ಪ್ರಧಾನ ಮಂತ್ರಿಯವರ ಕಛೇರಿ

ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ

Posted On: 07 DEC 2017 12:18PM by PIB Bengaluru

ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಿದರು. ಈ ಸಂಸ್ಥೆಗೆ 2015ರ ಏಪ್ರಿಲ್ ನಲ್ಲಿ ಅವರು ಶಿಲಾನ್ಯಾಸ ನೆರವೇರಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಈ ಕೇಂದ್ರವು ಡಾ. ಅಂಬೇಡ್ಕರ್ ಅವರ ಬೋಧನೆ ಮತ್ತು ನಿಲುವುಗಳನ್ನು ಪ್ರಸಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಸಾಮಾಜಿಕ ಆರ್ಥಿಕ ಪರಿವರ್ತನೆ ಕುರಿತ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರ ಸಹ ಈ ಯೋಜನೆಯ ಭಾಗವಾಗಿದ್ದು, ಈ ಕೇಂದ್ರವು ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳ ಸಂಶೋಧನೆಯ ಮಹತ್ವದ ಕೇಂದ್ರವಾಗಲಿದೆ ಎಂದು ಪ್ರಧಾನಿ ಹೇಳಿದರು. ಸಾಮಾಜಿಕ ಆರ್ಥಿಕ ವಿಚಾರಗಳ ಕುರಿತಾದ ಮತ್ತು  ಸಮಗ್ರ ಪ್ರಗತಿಗಾಗಿ ಈ ಕೇಂದ್ರವು ಚಿಂತಕರ ಚಾವಡಿಯಂತೆ ಕೆಲಸ ಮಾಡಲಿದೆ ಎಂದು ಹೇಳಿದರು. 

ದೂರದರ್ಶಿತ್ವವುಳ್ಳವರು ಮತ್ತು ಚಿಂತನೆಯ ನಾಯಕರು ವಿವಿಧ ಕಾಲಘಟ್ಟದಲ್ಲಿ ನಮ್ಮ ದೇಶದ ದಿಕ್ಕನ್ನು ರೂಪಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ರಾಷ್ಟ್ರ ನಿರ್ಮಾಣಕ್ಕೆ ಬಾಬಾ ಸಾಹೇಬ್ ಅವರು ನೀಡಿರುವ ಕೊಡುಗೆಗಾಗಿ ಅವರಿಗೆ ದೇಶ ಋಣಿಯಾಗಿದೆ ಎಂದರು. ಅವರ ದೃಷ್ಟಿಕೋನ ಮತ್ತು ಕಲ್ಪನೆಗಳ ಬಗ್ಗೆ ದೇಶದ ಹೆಚ್ಚು ಹೆಚ್ಚು ಜನರು ಅದರಲ್ಲೂ ಯುವಕರು ತಿಳಿಯಬೇಕೆಂದು ಬಯಸುತ್ತದೆ ಎಂದು ಪ್ರಧಾನಿ ಹೇಳಿದರು. ಹೀಗಾಗಿಯೇ ಡಾ. ಅಂಬೇಡ್ಕರ್ ಅವರ ಬದುಕಿಗೆ ಸಂಬಂಧಿಸಿದ ಮಹತ್ವದ ತಾಣಗಳನ್ನು ಯಾತ್ರಾ ಕೇಂದ್ರವಾಗಿ ಅಭಿವೃದ್ಧಿ ಪಡಿಸುತ್ತಿದೆ ಎಂದರು. 

ಈ ನಿಟ್ಟಿನಲ್ಲಿ ದೆಹಲಿಯ ಅಲಿಪುರ್; ಮಧ್ಯಪ್ರದೇಶದ ಮಹೌ; ಮುಂಬೈನ ಇಂದುಮಿಲ್; ನಾಗಪುರದ ದೀಕ್ಷಾಭೂಮಿ; ಮತ್ತು ಲಂಡನ್ ನ ನಿವಾಸಗಳನ್ನು ಅವರು ಪ್ರಸ್ತಾಪಿಸಿದರು. ಈ ಪಂಚಪೀಠಗಳು ಡಾ. ಅಂಬೇಡ್ಕರ್ ಅವರಿಗೆ ಇಂದಿನ ಪೀಳಿಗೆ ನಮನ ಸಲ್ಲಿಸುವ ಹಾದಿಯಾಗಿದೆ ಎಂದರು. ಡಿಜಿಟಲ್ ವಹಿವಾಟಿಗಾಗಿ ರೂಪಿಸಿರುವ ಬೀಮ್ ಆಪ್ ಕೇಂದ್ರ ಸರ್ಕಾರ ಡಾ. ಅಂಬೇಡ್ಕರ್ ಅವರಿಗೆ ಸಲ್ಲಿಸಿದ ಆರ್ಥಿಕ ದೃಷ್ಟಿಕೋನದ ಶ್ರದ್ಧಾಂಜಲಿಯಾಗಿದೆ ಎಂದರು. 

