ಸಂಪುಟ

ಹಿಂದೂಸ್ತಾನ್ ತರಕಾರಿ ತೈಲ ನಿಗಮ ನಿಯಮಿತ ಹೊಂದಿರುವ ಭೂಮಿ ಆಸ್ತಿಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ವರ್ಗಾವಣೆ ಮಾಡಲು ಸಂಪುಟದ ಅನುಮೋದನೆ

Posted On: 30 NOV 2017 6:56PM by PIB Bengaluru

ಹಿಂದೂಸ್ತಾನ್ ತರಕಾರಿ ತೈಲ ನಿಗಮ ನಿಯಮಿತ ಹೊಂದಿರುವ ಭೂಮಿ ಆಸ್ತಿಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ವರ್ಗಾವಣೆ ಮಾಡಲು ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹಿಂದೂಸ್ತಾನ್ ತರಕಾರಿ ತೈಲ ನಿಗಮ ನಿಯಮಿತ (ಎಚ್.ವಿ.ಓ.ಸಿ.) ಹೊಂದಿರುವ ಎಲ್ಲ ಜಮೀನು ಆಸ್ತಿಯನ್ನು ಸೂಕ್ತ ಬಳಕೆ/ವಿಲೇವಾರಿಗಾಗಿ ವಸತಿ ಮತ್ತು ನಗರ ವ್ಯವಹಾರಗಳ (ಎಂ.ಓ. ಎಚ್.ಯು.ಎ.)ಗೆ ಅಥವಾ ಅದರ ಅಧಿಕೃತ ಸಂಸ್ಥೆಗಳಿಗೆ ವರ್ಗಾವಣೆ ಮಾಡಲು ತನ್ನ ಸಮ್ಮತಿ ಸೂಚಿಸಿದೆ. 

ಎಚ್.ವಿ.ಓ.ಸಿ.ಯ ಈ ಜಮೀನು ಆಸ್ತಿಗಳ ವರ್ಗಾವಣೆಯ ಬದಲಿಗೆ, ಎಚ್.ವಿ.ಓ.ಸಿ. ಸರ್ಕಾರದಿಂದ ಪಡೆದಿರುವ ಸಾಲದ ಮೇಲಿನ ಬಡ್ಡಿ ಮತ್ತು ಸಂಪೂರ್ಣ ಸಾಲವನ್ನು ಮನ್ನಾ ಮಾಡಲಾಗುತ್ತದೆ. ಅಲ್ಲದೆ ವಿವಿಧ ನ್ಯಾಯಾಲಯಗಳಲ್ಲಿ/ನ್ಯಾಯಾಧಿಕರಣಗಳಲ್ಲಿ/ಪ್ರಾಧಿಕಾರಗಳಲ್ಲಿ ಬಾಕಿ ಇರುವ ಪ್ರಕರಣಗಳಿಂದಾಗಿ ಉದ್ಭವಿಸಬಹುದಾದ ಎಚ್.ವಿ.ಓ.ಸಿ.ಯ ಎಲ್ಲ ಸಂಭವನೀಯ ಹೊಣೆಯನ್ನೂ ಸರ್ಕಾರ ಹೊರುತ್ತದೆ. 

ಏಳು ನಗರಗಳಲ್ಲಿ ಇರುವ ಜಮೀನು ಹಲವು ವರ್ಷಗಳಿಂದ ಬಳಕೆಯಾಗದೆ ಬಿದ್ದಿದೆ. ಎಂ.ಓ.ಎಚ್.ಯು.ಎಗೆ ಈ ಆಸ್ತಿಗಳನ್ನು ವರ್ಗಾವಣೆ ಮಾಡುವುದರಿಂದ ಇದನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡಲು ಅವಕಾಶ ಆಗಲಿದೆ. ದಿವಾಳಿಯ ಅಡಿಯಲ್ಲಿರುವ, ರೋಗಗ್ರಸ್ಥ ಪಿ.ಎಸ್.ಯು ಆದ ಎಚ್.ವಿ.ಓ.ಸಿ.ಯನ್ನು ಮುಂಚಿತವಾಗಿ ಮುಚ್ಚಲೂ ಇದು ಅವಕಾಶ ಮಾಡಿಕೊಡುತ್ತದೆ. 
 

*****



(Release ID: 1511711) Visitor Counter : 72


Read this release in: English , Tamil