ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಪ್ರಧಾನ ಮಂತ್ರಿ ಆವಾಸ್ ಯೋಜನಾ(ನಗರ)-ಎಲ್ಲರಿಗೂ ವಸತಿ ಒದಗಿಸುವ ಧ್ಯೇಯ
Posted On:
20 APR 2017 4:12PM by PIB Bengaluru
ಪ್ರಧಾನ ಮಂತ್ರಿ ಆವಾಸ್ ಯೋಜನಾ(ನಗರ)-ಎಲ್ಲರಿಗೂ ವಸತಿ ಒದಗಿಸುವ ಧ್ಯೇಯ
ಯೋಜನೆಯ ಆರಂಭ
ದೇಶದಲ್ಲಿರುವ ಎಲ್ಲಾ ವಸತಿ ಹೀನರಿಗೆ ಮತ್ತು ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಎಲ್ಲ ಮೂಲ ಸೌಕರ್ಯಗಳನ್ನು ಒಳಗೊಂಡ ಪಕ್ಕಾ ಮನೆಯನ್ನು ಒದಗಿಸಿಕೊಡುವ ಪ್ರಧಾನಿಶ್ರೀ ನರೇಂದ್ರ ಮೋದಿಯವರ ಘೋಷಣೆಯ ಹಿನ್ನೆಲೆಯಲ್ಲಿ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯವು ‘ಪ್ರಧಾನ ಮಂತ್ರಿ ಆವಾಸ್ ಯೋಜನಾ (ನಗರ)-ಎಲ್ಲರಿಗೂಮನೆ ಯೋಜನೆಯನ್ನು ರೂಪಿಸಿದೆ. ದೇಶದ ಎಲ್ಲ ನಗರ ಪ್ರದೇಶಗಳಲ್ಲಿ ಉದ್ದೆಶಿತ ಗುರಿ ಸಾಧನೆಗೆ ಈ ಯೋಜನೆ ನೆರವಾಗಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಿ.ಎಂ.ಎ.ವೈ(ನಗರ)-ಎಚ್.ಎ¥sóï.ಎ ಹೆಸರಿನ ಈ ಯೋಜನೆಯನ್ನು 2015ರ ಜೂನ್ 25 ರಂದು ಆರಂಭಿಸಿದ್ದರು. ಈ ಯೋಜನೆಯನ್ನು29 ರಾಜ್ಯಗಳು ಮತ್ತು 7ಕೇಂದ್ರಾಡಳಿತ ಪ್ರದೇಶಗಳ 4,041 ನಗರ ಮತ್ತು ಪಟ್ಟಣಗಳಲ್ಲಿ ಜಾರಿಗೆ ತರಲಾಗುತ್ತಿದೆ.
2015ರ ಜೂನ್ ತಿಂಗಳಲ್ಲಿ ಯೋಜನೆ ಆರಂಭಗೊಂಡ ಬಳಿಕ ಆರ್ಥಿಕವಾಗಿ ಹಿಂದುಳಿದ ವರ್ಗಗಳು ಮತ್ತು ಕಡಿಮೆ ಆದಾಯದ ಗುಂಪುಗಳ ಫಲಾನುಭವಿಗಳಿಗೆ ಉತ್ತಮ ಮನೆಗಳನ್ನುಕಟ್ಟಿಕೊಳ್ಳಲು ಅನುಕೂಲವಾಗುವಂತೆ ಇದುವರೆಗೆ 17,73,052 ಮನೆಗಳಿಗೆ ಹಣಕಾಸು ಮಂಜೂರಾತಿ ನೀಡಿದೆ.ಇದರಲ್ಲಿ 29 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳ2,008 ನಗರ ಮತ್ತು ಪಟ್ಟಣಗಳು ಸೇರಿವೆ. ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗು ಲಕ್ಷದ್ವೀಪಗಳು ಈ ಯೋಜನೆಯಡಿಪ್ರಸ್ಥಾವಗಳನ್ನು ಇನ್ನಷ್ಟೇ ಕಳಿಸಬೇಕಾಗಿದೆ.
