ಆಯುಷ್

ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಆಯುಷ್ ಮಿಷನ್ (ನಾಮ್) ಅನ್ನು 01.04.2017 ರಿಂದ 31.03.2020ರವರೆಗೆ ಮುಂದುವರಿಸಲು ಸಂಪುಟದ ಅನುಮೋದನೆ

Posted On: 15 DEC 2017 3:34PM by PIB Bengaluru

ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಆಯುಷ್ ಮಿಷನ್ (ನಾಮ್) ಅನ್ನು 01.04.2017 ರಿಂದ 31.03.2020ರವರೆಗೆ ಮುಂದುವರಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2400 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಆಯುಷ್ ಅಭಿಯಾನ (ನಾಮ್) ಅನ್ನು 01.04.2017 ರಿಂದ 31.03.2020ರವರೆಗೆ ಮೂರು ವರ್ಷಗಳ ಅವಧಿಗೆ ಮುಂದುವರಿಸಲು ತನ್ನ ಅನುಮೋದನೆ ನೀಡಿದೆ. ಈ ಅಭಿಯಾನವನ್ನು 2014ರ ಸೆಪ್ಟೆಂಬರ್ ನಲ್ಲಿ ಆರಂಭಿಸಲಾಗಿತ್ತು.

ವೈಶಿಷ್ಟ್ಯಗಳು: 
ಕಡಿಮೆ ವೆಚ್ಚದಲ್ಲಿ ಆಯುಷ್ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಆಯುಷ್ ಸಚಿವಾಲಯವು ಸಾರ್ವತ್ರಿಕ ಪ್ರವೇಶದೊಂದಿಗೆ ನಾಮ್ ಅನ್ನು ಅನುಷ್ಠಾನಕ್ಕೆ ತಂದಿದೆ. ಇದು ಇತರ ವಿಷಯಗಳನ್ನೂ ಒಳಗೊಂಡಿದೆ –

·        ಆಯುಷ್ ಆಸ್ಪತ್ರೆಗಳನ್ನು ಮತ್ತು ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೇರಿಸುವುದು,

·        ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್.ಸಿ.), ಸಮುದಾಯ ಆರೋಗ್ಯ ಕೇಂದ್ರ(ಸಿಎಚ್.ಸಿ) ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಆಯುಷ್ ಸೌಲಭ್ಯವನ್ನೂ ಕಲ್ಪಿಸುವುದು,

·        ಆಯುಷ್ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಸರ್ಕಾರ, ಎ.ಎಸ್.ಯು ಮತ್ತು ಎಚ್ ಔಷಧ ಮಳಿಗೆಗಳನ್ನು ನವೀಕರಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸುವುದು.

·        ಔಷಧ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಎ.ಎಸ್.ಯು. ಮತ್ತು ಎಚ್ ಜಾರಿ ವ್ಯವಸ್ಥೆ,

·        ಸುಸ್ಥಿರ ಗುಣಮಟ್ಟದ ಕಚ್ಚಾ ಸಾಮಗ್ರಿಗಳ ಪೂರೈಕೆಗಾಗಿ ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಔಷಧ ಸಸ್ಯಗಳ ಕೃಷಿಗೆ ಬೆಂಬಲ ನೀಡುವುದು ಮತ್ತು ಔಷಧ ಸಸ್ಯಗಳ ದಾಸ್ತಾನು ಮತ್ತು ಮಾರುಕಟ್ಟೆಗಾಗಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು.

ಆಯುಷ್ ಆರೋಗ್ಯ ಸೇವೆ/ಶಿಕ್ಷಣ ಒದಗಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ಪ್ರಯತ್ನಗಳಿಗೆ ಬೆಂಬಲ ನೀಡುವ ಮೂಲಕ ದೇಶದಲ್ಲಿ ಅದರಲ್ಲೂ ಅತಿ ಸೂಕ್ಷ್ಮ ಮತ್ತು ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಯಲ್ಲಿನ ಕಂದಕವನ್ನು ನಾಮ್ ನಿವಾರಿಸುತ್ತಿದೆ. ನಾಮ್ ಅಡಿಯಲ್ಲಿ ಅಂಥ ಕ್ಷೇತ್ರಗಳ ನಿರ್ದಿಷ್ಟ ಅಗತ್ಯಗಳಿಗೆ ಮತ್ತು ತಮ್ಮ ವಾರ್ಷಿಕ ಯೋಜನೆಯಲ್ಲಿ ಉನ್ನತ ಸಂಪನ್ಮೂಲಗಳಿಗೆ ಹೆಚ್ಚಿನ ಹಂಚಿಕೆ ಮಾಡಲು ವಿಶೇಷ ಒತ್ತು ನೀಡಲಾಗುತ್ತಿದೆ.

