ಪ್ರಧಾನ ಮಂತ್ರಿಯವರ ಕಛೇರಿ

ಬಹು ಭಾಷೆಯ ಪಿಎಂ ಇಂಡಿಯಾ ಅಂತರ್ಜಾಲ ತಾಣ ಈಗ 13 ಭಾಷೆಗಳಲ್ಲಿ ಲಭ್ಯ ಪ್ರಧಾನಮಂತ್ರಿಯವರ ಅಧಿಕೃತ ಅಂತರ್ಜಾಲ ತಾಣದ ಅಸ್ಸಾಮಿ ಮತ್ತು ಮಣಿಪುರ ಆವೃತ್ತಿಯ ಉದ್ಘಾಟನೆ

Posted On: 01 JAN 2018 2:14PM by PIB Bengaluru

ಬಹು ಭಾಷೆಯ ಪಿಎಂ ಇಂಡಿಯಾ ಅಂತರ್ಜಾಲ ತಾಣ ಈಗ 13 ಭಾಷೆಗಳಲ್ಲಿ ಲಭ್ಯ 

ಪ್ರಧಾನಮಂತ್ರಿಯವರ ಅಧಿಕೃತ ಅಂತರ್ಜಾಲ ತಾಣದ ಅಸ್ಸಾಮಿ ಮತ್ತು ಮಣಿಪುರ ಆವೃತ್ತಿಯ ಉದ್ಘಾಟನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧಿಕೃತ ಅಂತರ್ಜಾಲ ತಾಣ www.pmindia.gov.in ನ ಅಸ್ಸಾಮಿ ಮತ್ತು ಮಣಿಪುರಿ ಭಾಷೆಗಳ ಆವೃತ್ತಿಗಳನ್ನು ಇಂದು ಉದ್ಘಾಟಿಸಲಾಗಿದೆ. ಈ ಎರಡು ರಾಜ್ಯಗಳ ಜನರ ಮನವಿಯ ಮೇರೆಗೆ ಈ ಅಂತರ್ಜಾಲ ತಾಣವನ್ನು ಈಗ ಅಸ್ಸಾಮಿ ಮತ್ತು ಮಣಿಪುರಿ ಭಾಷೆಯಲ್ಲಿ ನೋಡಲು ಅವಕಾಶ ಕಲ್ಪಿಸಲಾಗಿದೆ.

ಇಂದು ಎರಡು ಭಾಷೆಗಳ ಆವೃತ್ತಿ ಉದ್ಘಾಟನೆಯೊಂದಿಗೆ  PMINDIA ಅಂತರ್ಜಾಲ ತಾಣ 11 ಪ್ರಾದೇಶಿಕ ಭಾಷೆಯಲ್ಲಿ ಅಂದರೆ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲೆಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು ಮತ್ತು ತೆಲುಗಿನ ಜೊತೆಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲೂ ಲಭ್ಯವಾದಂತಾಗಿದೆ.

ಈ ಹನ್ನೊಂದು ಪ್ರಾದೇಶಿಕ ಭಾಷೆಯ ವೆಬ್ ತಾಣಗಳನ್ನು ಈ ಕೆಳಗಿನ ಲಿಂಕ್ ಮೂಲಕ ತೆರೆಯಬಹುದಾಗಿದೆ:

 

Assamese: http://www.pmindia.gov.in/asm/

Bengali: http://www.pmindia.gov.in/bn/

Gujarati: http://www.pmindia.gov.in/gu/

Kannada: http://www.pmindia.gov.in/kn/

Marathi: http://www.pmindia.gov.in/mr/

Malayalam: http://www.pmindia.gov.in/ml/

Manipuri: http://www.pmindia.gov.in/mni/

Odia: http://www.pmindia.gov.in/ory/

Punjabi: http://www.pmindia.gov.in/pa/

Tamil: http://www.pmindia.gov.in/ta/

Telugu: http://www.pmindia.gov.in/te/

 

ಈ ಉಪಕ್ರಮವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ  ಅವರು ಜನರನ್ನು ತಲುಪುವ ಮತ್ತು ಅವರೊಂದಿಗೆ ಅವರದೇ ಭಾಷೆಯಲ್ಲಿ ಸಂಪರ್ಕ ಸಾಧಿಸುವ ಪ್ರಯತ್ನದ ಭಾಗವಾಗಿದೆ. ಇದು ದೇಶದ ಎಲ್ಲ ಭಾಗಗಳ ಜನರೊಂದಿಗೆ ಅವರ ಕಲ್ಯಾಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತಂತೆ ಪ್ರಧಾನಮಂತ್ರಿಯವರೊಂದಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ

*****.


(Release ID: 1514943) Visitor Counter : 162


Read this release in: English