ಯೋಜನೆಯನ್ನು ಮೊದಲು ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಸೀಮಿತವಾಗಿರಿಸಲಾಗಿತ್ತು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2016ರಡಿಸೆಂಬರ್ 31ರಂದು ಯೋಜನೆಯನ್ನು ಮಧ್ಯಮ ಆದಾಯದ ಗುಂಪುಗಳಿಗೂ ವಿಸ್ತರಿಸುವ ಘೋಷಣೆ ಮಾಡಿದರು.
ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯ (ಹೂಪಾ) 2011ರಲ್ಲಿ ರಚಿಸಿದ ತಾಂತ್ರಿಕ ಸಮಿತಿ 18.78 ಮಿಲಿಯನ್ ವಾಸದ ಮನೆಗಳ ಕೊರತೆಯನ್ನು ಅಂದಾಜುಮಾಡಿತ್ತು. 0.99 ಮಿಲಿಯನ್ ನಗರ ಪ್ರದೇಶದ ಮನೆಗಳು ಕಚ್ಚಾ ಮನೆಗಳಾಗಿದ್ದು, 2.27 ಮಿಲಿಯನ್ ಮನೆಗಳು ತೀರಾ ನಾದುರಸ್ತಿಯಲ್ಲಿರುವ ಮನೆಗಳೆಂದು ಗುರುತಿಸಿತ್ತು. 14.99 ಮಿಲಿಯನ್ ಮನೆಗಳಲ್ಲಿ ವಾಸಿಸುವವರು ತೀರಾ ಇಕ್ಕಟ್ಟಿನಲಿ ಬದುಕುತ್ತಿದ್ದು, ಹೊಸ ಮನೆಗಳನ್ನು ಕಟ್ಟುವುದು ಅತೀ ಅವಶ್ಯವಾಗಿದೆ ಹಾಗು 0.53 ಮಿಲಿಯನ್ ನಗರ ವ್ಯಾಪ್ತಿಯಕುಟುಂಬಗಳು ಮನೆಯಿಲ್ಲದ ನಿರ್ಗತಿಕರಾಗಿದ್ದಾರೆ ಎಂದೂ ಅದು ಹೇಳಿತ್ತು. ನಗರೀಕರಣದಲ್ಲಾದ ಹೆಚ್ಚಳವನ್ನು ಗಣನೆಗೆ ತೆಗೆದುಕೊಂಡರೆ ಪ್ರಧಾನ ಮಂತ್ರಿ ಆವಾಸ್ ಯೋಜನಾಜಾರಿ ಸಮಯದಲ್ಲಿ ನಗರ ಪ್ರದೇಶದಲ್ಲಿ 2 ಕೋಟಿ ವಾಸದ ಮನೆಗಳ ಬೇಡಿಕೆಯನ್ನು ಅಂದಾಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಮನೆಗಳ ಬೇಡಿಕೆ ಅಂದಾಜಿಸುವಂತೆರಾಜ್ಯಗಳಿಗೆ/ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದ್ದು ಅದೀಗ ಅಂತಿಮ ಹಂತದಲ್ಲಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನಾ-ಎಲ್ಲರಿಗೂ ವಸತಿ ಯೋಜನೆಯ ಮುಖ್ಯಾಂಶಗಳು-
ವಾರ್ಷಿಕ ಆದಾಯ 3 ಲಕ್ಷ್ಯ ರೂಪಾಯಿವರೆಗೆ ಇರುವವರನ್ನು ಆರ್ಥಿಕವಾಗಿ ಹಿಂದುಳಿದವರು ಹಾಗು ವಾರ್ಷಿಕ ಆದಾಯ 3 ಲಕ್ಷ್ಯದಿಂದ 6 ಲಕ್ಷ್ಯ ರೂ,ಗಳ ವರೆಗೆ ಇರುವವರನ್ನು ಕಡಿಮೆಆದಾಯದ ಗುಂಪು ಮತ್ತು ವಾರ್ಷಿಕ ಆದಾಯ 6 ಲಕ್ಷ್ಯದಿಂದ 12 ಲಕ್ಷ್ಯದವರೆಗೆ ಇರುವ ಕುಟುಂಬಗಳನ್ನು ಮಧ್ಯಮ ವರ್ಗ ಗುಂಪು 1, ಮತ್ತು ವಾರ್ಷಿಕ ಆದಾಯ 12 ಲಕ್ಷ್ಯದಿಂದ 18 ಲಕ್ಷ್ಯದವರೆಗೆ ಇರುವ ಕುಟುಂಬಗಳನ್ನು ಮಧ್ಯಮ ವರ್ಗ2 ಎಂದು ವಿಂಗಡಿಸಿ ಅವರನ್ನು ಫಲಾನುಭವಿಗಳಾಗಿ ಈ ಯೋಜನೆ ಗುರುತಿಸುತ್ತದೆ.
