ಸಂಪುಟ
ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಪ್ರವೇಶ ಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ರಚಿಸಲು ಸಂಪುಟದ ಅನುಮೋದನೆ
प्रविष्टि तिथि:
10 NOV 2017 5:57PM by PIB Bengaluru
ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಪ್ರವೇಶ ಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ರಚಿಸಲು ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಪ್ರವೇಶ ಪರೀಕ್ಷೆ ನಡೆಸಲು ಭಾರತೀಯ ಸೊಸೈಟಿಗಳ ನೋಂದಣಿ ಕಾಯಿದೆ 1860ರ ಅಡಿಯಲ್ಲಿ ಸೊಸೈಟಿಯಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ಮತ್ತು ಸ್ವಾಯತ್ತ ಹಾಗೂ ಸ್ವಯಂ ಸುಸ್ಥಿರವಾದ ಪ್ರಧಾನ ಪರೀಕ್ಷಾ ಸಂಸ್ಥೆಯಾಗಿ ರೂಪಿಸಲು ತನ್ನ ಅನುಮೋದನೆ ನೀಡಿದೆ.
ವೈಶಿಷ್ಟ್ಯಗಳು:
- ಎನ್.ಟಿ.ಎ. ಪ್ರಾರಂಭದಲ್ಲಿ ಪ್ರಸ್ತುತ ಸಿಬಿಎಸ್.ಇ. ನಡೆಸುತ್ತಿರುವ ಪ್ರವೇಶ ಪರೀಕ್ಷೆಗಳನ್ನು ತಾನು ನಡೆಸಲಿದೆ.
- ಎನ್.ಟಿ.ಎ. ಸಂಪೂರ್ಣವಾಗಿ ಸಜ್ಜಾದ ಬಳಿಕ ಇತರ ಪರೀಕ್ಷೆಗಳನ್ನು ಕೈಗೆತ್ತಿಕೊಳ್ಳಲಿದೆ.
- ವರ್ಷದಲ್ಲಿ ಎರಡು ಬಾರಿ ಆನ್ ಲೈನ್ ಸ್ವರೂಪದಲ್ಲಿ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತದೆ, ಆ ಮೂಲಕ ಅಭ್ಯರ್ಥಿಗಳಿಗೆ ತಮ್ಮ ಅತ್ಯುತ್ತಮ ಸಾಮರ್ಥ್ಯ ಪ್ರದರ್ಶನಕ್ಕೆ ಸಾಕಷ್ಟು ಅವಕಾಶ ಕಲ್ಪಿಸುತ್ತದೆ.
- ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅಗತ್ಯವನ್ನು ಪೂರೈಸುವ ಸಲುವಾಗಿ, ಕೇಂದ್ರಗಳನ್ನು ಉಪ ಜಿಲ್ಲೆ/ಜಿಲ್ಲಾ ಮಟ್ಟದಲ್ಲಿ ರೂಪಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ತರಬೇತಿಯನ್ನೂ ನೀಡಲಾಗುತ್ತದೆ.
ಸಂವಿಧಾನ:
- ಎನ್.ಟಿ.ಎ.ಯ ಅಧ್ಯಕ್ಷತೆಯನ್ನು ಎಂಎಚ್.ಆರ್.ಡಿ. ನೇಮಕ ಮಾಡುವ ಹೆಸರಾಂತ ಶಿಕ್ಷಣತಜ್ಞರು ವಹಿಸಲಿದ್ದಾರೆ.
- ಸಿಇಓ ಮಹಾ ನಿರ್ದೇಶಕರಾಗಿರಲಿದ್ದು, ಸರ್ಕಾರದಿಂದ ನೇಮಕಗೊಳ್ಳುತ್ತಾರೆ.
- ಬಳಕೆದಾರ ಸಂಸ್ಥೆಗಳ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯೂ ಇರುತ್ತದೆ.
- ಮಹಾ ನಿರ್ದೇಶಕರಿಗೆ ತಜ್ಞರು/ಶಿಕ್ಷಣವೇತ್ತರನ್ನೊಳಗೊಂಡ 9 ಸದಸ್ಯರ ತಂಡ ನೋರವಾಗಲಿದೆ.
ಹಣಕಾಸು:
ಎನ್.ಟಿ.ಎ.ಗೆ ಮೊದಲ ವರ್ಷದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲು ಒಂದು ಬಾರಿಯ ಅನುದಾನವಾಗಿ 25 ಕೋಟಿ ರೂಪಾಯಿಗಳನ್ನು ಭಾರತ ಸರ್ಕಾರ ನೀಡುತ್ತದೆ. ತರುವಾಯ, ಅದು ಆರ್ಥಿಕವಾಗಿ ಸ್ವಾವಲಂಬಿಯಾಗಲಿದೆ.
ಪರಿಣಾಮ:
ವಿವಿಧ ಪ್ರವೇಶ ಪರೀಕ್ಷೆಗಳಿಗೆ 40 ಲಕ್ಷ ವಿದ್ಯಾರ್ಥಿಗಳಿಗೆ ಎನ್.ಟಿ.ಎ. ಸ್ಥಾಪನೆಯಿಂದ ಅನುಕೂಲವಾಗಲಿದೆ. ಇಂಥ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯಿಂದ ಸಿಬಿಎಸ್.ಇ., ಎ.ಐ.ಸಿ.ಟಿ.ಇ.ಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಇದು ಮುಕ್ತಿ ನೀಡಲಿದೆ, ಮತ್ತು ವಿದ್ಯಾರ್ಥಿಗಳ ಬುದ್ಧಿವಂತಿಕೆ ಮತ್ತು ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯ ಅಳೆಯುವ ಮೂಲಕ ಹೆಚ್ಚಿನ ವಿಶ್ವಾಸಾರ್ಹತೆ, ಗುಣಮಟ್ಟದ ಕ್ಲಿಷ್ಟಕರ ಮಟ್ಟದ ಯೋಗ್ಯತಾ ನಿರ್ಣಯ ತರುತ್ತದೆ.
ಹಿನ್ನೆಲೆ:
ಮುಂದುವರಿದ ದೇಶಗಳ ರೀತಿಯಲ್ಲಿ ಭಾರತದಲ್ಲಿ ವಿಶೇಷವಾದ ಕಾಯದ ಅಗತ್ಯವನ್ನು ಮನಗಂಡು, ಹಣಕಾಸು ಸಚಿವರು 2017-18ನೇ ಸಾಲಿನ ತಮ್ಮ ಆಯವ್ಯಯ ಭಾಷಣದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲ ಪ್ರವೇಶ ಪರೀಕ್ಷೆಗಳನ್ನೂ ನಡೆಸಲು ಸ್ವಾಯತ್ತ ಮತ್ತು ಸ್ವಯಂ ಸುಸ್ಥಿರವಾದ ಪ್ರಧಾನ ಪರೀಕ್ಷಾ ಸಂಘಟನೆಯಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ಸ್ಥಾಪಿಸುವ ಪ್ರಕಟಿಸಿದ್ದರು.
********
(रिलीज़ आईडी: 1509155)
आगंतुक पटल : 72
इस विज्ञप्ति को इन भाषाओं में पढ़ें:
English