ಪ್ರಧಾನ ಮಂತ್ರಿಯವರ ಕಛೇರಿ

ನೌಕಾ ಜಲಾಂತರ್ಗಾಮಿ ಐ.ಎನ್.ಎಸ್. ಕಲ್ವಾರಿಯನ್ನು ನಾಳೆ ದೇಶಕ್ಕೆ ಸಮರ್ಪಿಸಲಿರುವ ಪ್ರಧಾನಿ

Posted On: 13 DEC 2017 2:25PM by PIB Bengaluru

ನೌಕಾ ಜಲಾಂತರ್ಗಾಮಿ ಐ.ಎನ್.ಎಸ್. ಕಲ್ವಾರಿಯನ್ನು ನಾಳೆ ದೇಶಕ್ಕೆ ಸಮರ್ಪಿಸಲಿರುವ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬೈನಲ್ಲಿ ಗುರುವಾರ ಐ.ಎನ್.ಎಸ್. ಕಲ್ವಾರಿ ಜಲಾಂತರ್ಗಾಮಿಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಐ.ಎನ್.ಎಸ್. ಕಲ್ವಾರಿ ಡೀಸೆಲ್ – ಎಲೆಕ್ಟ್ರಿಕ್ ದಾಳಿಯ ಜಲಾಂತರ್ಗಾಮಿಯಾಗಿದ್ದು ಇದನ್ನು ಮಜಗಾಂ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ಭಾರತೀಯ ನೌಕಾಪಡೆಗಾಗಿಯೇ ನಿರ್ಮಾಣ ಮಾಡಿದೆ. ಇಂಥ ಆರು ಜಲಾಂತರ್ಗಾಮಿಗಳ ಪೈಕಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿರುವ ಮೊದಲನೆಯದಾಗಿದೆ ಮತ್ತು ಇದು ಮೇಕ್ ಇನ್ ಇಂಡಿಯಾ ಉಪಕ್ರಮದ ಗಣನೀಯ ಯಶಸ್ಸನ್ನು ಪ್ರತಿನಿಧಿಸುತ್ತದೆ. ಈ ಯೋಜನೆಯನ್ನು ಫ್ರೆಂಚ್ ಸಹಯೋಗದಲ್ಲಿ ಕೈಗೊಳ್ಳಲಾಗಿತ್ತು.

ರಕ್ಷಣಾ ಸಚಿವರು, ಮಹಾರಾಷ್ಟ್ರ ಸರ್ಕಾರದ ಪ್ರಮುಖ ಗಣ್ಯರು ಮತ್ತು ಹಿರಿಯ ನೌಕಾ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಧಾನಮಂತ್ರಿಯವರು ಈ ಜಲಾಂತರ್ಗಾಮಿಯನ್ನು ನೌಕಾ ಹಡಗುಕಟ್ಟೆಯಲ್ಲಿ ದೇಶಕ್ಕೆ ಸಮರ್ಪಿಸಲಿದ್ದಾರೆ. ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ, ಜಲಾಂತರ್ಗಾಮಿಯ ವೀಕ್ಷಣೆ ಮಾಡಲಿದ್ದಾರೆ. 
***



(Release ID: 1512470) Visitor Counter : 76


Read this release in: English