ಸಂಪುಟ

ಭಾರತ ಮತ್ತು ಬ್ರೆಜಿಲ್ ನಡುವೆ ಹೂಡಿಕೆಯ ಸಹಕಾರ ಮತ್ತು ಅದನ್ನು ಸುಗಮಗೊಳಿಸುವ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 30 NOV 2017 6:56PM by PIB Bengaluru

ಭಾರತ ಮತ್ತು ಬ್ರೆಜಿಲ್ ನಡುವೆ ಹೂಡಿಕೆಯ ಸಹಕಾರ ಮತ್ತು ಅದನ್ನು ಸುಗಮಗೊಳಿಸುವ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಬ್ರೆಜಿಲ್ ನಡುವೆ ಹೂಡಿಕೆಯ ಸಹಕಾರ ಮತ್ತು ಅದನ್ನು ಸುಗಮಗೊಳಿಸುವ ಒಪ್ಪಂದಕ್ಕೆ (ಐಸಿಎಫ್ಟಿ) ತನ್ನ ಅನುಮೋದನೆ ನೀಡಿದೆ.

ಈ ಒಪ್ಪಂದ ಫಲವಾಗಿ ಎರಡೂ ದೇಶಗಳ ನಡುವೆ ಹೂಡಿಕೆಯ ಹರಿವು ಹೆಚ್ಚಿಸಲಿದೆ. ಭಾರತ ಮತ್ತು ಬ್ರೆಜಿಲ್ ನಡುವಿನ ಐಸಿಎಫ್ಟಿ ಬ್ರೆಜಿಲ್ ನ ಹೂಡಿಕೆದಾರರಿಗೆ ಭಾರತದಲ್ಲಿ ಮತ್ತು ಭಾರತದ ಹೂಡಿಕೆದಾರರಿಗೆ ಬ್ರೆಜಿಲ್ ನಲ್ಲಿ ಸುಗಮ ಅವಕಾಶ ಒದಗಿಸುತ್ತದೆ. ಇದು ಎಲ್ಲಾ ಹೂಡಿಕೆಯ ಸೌಕರ್ಯ ವಿಷಯಗಳಲ್ಲಿ ತಾರತಮ್ಯವಿಲ್ಲದ ಮತ್ತು ಉತ್ತಮ ಭೂಮಿಕೆಯನ್ನು ಒದಗಿಸುವುದರ ಮೂಲಕ ಹೂಡಿಕೆದಾರರಿಗೆ ಅನುಕೂಲಕರ ಹೂಡಿಕೆ ವಾತಾವರಣವನ್ನು ಖಾತ್ರಿಪಡಿಸಿ, ಸೌಕರ್ಯ ಮಟ್ಟವನ್ನು ಮತ್ತು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಇದು ಬ್ರೆಜಿಲ್ ಹೂಡಿಕೆದಾರರಿಗೆ ಭಾರತವನ್ನು ಸೂಕ್ತ ವಿದೇಶಿ ನೇರ ಬಂಡವಾಳ (ಎಫ್.ಡಿ.ಐ)ಹೂಡಿಕೆ ತಾಣ ಎಂದು ಬಿಂಬಿಸಲೂ ನೆರವಾಗುತ್ತದೆ.
 

*****



(Release ID: 1511713) Visitor Counter : 86


Read this release in: English , Tamil