ಹಣಕಾಸು ಸಚಿವಾಲಯ
ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಕುರಿತ ಯುರೋಪಿಯನ್ ಬ್ಯಾಂಕ್ ನಲ್ಲಿ ಭಾರತದ ಸದಸ್ಯತ್ವಕ್ಕೆ ಸಂಪುಟದ ಅನುಮೋದನೆ
Posted On:
22 NOV 2017 4:07PM by PIB Bengaluru
ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಕುರಿತ ಯುರೋಪಿಯನ್ ಬ್ಯಾಂಕ್ ನಲ್ಲಿ ಭಾರತದ ಸದಸ್ಯತ್ವಕ್ಕೆ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪುನರ್ನಿರ್ಮಾಣ ಮತ್ತು ಅಭಿವೃದ್ಧಿ (ಇಬಿಆರ್.ಡಿ) ಕುರಿತ ಐರೋಪ್ಯ ಬ್ಯಾಂಕ್ ನ ಭಾರತೀಯ ಸದಸ್ಯತ್ವಕ್ಕೆ ತನ್ನ ಅನುಮೋದನೆ ನೀಡಿದೆ.
ಇಬಿಆರ್.ಡಿಯ ಸದಸ್ಯತ್ವ ಪಡೆಯಲು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.
ಪರಿಣಾಮ:
- ಇಬಿಆರ್.ಡಿಯಲ್ಲಿನ ಸದಸ್ಯತ್ವವು ಭಾರತದ ಅಂತಾರಾಷ್ಟ್ರೀಯ ಚಿತ್ರಣವನ್ನು ಹೆಚ್ಚಿಸಲಿದೆ ಮತ್ತು ಅದರ ಆರ್ಥಿಕ ಹಿತಗಳನ್ನು ಉತ್ತೇಜಿಸಲಿದೆ. ಇಬಿಆರ್.ಡಿಯಲ್ಲಿ ವ್ಯವಹರಿಸುವ ರಾಷ್ಟ್ರಗಳೊಂದಿಗೆ ಮತ್ತು ವಲಯದ ಜ್ಞಾನದ ಪ್ರವೇಶ ಲಭಿಸಲಿದೆ.
- ಭಾರತದ ಹೂಡಿಕೆಯ ಅವಕಾಶಗಳನ್ನು ಚೈತನ್ಯ ಪಡೆಯಲಿವೆ.
- ಉತ್ಪಾದನೆ, ಸೇವೆಗಳು, ಮಾಹಿತಿ ತಂತ್ರಜ್ಞಾನ ಮತ್ತು ಇಂಧನ ಕ್ಷೇತ್ರದಲ್ಲಿ ಸಹ ಹಣಕಾಸು ಹೂಡಿಕೆ ಮೂಲಕ ಇದು ಭಾರತ ಮತ್ತು ಇಬಿಆರ್.ಡಿ ನಡುವಿನ ಸಹಕಾರದ ಸ್ವರೂಪವನ್ನು ಹೆಚ್ಚಿಸಲಿದೆ.
- ಇಬಿಆರ್ ಡಿಯ ಮುಖ್ಯ ಕಾರ್ಯಾಚರಣೆಗಳು ಅದರ ರಾಷ್ಟ್ರಗಳ ಕಾರ್ಯಾಚರಣೆಯಲ್ಲಿ ಖಾಸಗಿ ವಲಯದ ಅಭಿವೃದ್ಧಿಗೆ ಸಂಬಂಧಿಸಿದೆ. ಭಾರತದ ಸದಸ್ಯತ್ವವು ಖಾಸಗಿ ವಲಯದ ಅಭಿವೃದ್ಧಿಗೆ ಬ್ಯಾಂಕ್ ನ ತಾಂತ್ರಿಕ ನೆರವು ಮತ್ತು ವಲಯ ಜ್ಞಾನವನ್ನು ಪಡೆಯಲು ನೆರವಾಗುತ್ತದೆ.
- ಇದು ದೇಶದಲ್ಲಿ ಸುಧಾರಣೆಯ ಹೂಡಿಕೆಯ ವಾತಾವರಣವನ್ನು ತರಲು ಕೊಡುಗೆ ನೀಡುತ್ತದೆ.
- ಇಬಿಆರ್.ಡಿಯ ಸದಸ್ಯತ್ವವು ಭಾರತೀಯ ಸಂಸ್ಥೆಗಳ ಸ್ಪರ್ಧಾತ್ಮಕ ಬಲವನ್ನು ಹೆಚ್ಚಿಸುತ್ತದೆ ಮತ್ತು ವಾಣಿಜ್ಯಾವಕಾಶ, ದಾಸ್ತಾನು ಚಟುವಟಿಕೆ, ಸಮಾಲೋಚನಾ ಕಾರ್ಯಕ್ರಮ ಇತ್ಯಾದಿಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶಾವಕಾಶ ಹೆಚ್ಚಿಸುತ್ತದೆ.
