಾಗಿ ಸಮಗ್ರ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ನೆರವಾಗುತ್ತದೆ. ಇದು ಸಮಾಜದ ಬಡ ಸಮುದಾಯದ ಜನರಿಗೆ ಗುಣಮಟ್ಟದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸೌಕರ್ಯ ಪಡೆಸಲು ನೆರವಾಗುತ್ತದೆ.

                            ***


(रिलीज़ आईडी: 1515415) आगंतुक पटल : 114
इस विज्ञप्ति को इन भाषाओं में पढ़ें: English