ಪ್ರಧಾನ ಮಂತ್ರಿಯವರ ಕಛೇರಿ
ನಾಳೆ ಮಿಜೋರಾಂ ಮತ್ತು ಮೇಘಾಲಯಕ್ಕೆ ಭೇಟಿ ನೀಡಲಿರುವ ಪ್ರಧಾನಿ; ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ
Posted On:
15 DEC 2017 3:26PM by PIB Bengaluru
ನಾಳೆ ಮಿಜೋರಾಂ ಮತ್ತು ಮೇಘಾಲಯಕ್ಕೆ ಭೇಟಿ ನೀಡಲಿರುವ ಪ್ರಧಾನಿ; ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಮಿಜೋರಾಂ ಮತ್ತು ಮೇಘಾಲಯಗಳಿಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
“ಮೋಡಿ ಮಾಡುವ ಮತ್ತು ಪುಟಿದೇಳಿಸುವ ಈಶಾನ್ಯ ಕರೆಗಳು! ನಾಳೆ ಮಿಜೋರಾಮ್ ಮತ್ತು ಮೇಘಾಲಯಕ್ಕೆ ಭೇಟಿ ನೀಡುವುದನ್ನು ಎದಿರುನೋಡುವಂತೆ ಮಾಡಿವೆ, ಅಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗುವುದು. ಈ ಯೋಜನೆಗಳು ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಪಯಣಕ್ಕೆ ಮತ್ತಷ್ಟು ಇಂಬು ನೀಡುತ್ತವೆ.
ಐಜ್ವಾಲ್ ನಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ತುಯ್ರಿಯಾಲ್ ಜಲ ವಿದ್ಯುತ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಈ ಯೋಜನೆ ಪೂರ್ಣಗೊಂಡಿರುವುದು ಮಿಜೋರಾಂ ಜನರಿಗೆ ವರದಾನವಾಗಿದೆ.
ನಮ್ಮ ಯುವ ಶಕ್ತಿಗೆ ರೆಕ್ಕೆ ನೀಡಲು ಡೋನರ್ ಎಂಬ ಹೆಸರಿನಲ್ಲಿ 100 ಕೋಟಿ ರೂಪಾಯಿಗಳ ಈಶಾನ್ಯ ಪ್ರಯತ್ನಶೀಲ ಬಂಡವಾಳ ನಿಧಿಯನ್ನು ಸ್ಥಾಪಿಸಲಾಗಿದೆ. ನಾನು ನಾಳೆ ಉದ್ಯಮಶೀಲರಿಗೆ ಚೆಕ್ ಗಳನ್ನು ವಿತರಿಸಲಿದ್ದೇನೆ. ವಲಯದ ಸಬಲೀಕರಣಕ್ಕಾಗಿ ಈಶಾನ್ಯದ ಯುವಕರಲ್ಲಿ ಉದ್ಯಮದ ಒಂದು ಉತ್ಸಾಹವು ಮೂಡುತ್ತದೆ.
ಶಿಲ್ಲಾಂಗ್ ನಲ್ಲಿ ನಾನು ಶಿಲ್ಲಾಂಗ್-ನೊಂಗ್ಸ್ಟೊಯಿನ್-ರೊಂಗ್ಜೆಂಗ್-ತುರಾ ರಸ್ತೆಯನ್ನು ಉದ್ಘಾಟಿಸಲಿದ್ದೇನೆ. ಈ ಯೋಜನೆಯು ಸಂಪರ್ಕವನ್ನು ಮತ್ತು ಆರ್ಥಿಕತೆಯನ್ನು ಇನ್ನಷ್ಟು ಸುಧಾರಿಸುತ್ತದೆ. ನಾನು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದೇನೆ.
ನಾವು ಈಶಾನ್ಯದಲ್ಲಿ ಅಸಾಧಾರಣವಾದ ಸಾಮರ್ಥ್ಯವನ್ನು ಕಾಣಬಹುದಾಗಿದೆ ಮತ್ತು ಅವರು ತಮ್ಮ ವಲಯದ ಒಟ್ಟಾರೆ ಪ್ರಗತಿಗಾಗಿ ಎಲ್ಲವನ್ನೂ ಮಾಡಲು ಬದ್ಧರಾಗಿದ್ದಾರೆ”, ಎಂದು ಪ್ರಧಾನಿ ಹೇಳಿದ್ದಾರೆ.
***
(Release ID: 1513007)
Visitor Counter : 95