ಭಾರತದ ಇಂದಿನ ಪರಿಸ್ಥಿತಿಯಲ್ಲಿ ಗರಿಷ್ಟ 18 ಲಕ್ಷ ರೂ.ಗಳ ವಾರ್ಷಿಕ ಆದಾಯದ ಮಿತಿಯಲ್ಲಿ ಸಾಕಷ್ಟು ಜನ ಫಲಾನುಭವಿಗಳು ಈ ಯೋಜನೆಗೆ ಲಭ್ಯರಾಗುತ್ತಾರೆ. ಸರಕಾರದಅಭಿವೃದ್ದಿ ಮಂತ್ರವಾದ ‘ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್’ ಸಿದ್ದಾಂತ ಸಮಾಜದ ಬಹಳ ದೊಡ್ದ ವರ್ಗಕ್ಕೆ ಲಾಭ ತರುತ್ತದೆ.
ಪ್ರಧಾನ ಮಂತ್ರಿ ನಗರ ಆವಾಸ್ ಯೋಜನಾದಡಿ ಕೇಂದ್ರದ ನೆರವು:
ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಈ ಯೋಜನೆಗೆ ಹಣಕಾಸು ನೆರವನ್ನು ಖಾತ್ರಿಗೊಳಿಸಿದೆ. 2017ರ ಜೂನ್ 17 ರಂದು ನಡೆದ ಸಂಪುಟ ಸಭೆಯಲ್ಲಿ ವಿವಿಧಘಟಕಗಳ ಅಡಿಯಲ್ಲಿ ಪ್ರತೀ ಫಲಾನುಭವಿಗೆ 1ಲಕ್ಷ್ಯ ರೂ.ಗಳಿಂದ 2.30ಲಕ್ಷ್ಯ.ರೂ.ಗಳವರೆಗೆ ಈ ಕೆಳಗಿನಂತೆ ನೆರವು ನೀಡಲು ಬದ್ಧತೆ ವ್ಯಕ್ತಪಡಿಸಲಾಗಿದೆ.
- ಈಗಿರುವಲ್ಲೇ ಕೊಳಚೆ ಪ್ರದೇಶ ಅಭಿವೃದ್ಧಿ (ಐ.ಎಸ್.ಎಸ್.ಆರ್.): ಈ ಯೋಜನೆಯಡಿ ಕೊಳಚೆ ಪ್ರದೇಶಗಳಲ್ಲಿರುವ ವಾಸದ ಮನೆಗಳನ್ನು ಅದೇ ಸ್ಥಳದಲ್ಲಿ ಮರುಅಭಿವೃದ್ಧಿಪಡಿಸಲಾಗುವುದು.ಇಲ್ಲಿ ಭೂಮಿಯನ್ನು ಸಂಪನ್ಮೂಲವಾಗಿ ಪರಿಗಣಿಸಿ ಕೊಳಚೆವಾಸಿಗಳಿಗೆ ಬಹುಮಹಡಿ ಕಟ್ಟಡಗಳಲ್ಲಿ ಎಲ್ಲಾ ಮೂಲಸೌಕರ್ಯಗಳೊಂದಿಗೆ ಉಚಿತವಾಗಿಪಕ್ಕಾ ಮನೆ ಒದಗಿಸಿಕೊಡಲಾಗುವುದು. ಅಗತ್ಯ ಇರುವೆಡೆಗಳಲ್ಲಿ ಕೇಂದ್ರದಿಂದ 1 ಲಕ್ಷ್ಯ ರೂ,ಗಳವರೆಗೆ ನೆರವು ನೀಡಲಾಗುವುದು.
