ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಗ್ರಾಹಕರ ದೂರು ಸಲ್ಲಿಸಲು Postinfo ಅಂಚೆ ಆಪ್ ನಲ್ಲಿ ಅವಕಾಶ.

Posted On: 02 JAN 2018 4:10PM by PIB Bengaluru

ಗ್ರಾಹಕರ ದೂರು ಸಲ್ಲಿಸಲು Postinfo  ಅಂಚೆ ಆಪ್ ನಲ್ಲಿ ಅವಕಾಶ.

ದೇಶದಾಧ್ಯಂತ ಸುಮಾರು 1.5 ಲಕ್ಷಕ್ಕೂ ಅಧಿಕ ಕಚೇರಿಗಳನ್ನು ಹೊಂದಿರುವ ಭಾರತೀಯ ಅಂಚೆ ಇಲಾಖೆ ವಿಶ್ವದ ಅತ್ಯಧಿಕ ವಿತರಣಾ ಸಂಪರ್ಕ ಹೊಂದಿರುವ ಅಂಚೆ ಸೇವೆಯಾಗಿದೆ. 11-05-2015 ರಲ್ಲಿ ಪ್ರಾರಂಭಗೊಂಡ ಅಂಚೆ ಇಲಾಖೆಯ Postinfo ಆಪ್ ಕಾಲಕ್ಕೆ ತಕ್ಕಂತೆ ಸಮಯಾಸಮಯದಲ್ಲಿ ಪರಿಷ್ಕೃತವಾಗುತ್ತಿದ್ದು, ಇಂದು ಅತ್ಯುತ್ತಮ ಗ್ರಾಹಕ ಸ್ನೇಹಿ ತಂತ್ರಜ್ಞಾನವಾಗಿ ಅಭಿವೃದ್ಧಿ ಹೊಂದಿದೆ.

Postinfo ಆಪ್ ನಲ್ಲಿ ಅಂಚೆ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳೂ ಲಭ್ಯ. ಅಂಚೆ ಸೇವೆಗಳ, ವಿಮಾ ಕಂತುಗಳ ಹಾಗೂ ಇತರ ಸಾಮಾನ್ಯ ಸೇವೆಗಳೆಲ್ಲದರ ಮಾಹಿತಿಗಳ ಜೊತೆಯಲ್ಲಿ, ಗ್ರಾಹಕ ಸೇವಾ ಕೇಂದ್ರಗಳ ಮಾಹಿತಿ ಕೂಡಾ Postinfo  ಆಪ್ ನಲ್ಲಿ ಸೇರಿಸಲಾಗಿದೆ.

ಗ್ರಾಹಕರು ತಮ್ಮು ದೂರು-ಸಮಸ್ಯೆಗಳನ್ನು ಸಲ್ಲಿಸಲು ಆಪ್ ನಲ್ಲಿ ಅವಕಾಶವಿದೆ. ಅಂಚೆ ಇಲಾಖೆಯು ಗ್ರಾಹಕ ಅನುಕೂಲಕ್ಕಾಗಿ ಲಭ್ಯ ಸರ್ವ ಅವಕಾಶಗಳನ್ನೂ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಸಕಾರಾತ್ಮಕವಾಗಿ ಅಭಿವೃದ್ಧಿ ಪಡಿಸಿ ಕೋಟ್ಯಾಂತರ ಗ್ರಾಹಕರ ಮನಗೆದ್ದಿದೆ. ಅಧಿಕ ಮಾಹಿತಿಗಾಗಿ ತಮ್ಮ ಸ್ಮಾರ್ಟ್ ಫೋನ್ ನಲ್ಲಿ Postinfo  ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಹಾಗೂ ಜಾಲತಾಣ www.indiapost.gov.in ಅನ್ನು  ಸಂದರ್ಶಿಸಬಹುದು.

 


(Release ID: 1515024) Visitor Counter : 122


Read this release in: English