- ಒಂದು ಕಡೆ ಇದು ಭಾರತೀಯ ವೃತ್ತಿನಿರತರಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ ಮತ್ತು ಮತ್ತೊಂದೆಡೆ ಭಾರತೀಯ ರಫ್ತುದಾರರಿಗೆ ಚೈತನ್ಯ ತುಂಬುತ್ತದೆ.
- ಆರ್ಥಿಕ ಚಟುವಟಿಕೆಗಳ ಹೆಚ್ಚಳವು ಉದ್ಯೋಗಾವಕಾಶ ಸೃಷ್ಟಿಯ ಸಾಮರ್ಥ್ಯವನ್ನು ಹೊಂದಿದೆ.
- ಇದು ಭಾರತೀಯ ಪ್ರಜೆಗಳಿಗೆ ಬ್ಯಾಂಕ್ ನಲ್ಲಿ ಉದ್ಯೋಗ ಪಡೆಯಲು ಅವಕಾಶ ನೀಡುತ್ತದೆ.
ಹಣಕಾಸು ಪರಿಣಾಮಗಳು:
ಇಬಿಆರ್.ಡಿ.ಯ ಸದಸ್ಯತ್ವಕ್ಕೆ ಪ್ರಾಥಮಿಕ ಕನಿಷ್ಠ ಹೂಡಿಕೆಯು ಸುಮಾರು €1 ದಶಲಕ್ಷ ಆಗಿರುತ್ತದೆ. ಆದಾಗ್ಯೂ, ಈ ಕಲ್ಪಿತ ಮೊತ್ತ ಸದಸ್ಯತ್ವ ಪಡೆಯಲು ಅಗತ್ಯವಾದ ಕನಿಷ್ಠ ಸಂಖ್ಯೆಯ ಶೇರು (100) ಖರೀದಿಸುವ ಭಾರತದ ನಿರ್ಧಾರವನ್ನು ಆಧರಿಸಿರುತ್ತದೆ. ಒಂದೊಮ್ಮೆ ಭಾರತವು ಹೆಚ್ಚಿನ ಸಂಖ್ಯೆ ಬ್ಯಾಂಕ್ ಶೇರು ಖರೀದಿಸುವುದಾದರೆ, ಹಣಕಾಸಿನ ಹೊರೆಯೂ ಹೆಚ್ಚಳವಾಗುತ್ತದೆ. ಈ ಹಂತದಲ್ಲಿ ಸಂಪುಟದ ತಾತ್ವಿಕ ಒಪ್ಪಿಗೆಯು ಬ್ಯಾಂಕ್ ಸೇರ್ಪಡೆಗೆ ಸಂಬಂಧಿಸಿರುತ್ತದೆ.
ಹಿನ್ನೆಲೆ
ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಕುರಿತ ಯೂರೋಪಿಯನ್ ಬ್ಯಾಂಕ್ (ಇಬಿಆರ್.ಡಿ)ನಲ್ಲಿ ಸದಸ್ಯತ್ವ ಪಡೆಯುವುದು ಸರ್ಕಾರದ ಪರಿಗಣನೆಯಲ್ಲಿದೆ. ಕೆಲವು ವರ್ಷಗಳಿಂದ ದೇಶದ ಪ್ರಭಾವಿತ ಆರ್ಥಿಕ ಪ್ರಗತಿ ಮತ್ತು ಅಂತಾರಾಷ್ಟ್ರೀಯ ರಾಜಕೀಯ ಘನತೆಯ ಹೆಚ್ಚಳವು ಭಾರತ ಜಾಗತಿಕ ಅಭಿವೃದ್ಧಿ ಭೂರಮೆಯಲ್ಲಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ (ಎಂಡಿಬಿ)ಗಳು ಅಂದರೆ ವಿಶ್ವಬ್ಯಾಂಕ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಮತ್ತು ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ ಗಳ ನಂಟಿನ ಹೊರತಾಗಿ ತನ್ನ ಅಸ್ತಿತ್ವವನ್ನು ವಿಸ್ತರಿಸುವುದು ಸೂಕ್ತ ಎಂಬುದನ್ನು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ) ಮತ್ತು ಹೊಸ ಅಭಿವೃದ್ಧಿ ಬ್ಯಾಂಕ್ (ಎನ್.ಡಿ.ಬಿ.) ಸೇರುವ ನಿರ್ಧಾರವನ್ನು ಈ ಹಿಂದೆ ಕೈಗೊಳ್ಳಲಾಗಿತ್ತು.
***
(Release ID: 1510580)
Visitor Counter : 74