ಸಂಪುಟ

ಆರೋಗ್ಯ ಮತ್ತು ವೈದ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಇಟಲಿ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 20 DEC 2017 7:47PM by PIB Bengaluru

ಆರೋಗ್ಯ ಮತ್ತು ವೈದ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಇಟಲಿ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರೋಗ್ಯ ಮತ್ತು ವೈದ್ಯವಿಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಇಟಲಿ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ನವೆಂಬರ್ 29ರಂದು ನವದೆಹಲಿಯಲ್ಲಿ ಅಂಕಿತ ಹಾಕಲಾಗಿತ್ತು.

ಈ ತಿಳಿವಳಿಕೆ ಒಪ್ಪಂದವು ಈ ಕೆಳಗಿನ ಕ್ಷೇತ್ರಗಳ ಸಹಕಾರವನ್ನು ಒಳಗೊಂಡಿದೆ:-

1.      ವೈದ್ಯರು, ವೈದ್ಯಾಧಿಕಾರಿಗಳು, ಇತರ ಆರೋಗ್ಯ ವೃತ್ತಿಪರರು ಹಾಗೂ ತಜ್ಞರ ವಿನಿಮಯ ಮತ್ತು ತರಬೇತಿ;

2.     ಆರೋಗ್ಯ ಸೇವೆಗಳು, ಆರೋಗ್ಯ ರಕ್ಷಣೆಯ ಸೌಲಭ್ಯ ಸ್ಥಾಪನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನೆರವು;

3.     ಆರೋಗ್ಯ ಕ್ಷೇತ್ರದ ಮಾನವ ಸಂಪನ್ಮೂಲದ ಅಲ್ಪಾವಧಿ ತರಬೇತಿ;

4.     ಔಷಧ ಸಂಸ್ಥೆಗಳ, ವೈದ್ಯಕೀಯ ಸಲಕರಣೆಗಳ ಮತ್ತು ಪ್ರಸಾದನಗಳ ನಿಯಂತ್ರಣ ಮತ್ತು ಅದರ ಮೇಲಿನ ಮಾಹಿತಿಯ ವಿನಿಮಯ;

5.     ಔಷಧ ವ್ಯಾಪಾರ ಅಭಿವೃದ್ಧಿಯ  ಅವಕಾಶಗಳ ಉತ್ತೇಜನ;

6.     ಜೆನರಿಕ್ ಮತ್ತು ಅಗತ್ಯ ಔಷಧಗಳ ದಾಸ್ತಾನು ಮತ್ತು ಔಷಧ ಪೂರೈಕೆಯ ಶೋಧದಲ್ಲಿ ಸಹಕಾರ;

7.     ಆರೋಗ್ಯ ಸಾಧನಗಳು ಮತ್ತು ಔಷಧ ಉತ್ಪನ್ನಗಳ ದಾಸ್ತಾನು;

8.     ಪರಸ್ಪರ ಆಸಕ್ತಿಯ ಎನ್.ಸಿ.ಡಿ.ಗಳ, ಅಂದರೆ ಎಸ್.ಡಿ.ಜಿ3 ಮತ್ತು ಸಂಬಂಧಿತ ಅಂಶಗಳ ಮೇಲೆ ಮಹತ್ವ ಹೊಂದಿರುವ ನ್ಯೂರೋಕಾರ್ಡಿಯೋವಾಸ್ಕ್ಯೂಲರ್ ಕಾಯಿಲೆಗಳು, ಕ್ಯಾನ್ಸರ್, ಸಿಓಪಿಡಿಗಳು, ಮಾನಸಿಕ ಆರೋಗ್ಯ ಮತ್ತು ಬುದ್ಧಿಮಾಂದ್ಯತೆ ತಡೆಗೆ ಸಹಯೋಗ;

9.     ಸಾಂಕ್ರಾಮಿಕ ರೋಗಗಳು ಮತ್ತು ಗಾಳಿಯಿಂದ ಹರಡುವ ರೋಗಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದ ಕ್ಷೇತ್ರದಲ್ಲಿನ ಸಹಯೋಗ;

10.                        ಸಿಡಿಜಿ2 ಮತ್ತು ಪೌಷ್ಟಿಕತೆ ಸೇವೆಗಳ ಸಂಘಟನೆಯ ನಿಟ್ಟಿನಲ್ಲಿ ಅಪೌಷ್ಟಿಕತೆ ಸೇರಿದಂತೆ (ಹೆಚ್ಚಿನ ಪೌಷ್ಟಿಕತೆ ಮತ್ತು ಕುಪೋಷಣೆ) ಸ್ವೀಕರಿಸುವ ಆಹಾರದ ಪೌಷ್ಟಿಕತೆಯ ಅಂಶಗಳು;

11.                          ಉತ್ಪಾದನೆ, ಪರಿವರ್ತನೆ, ವಿತರಣೆ ಮತ್ತು ಆಹಾರ ಸರಬರಾಜಿನ ಸುರಕ್ಷತೆ;

12.                        ಆಹಾರ ಕೈಗಾರಿಕೆ ನಿರ್ವಾಹಕರ ತರಭೇತಿ ಮತ್ತು ಸಂಶೋಧನೆ;

13.                        ಸ್ವಚ್ಛತೆ ಮತ್ತು ಆಹಾರ ಸುರಕ್ಷತೆ ಮತ್ತು ಆರೋಗ್ಯಪೂರ್ಣ ಆಹಾರ ಸೇವನೆ ಹವ್ಯಾಸಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ಸಂವಹನ; ಹಾಗೂ

14.                        ಪರಸ್ಪರರು ಒಪ್ಪಿಗೆಯಿಂದ ಸಮ್ಮತಿಸುವ ಯಾವುದೇ ಇತರ ಕ್ಷೇತ್ರ.

ಸಹಕಾರದ ವಿವರಗಳನ್ನು ಹೆಚ್ಚು ವಿಸ್ತೃತಗೊಳಿಸಲು ಮತ್ತು ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಜಾರಿಯ ಉಸ್ತುವಾರಿಗೆ ಜಂಟಿ ಕಾರ್ಯ ಪಡೆ (ಜೆಡಬ್ಲ್ಯುಜಿ) ಸ್ಥಾಪಿಸಲಾಗುತ್ತದೆ.

****



(Release ID: 1513548) Visitor Counter : 104


Read this release in: English