- ಪಾಲುದಾರಿಕೆಯಲ್ಲಿ ಕಡಿಮೆ ವೆಚ್ಚದಲ್ಲಿ ಮನೆ ಒದಗಿಸುವಿಕೆ (ಎ.ಎಚ್.ಪಿ)-ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು/ನಗರಗಳು/ಖಾಸಗಿ ವಲಯಗಳ ಸಹಭಾಗಿತ್ವದಲ್ಲಿಕೈಗೆತ್ತಿಕೊಳ್ಳುವ ವಸತಿ ಯೋಜನೆಗಳಲ್ಲಿ ಶೇಖಡಾ 35 ರಷ್ಟನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ ಫಲಾನುಭವಿಗಳಿಗೆಂದು ಗುರುತು ಮಾಡಿಟ್ಟರೆ ಪ್ರತೀ ಮನೆಗೂ ಕೇಂದ್ರದಿಂದ1.50 ಲಕ್ಷ್ಯ.ರೂ. ನೆರವು ಕೊಡಲಾಗುವುದು. ಆದರೆ ಇಂತಹ ಪ್ರತೀ ಯೋಜನೆಯಲ್ಲಿ ಕನಿಷ್ಟ 250 ಘಟಕಗಳು ಇರಬೇಕಾಗುತ್ತದೆ.
- ಫಲಾನುಭವಿ ಕೇಂದ್ರಿತ ನಿರ್ಮಾಣ (ಬಿ.ಎಲ್.ಸಿ)-ಆರ್ಥಿಕವಾಗಿ ಹಿಂದುಳಿದ ವರ್ಗದ ಫಲಾನುಭವಿ ಕುಟುಂಬ ತಾನಾಗಿಯೇ ಹೊಸ ಮನೆ ಕಟ್ಟಿಕೊಳ್ಳುವುದಾದರೆ ಅಥವಾಈಗಿರುವ ಮನೆಯ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವುದಾದರೆ ಕೇಂದ್ರ ತಲಾ 1.50 ಲಕ್ಷ್ಯ. ರೂ. ನೆರವು ನೀಡುತ್ತದೆ.
- ಸಾಲ ಆಧಾರಿತ ಸಬ್ಸಿಡಿ ಯೋಜನೆ (ಸಿ.ಎಲ್.ಎಸ್.ಎಸ್)- ಆರ್ಥಿಕವಾಗಿ ಹಿಂದುಳಿದವರು, ಕಡಿಮೆ ಆದಾಯದ ಗುಂಪುಗಳು ಮತ್ತು ಮಧ್ಯಮ ಆದಾಯ ವರ್ಗದಫಲಾನುಭವಿಗಳು ಹೊಸ ನಿರ್ಮಾಣಕ್ಕೆ ಮತ್ತು ಹೆಚ್ಚುವರಿ ಕೊಠಡಿಗಳ ಸೇರ್ಪಡೆ, ಅಡುಗೆ ಮನೆಯ ಸೇರ್ಪಡೆ, ಶೌಚಾಲಯ ಇತ್ಯಾದಿಗಳನ್ನು ನಿರ್ಮಿಸುವುದಾದರೆ ಅದಕ್ಕೆ ಪಡೆಯುವಸಾಲದ ಮೇಲಿನ ಬಡ್ಡಿಗೆ ಸಬ್ಸಿಡಿಯ ರೂಪದಲ್ಲಿ ಕೇಂದ್ರ ನೆರವು ನೀಡುತ್ತದೆ.
ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯದ ಗುಂಪುಗಳ ಫಲಾನುಭವಿಗಳು ಪಡೆಯುವ 6 ಲಕ್ಷ್ಯ ರೂ.ಗಳವರೆಗಿನ ಸಾಲಕ್ಕೆ 20ವರ್ಷದವರೆಗೆ 6.50 ಶೇಖಡಾ ಬಡ್ಡಿಸಬ್ಸಿಡಿಯನ್ನು, ವಾರ್ಷಿಕ 6ಲಕ್ಷ್ಯದಿಂದ 12 ಲಕ್ಶ್ಯ. ರೂಗಳ ವರೆಗಿನ ಆದಾಯದ ಮಧ್ಯಮ ವರ್ಗದ ಫಲಾನುಭವಿಗಳಿಗೆ 20 ವರ್ಷಗಳ ಅವಧಿಯ 9ಲಕ್ಷ್ಯ ರೂ.ಗಳವರೆಗಿನ ಸಾಲಕ್ಕೆ 4 ಶೇಖಡಾ ಸಬ್ಸಿಡಿ ಮತ್ತು ವಾರ್ಷಿಕ ಆದಾಯ 12ರಿಂದ 18 ಲಕ್ಷ್ಯ.ರೂ.ಗಳವರೆಗಿನ ಮಧ್ಯಮ ವರ್ಗದ ಫಲಾನುಭವಿಗಳಿಗೆ 9ಲಕ್ಷ್ಯದವರೆಗಿನ ಸಾಲಕ್ಕೆ ಶೇಖಡಾ 3ರಷ್ಟು ಬಡ್ಡಿಸಬ್ಸಿಡಿಯನ್ನು ನೀಡಲಾಗುವುದು.ಈ ಸಬ್ಸಿಡಿ ಮೊತ್ತ 2.30 ಲಕ್ಯ ರೂ.ಗಳಿಂದ 2.40ಲಕ್ಷ್ಯ.ರೂ.ಗಳಷ್ಟಾಗಲಿದ್ದು ಫಲಾನುಭವಿಗಳ ಮಾಸಿಕ ಮರುಪಾವತಿ ಕಂತಿನ ಹೊರೆಯನ್ನುತಗ್ಗಿಸಲು ಸರಕಾರ ಪಾವತಿಸುತ್ತದೆ.
ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಕಡಿಮೆ ಆದಾಯದ ಗುಂಪುಗಳ ಫಲಾನುಭವಿಗಳ ಮನೆ ನಿರ್ಮಾಣದ ಸಂಧರ್ಭದಲ್ಲಿ ಆಯಾ ಮನೆ ಆ ಕುಟುಂಬದ ವಯಸ್ಕ ಮಹಿಳಾಸದಸ್ಯೆಯ ಹೆಸರಿನಲ್ಲಿರಬೇಕು ಅಥವಾ ಕುಟುಂಬದ ವಯಸ್ಕ ಪುರುಷ ಮತ್ತು ಮಹಿಳೆಯ ಹೆಸರಿನಲ್ಲಿ ಜಂಟಿಯಾಗಿ ಇರಬೇಕಾಗುತ್ತದೆ.
ಮಧ್ಯಮ ವರ್ಗದ ಸಾಲ ಆಧಾರಿತ ಸಬ್ಸಿಡಿ ಯೋಜನೆ ಅಡಿ ಮನೆ ನಿರ್ಮಿಸುವುದಾದಲ್ಲಿ ಸಂಪಾದನೆ ಮಾಡುವ ವಯಸ್ಕ ಸದಸ್ಯರು ಮದುವೆಯಾಗಿರದಿದ್ದರೂ ಬಡ್ಡಿ ಸಬ್ಸಿಡಿ ಪಡೆಯಲುಅರ್ಹರಾಗಿರುತ್ತಾರೆ.
ಪಾಲುದಾರಿಕೆಯಲ್ಲಿ ಕಡಿಮೆ ವೆಚ್ಚದ ಮನೆ ಯೋಜನೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿಯೂ ಪ್ರಾಯೋಜಿಸಲಾಗುತ್ತಿದೆ ಮತ್ತು ಕೆಲವೆಡೆ ಅವುಗಳನ್ನು ಪ್ರಸ್ಥಾವಿಸಲಾಗಿದೆ.
