ಪ್ರಧಾನ ಮಂತ್ರಿಯವರ ಕಛೇರಿ

ಸಿಂಗಾಪೂರದ ಗೌರವಾನ್ವಿತ ಹಿರಿಯ ಸಚಿವ ಶ್ರೀ ಗೋಹ್ ಚೋಕ್ ಟಾಂಗ್ ರಿಂದ ಪ್ರಧಾನಿ ಭೇಟಿ

Posted On: 13 DEC 2017 8:07PM by PIB Bengaluru

ಸಿಂಗಾಪೂರದ ಗೌರವಾನ್ವಿತ ಹಿರಿಯ ಸಚಿವ ಶ್ರೀ ಗೋಹ್ ಚೋಕ್ ಟಾಂಗ್ ರಿಂದ ಪ್ರಧಾನಿ ಭೇಟಿ 
 

ಸಿಂಗಾಪೂರದ ಗೌರವಾನ್ವಿತ ಹಿರಿಯ ಸಚಿವ ಶ್ರೀ. ಗೋಹ್ ಚೋಕ್ ಟಾಂಗ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. 

ಪ್ರಧಾನಮಂತ್ರಿಯವರು ತಮ್ಮ ದೀರ್ಘಕಾಲೀನ ಸಂಪರ್ಕವನ್ನು ಸ್ಮರಿಸಿದರು ಮತ್ತು ಈ ವರ್ಷದ ಆರಂಭದಲ್ಲಿ ಲೀ ಕೂವಾನ್ ಯೇವ್ ಸಾರ್ವಜನಿಕ ನೀತಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಗೋಹ್ ಚೋಕ್ ಟಾಂಗ್ ಅವರನ್ನು ಅಭಿನಂದಿಸಿದರು.

ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಸಿಂಗಪುರ್ ನಡುವಿನ ಹಲವಾರು ಉನ್ನತ ಮಟ್ಟದ ಭೇಟಿಗಳ ವಿನಿಮಯದಿಂದ ಪ್ರೇರಿತವಾದ ಆವೇಗವನ್ನು ಪ್ರಧಾನಿ ಸ್ವಾಗತಿಸಿದರು ಮತ್ತು ವಾಣಿಜ್ಯ ಮತ್ತು ಹೂಡಿಕೆ, ಸಂಪರ್ಕ, ರಕ್ಷಣೆ ಹಾಗೂ ಭದ್ರತೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವುದನ್ನು ಶ್ಲಾಘಿಸಿದರು. 

ಭಾರತ – ಆಸಿಯಾನ್ ಬಾಂಧವ್ಯದ ಬಲವಾದ ಬುನಾದಿಯ ಮೇಲೆ ನಿರ್ಮಿಸಲಾದ ಭಾರತದ ಪೂರ್ವದತ್ತ ಕ್ರಮ ನೀತಿಯಲ್ಲಿ ಸಿಂಗಾಪೂರಕ್ಕೆ ವಿಶೇಷ ಸ್ಥಾನವಿದೆ ಎಂದು ಪ್ರಧಾನಿ ಹೇಳಿದರು. ಭಾರತದೊಂದಿಗಿನ ಆಸಿಯಾನ್ ನ ಕಾರ್ಯಕ್ರಮಕ್ಕೆ ಬಲವಾದ ಮತ್ತು ಮುಂಚಿತ ಸಮರ್ಥಕರೆಂಬ ಗೌರವವನ್ನು ಶ್ರೀ ಗೋಹ್ ಚೋಕ್ ಟಾಂಗ್ ರಿಗೆ ಪ್ರಧಾನಿ ನೀಡಿದರು.

ಇಬ್ಬರೂ ನಾಯಕರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು.



(Release ID: 1512584) Visitor Counter : 67


Read this release in: English