ಪ್ರಧಾನ ಮಂತ್ರಿಯವರ ಕಛೇರಿ
ಯು.ಪಿ. ಮುಖ್ಯಮಂತ್ರಿಗಳಿಂದ ಪಿ.ಎಂ.ಎನ್.ಆರ್.ಎಫ್.ಗೆ ದೇಣಿಗೆ
Posted On:
05 DEC 2017 12:59PM by PIB Bengaluru
ಯು.ಪಿ. ಮುಖ್ಯಮಂತ್ರಿಗಳಿಂದ ಪಿ.ಎಂ.ಎನ್.ಆರ್.ಎಫ್.ಗೆ ದೇಣಿಗೆ
ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಲಕ್ಷದ್ವೀಪ ಮತ್ತು ಇತರ ರಾಜ್ಯಗಳಲ್ಲಿ ಚಂಡಮಾರುತದಿಂದ ಸಂತ್ರಸ್ತರಾಗಿರುವವರಿಗಾಗಿ ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿ (ಸಿಎಂಡಿಆರ್.ಎಫ್.)ಯಿಂದ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ಆರ್.ಎಫ್.)ಗೆ ಅವರು ಪ್ರಧಾನಮಂತ್ರಿಯವರಿಗೆ 5 ಕೋಟಿ ರೂಪಾಯಿ ಮೌಲ್ಯದ ಚೆಕ್ ಹಸ್ತಾಂತರಿಸಿದರು.
****
(Release ID: 1511875)