ಸಂಪುಟ

ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕ್ಯೂಬಾ ನಡುವೆ ಎಂ.ಓ.ಯು.ಗೆ. ಸಂಪುಟದ ಅನುಮೋದನೆ

Posted On: 20 DEC 2017 7:45PM by PIB Bengaluru

ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕ್ಯೂಬಾ ನಡುವೆ ಎಂ.ಓ.ಯು.ಗೆ. ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕ್ಯೂಬಾ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಡಿಸೆಂಬರ್ 6ರಂದು ನವದೆಹಲಿಯಲ್ಲಿ ಅಂಕಿತ ಹಾಕಲಾಗಿತ್ತು.

ಈ ತಿಳಿವಳಿಕೆ ಒಪ್ಪಂದವು ಈ ಕೆಳಗಿನ ಕ್ಷೇತ್ರಗಳಲ್ಲಿನ ಸಹಕಾರವನ್ನು ಒಳಗೊಂಡಿದೆ:-

1.     ವೈದ್ಯರು, ವೈದ್ಯಾಧಿಕಾರಿಗಳು, ಇತರ ಆರೋಗ್ಯ ವೃತ್ತಿಪರರು ಹಾಗೂ ತಜ್ಞರ ವಿನಿಮಯ ಮತ್ತು ತರಬೇತಿ;

2.     ಆರೋಗ್ಯ ಸೇವೆಗಳು, ಆರೋಗ್ಯ ಸೇವೆಯ ಸೌಲಭ್ಯ ಸ್ಥಾಪನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನೆರವು;

3.     ಆರೋಗ್ಯ ಕ್ಷೇತ್ರದ ಮಾನವ ಸಂಪನ್ಮೂಲದ ಅಲ್ಪಾವಧಿ ತರಭೇತಿ;

4.     ಔಷಧ ಸಂಸ್ಥೆಗಳ, ವೈದ್ಯಕೀಯ ಸಲಕರಣೆಗಳ ನಿಯಂತ್ರಣ ಮತ್ತು ಮಾಹಿತಿಯ ವಿನಿಮಯ;

5.     ಔಷಧ ವ್ಯಾಪಾರ ಮತ್ತು ಪಕ್ಷಕಾರರು ಗುರುತಿಸುವ ಇತರ ಅವಕಾಶಗಳನ್ನು ಉತ್ತೇಜಿಸುವುದು;

6.     ಜೆನರಿಕ್ ಮತ್ತು ಅಗತ್ಯ ಔಷಧಗಳ ದಾಸ್ತಾನು ಮತ್ತು ಔಷಧ ಪೂರೈಕೆಯ ಶೋಧದಲ್ಲಿ ಸಹಕಾರ;

7.     ಆರೋಗ್ಯ ಸಾಧನಗಳು ಮತ್ತು ಔಷಧ ಉತ್ಪನ್ನಗಳ ದಾಸ್ತಾನು;

8.     ಪರಸ್ಪರರು ಒಪ್ಪಿಗೆಯಿಂದ ಸಮ್ಮತಿಸುವ ಯಾವುದೇ ಇತರ ಕ್ಷೇತ್ರ.

ಸಹಕಾರದ ವಿವರಗಳನ್ನು ಹೆಚ್ಚು ವಿಸ್ತೃತಗೊಳಿಸಲು ಮತ್ತು ಎಂ.ಓ.ಯು. ಜಾರಿಯ ಉಸ್ತುವಾರಿಗೆ ಜಂಟಿ ಕಾರ್ಯ ಪಡೆ (ಜೆಡಬ್ಲ್ಯುಜಿ) ಸ್ಥಾಪಿಸಲಾಗುತ್ತದೆ.

***


(Release ID: 1513550) Visitor Counter : 112


Read this release in: English