ಸಂಪುಟ

ಈಶಾನ್ಯ ಭಾಗದಲ್ಲಿ ಕ್ಯಾನ್ಸರ್ ಚಿಕಿತ್ಸಾ ವ್ಯವಸ್ಥೆ ವರ್ಧನೆ ಅಣು ಶಕ್ತಿ ಇಲಾಖೆಯಿಂದ ಗುವಾಹಾಟಿಯ ಡಾ. ಬಿ. ಬರೂಚಾ ಕ್ಯಾನ್ಸರ್ ಸಂಸ್ಥೆವಹಿಸಿಕೊಳ್ಳಲು ಸಂಪುಟದ ಅನುಮೋದನೆ ಆಡಳಿತಾತ್ಮಕ ನಿಯಂತ್ರಣ ನಿರ್ವಹಣೆಮಾಡಲಿರುವ ಟಾಟಾ ಸ್ಮಾರಕ ಕೇಂದ್ರ ವೈದ್ಯ, ಅರೆ ವೈದ್ಯ ಮತ್ತು ಪೂರಕ ಸ್ಥಾನಗಳಲ್ಲಿ 166 ಹುದ್ದೆಗಳ ಸೃಷ್ಟಿ

ಪ್ರಕಟಣಾ ದಿನಾಂಕ: 07 JUN 2017 6:18PM by PIB Bengaluru

ಈಶಾನ್ಯ ಭಾಗದಲ್ಲಿ ಕ್ಯಾನ್ಸರ್ ಚಿಕಿತ್ಸಾ ವ್ಯವಸ್ಥೆ ವರ್ಧನೆ 

ಅಣು ಶಕ್ತಿ ಇಲಾಖೆಯಿಂದ ಗುವಾಹಾಟಿಯ ಡಾ. ಬಿ. ಬರೂಚಾ ಕ್ಯಾನ್ಸರ್ ಸಂಸ್ಥೆವಹಿಸಿಕೊಳ್ಳಲು ಸಂಪುಟದ ಅನುಮೋದನೆ 

ಆಡಳಿತಾತ್ಮಕ ನಿಯಂತ್ರಣ ನಿರ್ವಹಣೆಮಾಡಲಿರುವ ಟಾಟಾ ಸ್ಮಾರಕ ಕೇಂದ್ರ 

ವೈದ್ಯ, ಅರೆ ವೈದ್ಯ ಮತ್ತು ಪೂರಕ ಸ್ಥಾನಗಳಲ್ಲಿ 166 ಹುದ್ದೆಗಳ ಸೃಷ್ಟಿ 

 

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,ಈ ಕೆಳಕಂಡ ಪ್ರಸ್ತಾಪಗಳಿಗೆ ಅನುಮೋದನೆ ನೀಡಿದೆ: 

(i) ಗುವಾಹಟಿಯಡಾ. ಬಿ. ಬರೂಚಾ ಕ್ಯಾನ್ಸರ್ ಸಂಸ್ಥೆಯನ್ನು ಅಣುಶಕ್ತಿ ಇಲಾಖೆ (ಡಿ.ಎ.ಇ.) ವಹಿಸಿಕೊಳ್ಳಲು ಮತ್ತು ಇದನ್ನು ಡಿಎಇಯ ಅನುದಾನಿತ ಸಂಸ್ಥೆಯಾದ ಟಾಟಾ ಸ್ಮಾರಕ ಕೇಂದ್ರದ ಆಡಿತಾತ್ಮಕ ನಿಯಂತ್ರಣಕ್ಕೆ ಒಳಪಡಿಸಲು; 

(ii) ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಪೂರಕ ಸ್ಥಾನಗಳಲ್ಲಿ ಹೆಚ್ಚುವರಿ ಮಾನವ ಸಂಪನ್ಮೂಲ ವರ್ಧನೆ. 

