ಸಂಪುಟ

ಕೃಷಿ ಮತ್ತು ಬೆಳೆ ರೋಗ ವಿಷಯಗಳಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಇಟಲಿ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

प्रविष्टि तिथि: 30 NOV 2017 6:53PM by PIB Bengaluru

ಕೃಷಿ ಮತ್ತು ಬೆಳೆ ರೋಗ ವಿಷಯಗಳಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಇಟಲಿ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಇಟಲಿಯ ನಡುವೆ ಕೃಷಿ ಮತ್ತು ಬೆಳೆ ರೋಗ ವಿಷಯಗಳಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ. ಇದು 2018ರ ಜನವರಿಯಲ್ಲಿ ಅವಧಿ ಮುಗಿಯಲಿರುವ ಹಾಗೂ 2008ರ ಜನವರಿಯಲ್ಲಿ ಅಂಕಿತ ಹಾಕಲಾಗಿದ್ದ ತಿಳಿವಳಿಕೆ ಒಪ್ಪಂದವನ್ನು ಬದಲಾಯಿಸಲಿದೆ.

ಈ ತಿಳಿವಳಿಕೆ ಒಪ್ಪಂದವು ಬೆಳೆ ರೋಗ, ಕೃಷಿ ಉತ್ಪಾದನೆ ಕ್ಷೇತ್ರದಲ್ಲಿ ಮತ್ತು ಪಶು ಸಂಗೋಪನೆ, ಕೃಷಿ ಸಂಶೋಧನೆ, ಆಹಾರ ಸಂಸ್ಕರಣೆ ಮತ್ತು ಮತ್ತು ಎರಡೂ ಕಡೆಯವರು ಸಮ್ಮತಿಸುವ ಇತರ ಹೆಚ್ಚುವರಿ ಕ್ಷೇತ್ರಗಳು ಸೇರಿದಂತೆ ವಿಸ್ತೃತ ಶ್ರೇಣಿಯ ಇತರ ವಲಯಗಳ ಸಹಕಾರಕ್ಕೆ ಅವಕಾಶ ನೀಡುತ್ತದೆ. 

ಈ ತಿಳಿವಳಿಕೆ ಒಪ್ಪಂದದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಪರಿಸ್ಥಿತಿ, ತಾಂತ್ರಿಕ ವಿನಿಮಯ ಬಲವರ್ಧನೆ ಮತ್ತು ಕೃಷಿ ಯಾಂತ್ರೀಕರಣ/ಕೃಷಿ ವ್ಯವಸ್ಥೆ ಮತ್ತು ಕೃಷಿ ಕೈಗಾರಿಕೆ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಉತ್ಪಾದನಾ ಸಹಕಾರ, ತಾಂತ್ರಿಕ ತಡೆಗಳ ನಿವಾರಣೆ ಮತ್ತು ಆಧುನಿಕ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಇತ್ಯಾದಿ ಸೇರಿದಂತೆ ಪಶುಸಂಗೋಪನೆ ಕ್ಷೇತ್ರದಲ್ಲಿನ ಅನುಭವಗಳ ವಿನಿಮಯಕ್ಕೆ ಅವಕಾಶಗಳಿವೆ. 

ಈ ತಿಳಿವಳಿಕೆ ಒಪ್ಪಂದವು ಕೃಷಿ ಕ್ಷೇತ್ರದಲ್ಲಿನ ದ್ವಿಪಕ್ಷೀಯ ವಿನಿಮಯ, ಕೃಷಿ ಸಹಕಾರ ಕುರಿತ ದೀರ್ಘ ಕಾಲೀನ ಉಪಕ್ರಮ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಂಟಿ ಕಾರ್ಯ ಗುಂಪು ರಚಿಸಲು ಅವಕಾಶ ಕಲ್ಪಿಸುತ್ತದೆ ಮತ್ತು ನಿರ್ದಿಷ್ಟ ಜಂಟಿ ಪ್ರಕ್ರಿಯೆಗಳ ಮೂಲಕ ರಫ್ತು ಸರಕುಗಳಲ್ಲಿ ಬೆಳೆ ರೋಗದ ಅಪಾಯ ತಗ್ಗಿಸಲು ಸಹಕಾರ ಉತ್ತೇಜಿಸುತ್ತದೆ. 

ಇದು ಎರಡೂ ದೇಶಗಳ ಸರ್ಕಾರಿ ಸಂಸ್ಥೆಗಳು, ವೈಜ್ಞಾನಿಕ ಮತ್ತು ಶೈಕ್ಷಣಿಕ ಸಂಸ್ಥೆಗಳು ಮತ್ತು ವಾಣಿಜ್ಯ ಸಮುದಾಯದ ನಡುವೆ ಸಂಪರ್ಕಕ್ಕೆ ಅವಕಾಶ ಮತ್ತು ಉತ್ತೇಜನ ನೀಡುತ್ತದೆ ಹಾಗೂ ಎರಡೂ ದೇಶಗಳ ಸಂಬಂಧಿತ ಸಂಶೋಧನಾ ಸಂಸ್ಥೆಗಳ ನಡುವೆ ಸಹಕಾರವನ್ನು ಮತ್ತಷ್ಟು ಹೆಚ್ಚಿಸಿ ಉತ್ತೇಜನ ನೀಡುತ್ತದೆ.
 

*****


(रिलीज़ आईडी: 1511715) आगंतुक पटल : 101
इस विज्ञप्ति को इन भाषाओं में पढ़ें: English , Tamil