ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಕರ್ನಾಟಕದಲ್ಲಿ ನೂತನ 7 ಅಂಚೆ ಕಚೇರಿ “ಪಾಸ್ ಪೋರ್ಟ್ ಕೇಂದ್ರ”

ಪ್ರಕಟಣಾ ದಿನಾಂಕ: 19 JUN 2017 4:44PM by PIB Bengaluru

ಭಾರತ ಸರಕಾರದ ವಾರ್ತಾ ಶಾಖೆ
ಬೆಂಗಳೂರು

ಬೆಂಗಳೂರು, ಜೂನ್ 19, 2017

ಪತ್ರಿಕಾ ಹೇಳಿಕೆ

ಕರ್ನಾಟಕದಲ್ಲಿ ನೂತನ 7 ಅಂಚೆ ಕಚೇರಿ “ಪಾಸ್ ಪೋರ್ಟ್ ಕೇಂದ್ರ”

ಅಂಚೆ ಕಚೇರಿಗಳ “ಪಾಸ್ ಪೋರ್ಟ್ ಕೇಂದ್ರ” ಎರಡನೆ ಹಂತ, ಕರ್ನಾಟಕಕ್ಕೆ ನೂತನ 7 ಕೇಂದ್ರಗಳು

 

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಅಂಚೆ ಕಚೇರಿ ಇಲಾಖೆಗಳು ಜಂಟಿಯಾಗಿ ದೇಶದಾಧ್ಯಂತ ಖಾಲಿ ಸ್ಥಳಗಳನ್ನು ಹೊಂದಿರುವ ಮುಖ್ಯ ಅಂಚೆ ಕಚೇರಿಗಳು/ ಅಂಚೆ ಕಚೇರಿಗಳಲ್ಲಿ ಪಾಸ್ ಪೋರ್ಟ್ ಸೇವಾ ಸೌಲಭ್ಯ ಪೂರೈಸುವ ಯೋಜನೆಯ ಎರಡನೇಯ ಹಂತದಲ್ಲಿ ಕರ್ನಾಟಕದ ಬಳ್ಳಾರಿ, ಬೀದರ್, ರಾಯಚೂರ್, ಶಿವಮೊಗ್ಗ, ತುಮಕೂರು, ಉಡುಪಿ, ಮತ್ತು ವಿಜಾಪುರ ಸೇರಿದಂತೆ ( 7)  ಒಟ್ಟು 149 ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಸೌಲಭ್ಯ ಕೇಂದ್ರಗಳನ್ನು ದೇಶದಾಧ್ಯಂತ ತೆರೆಯಲಾಗುವದು.

ಪಾಸ್ ಪೋರ್ಟ್ ವಿತರಣೆ ಸಂಬಂಧಿಸಿದ ಸೇವಾ ಸೌಲಭ್ಯಗಳ ಪೂರೈಕೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಸೌಕರ್ಯ ಲಭ್ಯವಿರದ ಜಿಲ್ಲಾ ಕೇಂದ್ರ ಸ್ಥಳಗಳಿಗೆ ನೂತನ ಸೇವಾ ಕೇಂದ್ರಗಳನ್ನು ತೆರೆಯಲು ಜನತೆಯ ಪಾಲ್ಗೊಳ್ಳುವಿಕೆಯ ಈ ವಿಶೇಷ ಜಂಟಿ ಯೋಜನೆಯನ್ನು ಜಾರಿಗೊಳಿಸಿದೆ.

ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಸೌಲಭ್ಯ ಕೇಂದ್ರ ಯೋಜನೆಯ ಮೊದಲ ಹಂತದಲ್ಲಿ ಒಟ್ಟು 86 ಪಿ.ಓ.ಪಿ.ಎಸ್.ಕೆ ಗಳನ್ನು ತೆರೆಯಲು ವ್ಯವಸ್ಥೆಗಳನ್ನು ಮಾಡಿದ್ದು, ಇದರಲ್ಲಿ 52 ಕಾರ್ಯಗತಗೊಂಡಿವೆ. ಈಗ ದೇಶದಾಧ್ಯಂತ ನೂತನ 149 ಕೇಂದ್ರ ತೆರೆಲಿದ್ದು, ಒಟ್ಟು 235 ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಸೌಲಭ್ಯ ಕೇಂದ್ರಗಳು ಸಾರ್ವಜನಿಕರ ಸೌಕರ್ಯಕ್ಕಾಗಿ ಲಭ್ಯವಿದೆ.

****


(ಪ್ರಕಟಣೆ ಐ.ಡಿ.: 1493219) ವಿಸಿಟರ್ ಕೌಂಟರ್ : 24
ಪ್ರಕಟಣೆಯನ್ನು ಇದರಲ್ಲಿ ಓದಿ: English