ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ನೂತನ ಚಿಹ್ನೆ ಮತ್ತು ಘೋಷವಾಕ್ಯ ರಚನಾ ಸ್ಪರ್ಧೆ ರೂ 1 ಲಕ್ಷ ಬಹುಮಾನ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಭಾರತ ಸರಕಾರ

Posted On: 11 DEC 2017 3:59PM by PIB Bengaluru

ಭಾರತ ಸರಕಾರದ ವಾರ್ತಾ ಶಾಖೆ
ಬೆಂಗಳೂರು

ನವದೆಹಲಿ, ಡಿಸೆಂಬರ್ 12, 2017

ನೂತನ ಚಿಹ್ನೆ ಮತ್ತು ಘೋಷವಾಕ್ಯ ರಚನಾ ಸ್ಪರ್ಧೆ ರೂ 1 ಲಕ್ಷ ಬಹುಮಾನ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಭಾರತ ಸರಕಾರ

…….

ಕೊನೆ ದಿನಾಂಕ : 17ನೇ ಡಿಸಂಬರ್ , 2017

ಸಂಪರ್ಕ ಕೊಂಡಿ: nnm.mwcd[at]gmail[dot]com

 

“ರಾಷ್ಟ್ರೀಯ ಪೌಷ್ಟಿಕಾಹಾರ ಸಂಕಲ್ಪ” ಯೋಜನೆಯ ಪ್ರಚಾರಕ್ಕಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ

 ರೂ 1 ಲಕ್ಷ ಬಹುಮಾನ ಮೊತ್ತದ ನೂತನ ಚಿಹ್ನೆ ವಿನ್ಯಾಸ ಮತ್ತು ಘೋಷವಾಕ್ಯ ಸ್ಪರ್ಧೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (ಭಾರತ ಸರಕಾರ) “ರಾಷ್ಟ್ರೀಯ ಪೌಷ್ಟಿಕಾಹಾರ ಸಂಕಲ್ಪ” ಯೋಜನೆಯ ಪ್ರಚಾರಕ್ಕಾಗಿ ನೂತನ ಚಿಹ್ನೆ ಮತ್ತು ಘೋಷವಾಕ್ಯ ಆಯ್ಕೆಗಾಗಿ ಸ್ಪರ್ಧೆಯನ್ನು ಏರ್ಪಡಿಸಿದೆ.

ರೂ 1 ಲಕ್ಷ ದ ವಿಜೇತರಿಗೆ ಬಹುಮಾನ ನೀಡಲಿದೆ. ಉದಯೋನ್ಮುಖ ಕಲಾವಿದರ ಹಾಗೂ ಆಸಕ್ತ ನಾಗರಿಕರ ವಿನ್ಯಾಸಗಳು, ಘೋಷವಾಕ್ಯಗಳು ರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವ ಅವಕಾಶ ಇಲ್ಲಿದೆ.

ಗರ್ಭಿಣಿ ಮಹಿಳೆಯರ, ತಾಯಂದಿರ ಮತ್ತು ಮಕ್ಕಳ ಪೌಷ್ಟಿಕಾಹಾರವು ಸಾಕಷ್ಟು ಪ್ರಮಾಣದಲ್ಲಿ ಲಭ್ಯತೆ ಮತ್ತು ಅವರ ಅಭಿವೃದ್ಧಿಯನ್ನು ಖಾತರಿಪಡಿಸುವ “ರಾಷ್ಟ್ರೀಯ ಪೌಷ್ಟಿಕಾಹಾರ ಸಂಕಲ್ಪ” ಯೋಜನೆಯನ್ನು ಭಾರತ ಸರಕಾರ ಅನುಷ್ಠಾನಗೊಳಿಸಿದೆ.

 ಅಪೌಷ್ಟಿಕತೆ, ರಕ್ತಹೀನತೆ ಮತ್ತು ಕನಿಷ್ಟ ಜನನ ಧಾರಣೆ ಮುಂತಾದ ಪ್ರಮುಖ ಅಂಶಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಇದಕ್ಕೆ ಅನುಗುಣವಾದ ಚಿಹ್ನೆ ಮತ್ತು ಘೋಷವಾಕ್ಯದ ವಿನ್ಯಾಸ ರೂಪಿಸುವುದರಿಂದ ಸಾಮೂಹಿಕ ಪ್ರಚಾರಾಂದೋಲನದ ಮೂಲಕ ಸಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಗರಿಷ್ಟ ಪ್ರಮಾಣದಲ್ಲಿ ಜನರಲ್ಲಿ ಅರಿವು ಮೂಡಿಸುವಲ್ಲಿ ಇನ್ನಷ್ಟು ಸಫಲವಾಗಬಹುದು.