ಕ್ಯಾನ್ಸರ್ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ, ಸೀಮಿತ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳಿರುವ ಹಿನ್ನೆಲೆಯಲ್ಲಿ ಮತ್ತು ಈಶಾನ್ಯ ವಲಯದಲ್ಲಿ ಸಂಶೋಧನೆ ನಡೆಸಲು ಮತ್ತು ಆಸ್ಪತ್ರೆಯ ನೆರವಿನ ಅಗತ್ಯ ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ. ಈ ಸಂಸ್ಥೆಯನ್ನು ಬಲಪಡಿಸಲು ತಗಲುವ ಮರುಕಳಿಸದ ವೆಚ್ಚ ಅಂದಾಜು ರೂ.150 ಕೋಟಿ ಆಗಿದ್ದು, ವಾರ್ಷಿಕ ಮರುಕಳಿಸುವ ವೆಚ್ಚವು ಅಂದಾಜು 40-45 ಕೋಟಿ ರೂಪಾಯಿ ಆಗಲಿದೆ. 

ಹಿನ್ನೆಲೆ: 

ಭಾರತದ ಈಶಾನ್ಯ ವಲಯದಲ್ಲಿ ಕ್ಯಾನ್ಸರ್ ಪತ್ತೆ, ಚಿಕಿತ್ಸೆ ಉದ್ದೇಶದಿಂದ ಸ್ವಯಂ ಸೇವಾ ಸಂಸ್ಥೆಯ ಮೂಲಕ ಬರೂಚಾ ಕ್ಯಾನ್ಸರ್ ಸಂಸ್ಥೆಯನ್ನು 1974ರಲ್ಲಿ ಗುವಾಹಟಿಯಲ್ಲಿ ಸ್ಥಾಪಿಸಲಾಗಿತ್ತು. 1986ರಲ್ಲಿ ಅಸ್ಸಾಂ ಸರ್ಕಾರ ಸಂಸ್ಥೆಯನ್ನು ಅದರ ಎಲ್ಲ ಆಸ್ತಿ ಮತ್ತು ಋಣದ ಸಹಿತವಾಗಿ ತನ್ನ ವಶಕ್ಕೆ ತೆಗೆದುಕೊಂಡಿತು, ಮತ್ತು ಸಂಸ್ಥೆಯ ನಿರ್ವಹಣೆಗಾಗಿ ಅಣುಶಕ್ತಿ ಇಲಾಖೆ (ಡಿಎಇ) ಮತ್ತು ಈಶಾನ್ಯ ಮಂಡಳಿಯೊಂದಿಗೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡಿತು. ಪ್ರಸ್ತುತ ಆಸ್ಪತ್ರೆಯು 209 ಹಾಸಿಗೆಗಳನ್ನು ಹಾಗೂ ಐ.ಸಿ.ಯು.ನಲ್ಲಿ 9 ಹಾಸಿಗೆ ಒಳಗೊಂಡಿದೆ. 

ಡಿಎಇ ಅಡಿಯಲ್ಲಿನ ಈ ಟಾಟಾ ಸ್ಮಾರಕ ಆಸ್ಪತ್ರೆ ಕ್ಯಾನ್ಸರ್ ಸಂಶೋಧನೆ ಮತ್ತು ಚಿಕಿತ್ಸೆಯ ಪ್ರಮುಖ ಸಂಸ್ಥೆಯಾಗಿದೆ. ಡಿಎಇ ಆಶ್ರಯದ ಅಡಿಯಲ್ಲಿನ ಟಿ.ಎಂ.ಸಿ. 1989ರಿಂದ ಸಂಸ್ಥೆಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ಒದಗಿಸುತ್ತಿದೆ. 2013ರ ಅಕ್ಟೋಬರ್ ನಲ್ಲಿ ಅಸ್ಸಾಂ ಮುಖ್ಯಮಂತ್ರಿಯವರು ಈ ಸಂಸ್ಥೆಯನ್ನು ಡಿಎಇ ವಹಿಸಿಕೊಂಡು ಇದನ್ನು ಈಶಾನ್ಯ ವಲಯದಲ್ಲಿ ಕ್ಯಾನ್ಸರ್ ಚಿಕಿತ್ಸೆ, ಶಿಕ್ಷಣ ಮತ್ತು ಸಂಶೋಧನೆಕೇಂದ್ರವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾಪ ಇಟ್ಟಿದ್ದರು. 
 

****


(ಪ್ರಕಟಣೆ ಐ.ಡಿ.: 1492232) ವಿಸಿಟರ್ ಕೌಂಟರ್ : 55
ಪ್ರಕಟಣೆಯನ್ನು ಇದರಲ್ಲಿ ಓದಿ: English