ಈ ಅಭಿಯಾನದ ನಿರೀಕ್ಷಿತ ಫಲಶ್ರುತಿ ಈ ಕೆಳಗಿನಂತಿದೆ: 

     i.            ಆಯುಷ್ ಸೇವೆ ಒದಗಿಸುವ ಆರೋಗ್ಯ ಸೇವೆಗಳ ಸೌಲಭ್ಯಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಆಯುಷ್ ಆರೋಗ್ಯ ಸೇವೆಗಳ ಉತ್ತಮ ಲಭ್ಯತೆ ಮತ್ತು ಔಷಧಗಳ ಮತ್ತು ಮಾನವ ಸಂಪನ್ಮೂಲದ ಲಭ್ಯತೆ.

  ii.            ಆಯುಷ್ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಿಸುವ ಮೂಲಕ ಆಯುಷ್ ಶಿಕ್ಷಣದ ಸುಧಾರಣೆ.

iii.            ಕಠಿಣ ಜಾರಿ ಕಾರ್ಯವಿಧಾನವೂ ಸೇರಿದಂತೆ ಗುಣಮಟ್ಟದ ಔಷಧ ಮಳಿಗೆಗಳ ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡುವ ಮೂಲಕ ಗುಣಮಟ್ಟದ ಆಯುಷ್ ಔಷಧಗಳ ಲಭ್ಯತೆಯಲ್ಲಿನ ಸುಧಾರಣೆ.

iv.            ಯೋಗಾ ಮತ್ತು ಪ್ರಕೃತಿ ಚಿಕಿತ್ಸೆಯನ್ನು ರೋಗತಡೆ ವಿಧಾನದ ಆರೋಗ್ಯ ವ್ಯವಸ್ಥೆಯಾಗಿ ಅಂಗೀಕರಿಸುವ ಕುರಿತು ಜಾಗೃತಿ ಹೆಚ್ಚಿಸುವುದು.

  v.            ಗಿಡಮೂಲಿಕೆಯ ಕಚ್ಚಾ ಸಾಮಗ್ರಿಗಳ ಹೆಚ್ಚುತ್ತಿರುವ ದೇಶೀಯ ಬೇಡಿಕೆಯನ್ನು ಪೂರೈಸಲು ಮತ್ತು ರಫ್ತು ಉತ್ತೇಜಿಸಲು.

ಹಿನ್ನೆಲೆ: 

ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿ (ಎ.ಎಸ್.ಯು ಮತ್ತು ಎಚ್) ಯಂತಹ ಪ್ರಾಚೀನ ವೈದ್ಯ ಪದ್ಧತಿಯ ಮೂಲಕ ಪ್ರತಿನಿಧಿಸಲ್ಪಟ್ಟಿರುವ ಭಾರತದ ಅನುಪಮ ಪರಂಪರೆಯ ಮೇಲೆ ರೋಗ ತಡೆಗಟ್ಟುವ ಮತ್ತು ಉತ್ತೇಜಕ ಆರೋಗ್ಯ ರಕ್ಷಣೆಗಾಗಿ ಜ್ಞಾನದ ನಿಧಿಯಾಗಿ ನಿರ್ಮಾಣ ಮಾಡುವ ಉದ್ದೇಶವನ್ನು ರಾಷ್ಟ್ರೀಯ ಆಯುಷ್ ಅಭಿಯಾನ ಹೊಂದಿದೆ. ಭಾರತೀಯ ವೈದ್ಯ ಪದ್ಧತಿಗಳ ಧನಾತ್ಮಕ ವೈಶಿಷ್ಟ್ಯಗಳು ಅದರ ವೈವಿಧ್ಯತೆ ಮತ್ತು ನಮ್ಯತೆ; ಲಭ್ಯತೆ; ಕೈಗೆಟಕುವ ದರ, ದೊಡ್ಡ ಸಂಖ್ಯೆಯ ಸಾರ್ವಜನಿಕರ ವಿಸ್ತೃತ ಅಂಗೀಕಾರ, ತುಲನಾತ್ಮಕವಾಗಿ ಅತ್ಯಂತ ಕಡಿಮೆ ವೆಚ್ಚ ಮತ್ತು ಹೆಚ್ಚುತ್ತಿರುವ ಆರ್ಥಿಕ ಮೌಲ್ಯವಾಗಿದ್ದು, ದೊಡ್ಡ ವರ್ಗದ ಜನರ ಅಗತ್ಯವಾಗಿರುವ ಆರೋಗ್ಯ ರಕ್ಷಣೆಯಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ.

*****


(Release ID: 1513002) Visitor Counter : 96


Read this release in: English