“ನಮ್ಮ ಅನೇಕ ಯೋಜನೆಗಳಿಗಾಗಿ, ಈ ಹಿಂದೆ ಸಚಿವಾಲಯದ ಸಾಮಾಜಿಕ ತಾಣಗಳ ಮೂಲಕ ಮಾಡಿದ ಪ್ರಚಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು

 ಪಾಲ್ಗೊಂಡು ಅನೇಕಾನೇಕ ಉತ್ತಮ ಪ್ರಸ್ತಾವಗಳು ಬಂದಿವೆ, ಆದುದರಿಂದ ಈಗಲೂ ನಾವು ಉತ್ತಮ ರೀತಿಯ 

ಸಾರ್ವಜನಿಕ ಸ್ಪಂದನ ಹಾಗು ಸ್ಪರ್ಧೆಯನ್ನು ನಿರೀಕ್ಷಿಸುತ್ತೇವೆ. 

ಅದಕ್ಕಾಗಿ ವಿಜೇತರಿಗೆ ರೂ 1 ಲಕ್ಷದ ಬಹುಮಾನವನ್ನೂ ಘೋಷಿಸಿದ್ದೇವೆ. ಸಾರ್ವಜನಿಕರು ಪಾಲ್ಗೊಂಡು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬಹುದು” ಎಂದು  ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಮೇನಕಾ ಸಂಜಯ್ ಗಾಂಧಿ ಹೇಳಿದರು.

 

ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ನೂತನ ಸೃಜನಶೀಲ ಚಿಹ್ನೆಯ ವಿನ್ಯಾಸ ಮತ್ತು

 ಘೋಷವಾಕ್ಯಗಳನ್ನು “ರಾಷ್ಟ್ರೀಯ ಪೌಷ್ಟಿಕಾಹಾರ ಸಂಕಲ್ಪ” ಯೋಜನೆಯ ಸಾರ್ವಜನಿಕ ಸ್ಪರ್ಧೆಗೆ ಕಳುಹಿಸಿಕೊಡಬಹುದು. ಒಂದುವೇಳೆ, ಚಿಹ್ನೆ ಮತ್ತು ಘೋಷವಾಕ್ಯಗಳು ಪ್ರತ್ಯೇಕ ಪ್ರತ್ಯೇಕವಾಗಿ ಎರಡು ವ್ಯಕ್ತಿಗಳಿಂದ ಅಯ್ಕೆಯಾದಲ್ಲಿ ಬಹುಮಾನ ಮೊತ್ತವನ್ನು ಚಿಹ್ನೆ

 ಹಾಗೂ ಘೋಷವಾಕ್ಯಕ್ಕೆ ಸಮಾನವಾಗಿ (ಇಬ್ಬಾಗಿಸಿ) ಹಂಚಲಾಗುವುದು.

 

ಪ್ರಸ್ತಾವನೆಗಳನ್ನು ಕಳುಹಿಸಿಕೊಡಲು ಕೊನೆ ದಿನಾಂಕ : 17ನೇ ಡಿಸಂಬರ್ , 2017

ಕಳುಹಿಸಿಕೊಡಬೇಕಾದ ಸಂಪರ್ಕ ಕೊಂಡಿ: nnm.mwcd[at]gmail[dot]com

 

ಅಧಿಕ ಮಾಹಿತಿಗಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (ಭಾರತ ಸರಕಾರ)ದ ಫೇಸ್ಬುಕ್ ಮತ್ತು ಟ್ವಿಟ್ಟರ್ ಪುಟಗಳನ್ನು 

@MinistryWCD ಮೂಲಕ ಅಥವಾ bit.ly/2BGM59i ಅನ್ನು ಮತ್ತು ನಿಬಂಧನೆಗಳಿಗಾಗಿ  

 http://bit.ly/2ACKnGA  ಯನ್ನು ಕ್ಲಿಕ್ಕಿಸುವುದರಿಂದ ಪಡೆಯಬಹುದು.

####

 



(Release ID: 1512351) Visitor Counter : 108


Read this release in: English