ಡಾ. ಅಂಬೇಡ್ಕರ್ ಅವರು 1946ರ ಡಿಸೆಂಬರ್ ನಲ್ಲಿ  ಸಂವಿಧಾನಸಭೆಯಲ್ಲಿ ಮಾಡಿದ ಭಾಷಣ ಉಲ್ಲೇಖಿಸಿದ ಪ್ರಧಾನಿ, ತಮ್ಮ ಹೋರಾಟದ ಹೊರತಾದಿ ಡಾ.ಅಂಬೇಡ್ಕರ್ ಅವರು ದೇಶದ ಸಮಸ್ಯೆಗಳನ್ನು ಮೀರಿ ನಿಲ್ಲಲು ಪ್ರೇರಣಾತ್ಮಕ ದೃಷ್ಟಿಕೋನ ನೀಡಿದ್ದಾರೆ ಎಂದರು. ನಾವು ಡಾ. ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಇನ್ನೂ ನಾವು ಪೂರ್ಣಗೊಳಿಸಿಲ್ಲ ಎಂದು ಅವರು ಹೇಳಿದರು. ಇಂದಿನ ಪೀಳಿಗೆ ಸಾಮಾಜಿಕ ಪಿಡುಗುಗಳನ್ನು ನಿವಾರಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂದರು.

ಡಾ. ಅಂಬೇಡ್ಕರ್ ಅವರ ಪದಗಳನ್ನು ಸ್ಮರಿಸಿದ ಪ್ರಧಾನಿ, ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವದ ಜೊತೆಗೆ, ಸಾಮಾಜಿಕ ಪ್ರಜಾಪ್ರಭುತ್ವವನ್ನು ರೂಪಿಸಬೇಕೆಂದರು. ಕಳೆದ ಮೂರು ಮೂರೂವರೆ ವರ್ಷಗಳಲ್ಲಿ, ಕೇಂದ್ರ ಸರ್ಕಾರ ಸಾಮಾಜಿಕ ಪ್ರಜಾಪ್ರಭುತ್ವದ ಮುನ್ನೋಟವನ್ನು ಪೂರ್ಣಗೊಳಿಸಲು ಶ್ರಮಿಸುತ್ತಿದೆ ಎಂದರು. ಈ ನಿಟ್ಟಿನಲ್ಲಿ ಕೈಗೊಂಡಿರುವ ಉಪಕ್ರಮಗಳಾದ ಜನ್ ಧನ್ ಯೋಜನಾ, ಉಜ್ವಲ ಯೋಜನಾ, ಸ್ವಚ್ಛ ಭಾರತ ಅಭಿಯಾನ, ವಿಮಾ ಯೋಜನೆಗಳು, ಪ್ರಧಾನಮಂತ್ರಿ ವಸತಿ ಯೋಜನೆ ಮತ್ತು ಇತ್ತೀಚೆಗೆ ಆರಂಭಿಸಲಾಗಿ ಸೌಭಾಗ್ಯ ಯೋಜನೆಗಳನ್ನು ಅವರು ಪ್ರಸ್ತಾಪಿಸಿದರು. ಸರ್ಕಾರ ಎಲ್ಲ ಯೋಜನೆಗಳನ್ನೂ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸರ್ವ ಪ್ರಯತ್ನ ಮಾಡುತ್ತಿದೆ ಎಂದರು ಮತ್ತು ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರ ಇದಕ್ಕೆ ಒಂದು ಉದಾಹರಣೆ ಎಂದರು. 

ಸಾರ್ವಜನಿಕ ಕಲ್ಯಾಣದ ಉಪಕ್ರಮಗಳ ಜಾರಿಯಲ್ಲಿ ಕೇಂದ್ರ ಸರ್ಕಾರದ ಬದ್ಧತೆಯನ್ನು ಬಿಂಬಿಸುವ ಮಣ್ಣಿನ ಆರೋಗ್ಯ ಕಾರ್ಡ್, ಇಂಧ್ರಧನುಷ್ ಅಭಿಯಾನ ಸೇರಿದಂತೆ ಇತರ ಯೋಜನೆಗಳ ಬಗ್ಗೆ ಹಾಗೂ ಗ್ರಾಮೀಣ ವಿದ್ಯುದ್ದೀಕರಣ ಗುರಿಯ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಸ್ವಯಂ ಉದ್ಯೋಗ ಸೃಷ್ಟಿಸುವ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಕುರಿತೂ ಮಾತನಾಡಿದರು. 

ನವ ಭಾರತಕ್ಕೆ ತಾವು ನೀಡಿರುವ ಕರೆಯ ಪ್ರಸ್ತಾಪ ಮಾಡಿದ ಪ್ರಧಾನಿ, ಡಾ. ಅಂಬೇಡ್ಕರ್ ಕಲ್ಪಿಸಿಕೊಂಡಿದ್ದ, ಸರ್ವರಿಗೂ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ನೀಡುವ , ಜಾತಿ ದಬ್ಬಾಳಿಕೆಯಿಂದ ಮುಕ್ತವಾದ ಮತ್ತು ತಂತ್ರಜ್ಞಾನದ ಸಾಮರ್ಥ್ಯದ ಮೂಲಕ ಮುಂದುವರಿಯುತ್ತಿರುವ ಭಾರತ ಅದಾಗಬೇಕು ಎಂದು ಪ್ರತಿಪಾದಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮುನ್ನೋಟವನ್ನು ಪೂರ್ಣಗೊಳಿಸುವತ್ತ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು ಎಂದು ಅವರು ಪ್ರತಿಪಾದಿಸಿದರು ಮತ್ತು ಇದನ್ನು 2022ರೊಳಗೆ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.



(Release ID: 1512230) Visitor Counter : 81


Read this release in: English