ಮನೆ ನಿರ್ಮಾಣ ಹೆಚ್ಚಳದಿಂದಾಗುವ ಪರಿಣಾಮ:
ಕಟ್ಟಡ ನಿರ್ಮಾಣವು 250ರಷ್ಟು ಪೂರಕ ಕೈಗಾರಿಕೆಗಳನ್ನು ಪೆÇೀಷಿಸುವುದಲ್ಲದೆ ಜಿಡಿಪಿಯ ಮೇಲೆ ಬಹುಸ್ತರ ಗುಣಾತ್ಮಕ ಪರಿಣಾಮ ಬೀರುತ್ತದೆ ಮತ್ತು ಇದು ಅತಿ ಹೆಚ್ಚುಉದ್ಯೋಗ ಸೃಷ್ಟಿಸುವ ಎರಡನೇ ಕ್ಷೇತ್ರವಾಗಿದೆ. ಕಡಿಮೆ ಖರ್ಚಿನ ಮನೆ ನಿರ್ಮಾಣ ವಲಯಕ್ಕೆ ‘ಮೂಲ ಸೌಕರ್ಯ’ ಸ್ಥಾನಮಾನವನ್ನು ನೀಡಿರುವುದೂ ಸೇರಿದಂತೆ ಸರಕಾರ ಈಕ್ಷೇತ್ರದ ಬಲವರ್ಧನೆಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಕಡಿಮೆ ಖರ್ಚಿನ ಮನೆಗಳ ಯೋಜನೆಯ ಲಾಭಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿಯೂ ಸೇರಿದಂತೆ 20 ರಿಯಾಯತಿಗಳನ್ನು ಒದಗಿಸಿದೆ. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ)ಕಾಯ್ದೆ 2016 ನ್ನು ಜಾರಿಗೆ ತಂದಿದ್ದು, ಈ ಎಲ್ಲಾ ಕ್ರಮಗಳಿಂದ ಹೆಚ್ಚುವರಿ ಉದ್ಯೋಗಾವಕಾಶಗಳುಸೃಷ್ಟಿಯಾಗಬಹುದೆಂಬ ನಿರೀಕ್ಷೆ ಇದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಕ್ರಿಯಾಶೀಲ ಅನುಷ್ಟಾನಕ್ಕಾಗಿ ಕೈಗೊಂಡ ಕ್ರಮಗಳು:
ಸರಕಾರವು 2017-18ರ ಮುಂಗಡ ಪತ್ರದಲ್ಲಿ ಕಡಿಮೆ ವೆಚ್ಚದ ಮನೆಗಳಿಗೆ ಮೂಲಸೌಕರ್ಯ ಸ್ಥಾನ-ಮಾನವನ್ನು ಘೋಷಿಸಿದ್ದು, ಇದರಿಂದ ಈ ಕ್ಷೇತ್ರಕ್ಕೆ ಕಡಿಮೆ ಬಡ್ಡಿಯ ಸಾಲದಹರಿಯುವಿಕೆ ಹೆಚ್ಚಲಿದೆ ಮತ್ತು ಸಾಲದ ಪ್ರಮಾಣದಲ್ಲೂ ಏರಿಕೆಯಾಗಲಿದೆ.
2004 ರಿಂದ 2014ರ ಅವಧಿಯಲ್ಲಿ ಜೆ.ಎನ್.ನರ್ಮ್ ಅಡಿಯಲ್ಲಿ ವಸತಿ ಯೋಜನೆಗಳ ಅನುಷ್ಟಾನದ ಅನುಭವದ ಹಿನ್ನೆಲೆಯಲ್ಲಿ ಕಡಿಮೆ ವೆಚ್ಚದ ಮನೆಗಳಿಗೆ ಭೂಮಿಯನ್ನು ಗುರುತಿಸಿ ಮಹಾಯೋಜನೆಯನ್ನು (ಮಾಸ್ಟರ್ ಪ್ಲಾನ್) ರೂಪಿಸುವಂತೆ ಇಲ್ಲವೇ ತಿದ್ದುಪಡಿ ಮಾಡುವುದನ್ನು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕಡ್ಡ್ಡಾಯಗೊಳಿಸಿ ಸರಕಾರ ಆದೇಶಹೊರಡಿಸಿದೆ.ಇದಲ್ಲದೆ ಕಟ್ಟಡ ನಕ್ಷೆಗಳಿಗೆ, ಲೇಔಟ್ ಗಳಿಗೆ ಮಂಜೂರಾತಿ ನೀಡಲು ಏಕಗವಾಕ್ಷ ವ್ಯವಸ್ಥೆ, ಭೂಮಿ ವಸತಿ ವಲಯದಲ್ಲಿದ್ದರೆ ಅದನ್ನು ಪ್ರತ್ಯೇಕ ಕ್ರೃಷಿಯೇತರ ಅನುಮತಿಪಡೆಯುವುದರಿಂದ ಹೊರತಾಗಿಸುವಿಕೆಯಂತಹ ಕ್ರಮಗಳನ್ನು ಕೈಗೊಂಡಿದೆ.ಜತೆಗೆ ಹೆಚ್ಚುವರಿ ಎ¥sóï.ಎ.ಆರ್/ಎ¥sóï.ಎಸ್.ಐ./ಟಿ.ಡಿ.ಆರ್.ಗಳನ್ನು ಕೊಳಚೆ ಮರು ಅಭಿವೃದ್ಧಿಯೋಜನೆಗಳ ಸಂಧರ್ಭದಲ್ಲಿ ಒದಗಿಸಲೂ ಕ್ರಮ ಕೈಗೊಂಡಿದೆ.
ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆಯ ಪ್ರಗತಿ: 2004-2014ರೊಂದಿಗೆ ತುಲನಾತ್ಮಕ ನೋಟ.
ಈ ಯೋಜನೆ 2015ರ ಜೂನ್ ತಿಂಗಳಲ್ಲಿ ಆರಂಭಗೊಂಡಂದಿನಿಂದ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯ ಇದುವರೆಗೆ 2008 ನಗರಗಳು ಮತ್ತು ಪಟ್ಟಣಗಳಲ್ಲಿನಗರಗಳ ಬಡವರಿಗಾಗಿ ಕಡಿಮೆ ಖರ್ಚಿನ 17,73,533 ಮನೆಗಳ ನಿರ್ಮಣಕ್ಕೆ ಹಾಗು ಹಣಕಾಸು ಒದಗಣೆಗೆ ಅನುಮತಿ ನೀಡಿದೆ.
ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆಯಡಿ ಮಂಜೂರಾದ ಕಡಿಮೆ ಖರ್ಚಿನ ಮನೆಗಳ ಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ 2004 ರಿಂದ 2014 ರವರೆಗೆ 939 ನಗರ ಮತ್ತುಪಟ್ಟಣಗಳಲ್ಲಿ ಜವಾಹರಲಾಲ್ ನೆಹರೂ ನಗರ ನವೀಕರಣ ಯೋಜನೆ ಮತ್ತು ರಾಜೀವ್ ಆವಾಸ್ ಯೋಜನೆಯಡಿ ಮಂಜೂರಾದ 13,82,768 ಮನೆಗಳಿಗೆ ಹೋಲಿಸಿದರೆ3,90,765ರಷ್ಟು ಹೆಚ್ಚಾಗಿದೆ.
2004 ರಿಂದ 2014ರವರೆಗೆ 31,000 ಕೋಟಿ ರೂ.ಗಳಿಗೆ ಮಂಜೂರಾತಿ ನೀಡಿದ ಪ್ರಮಾಣಕ್ಕೆ ಹೋಲಿಸಿದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಒಟ್ಟು 96,266 ಕೋಟಿ.ರೂ.ಗಳ ಹೂಡಿಕೆಗೆ ಅಂಗೀಕಾರ ನೀಡಲಾಗಿದೆ.
2004ರಿಂದ 2014ರ ಅವಧಿಯಲ್ಲಿ ಕೇಂದ್ರದ ಸಹಾಯದ ಪ್ರಮಾಣ 20,920 ಕೋಟಿ ರೂ.ಗಳಷ್ಟಿತ್ತು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಈಗಾಗಲೇ ಅಂಗೀಕಾರ ನೀಡಿರುವಕೇಂದ್ರದ ನೆರವಿನ ಪ್ರಮಾಣ 27,883 ಕೋಟಿ.ರೂ.ಗಳಷ್ಟಾಗಿದೆ. 2014-17ರ ನಡುವೆ 3.55 ಲಕ್ಷ್ಯದಷ್ಟು ಕಡಿಮೆ ಖರ್ಚಿನ ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ. 2004-2014 ರ ನಡುವಿನ ಹತ್ತು ವರ್ಷಗಳ ಅವಧಿಯಲ್ಲಿ ಈ ಪ್ರಮಾಣ 7.99 ಲಕ್ಷ ಇತ್ತು.
ಕಳೆದ ಮೂರು ವರ್ಷಗಳಲ್ಲಿ ಕಡಿಮೆ ಖರ್ಚಿನ ಮನೆ ನಿರ್ಮಾಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಸಿಗುತ್ತಿದೆ ಮತ್ತು ಈ ಕ್ಷೇತ್ರದಲ್ಲಿಯ ಸಾಧನೆ ಹಿಂದಿನ ಹತ್ತು ವರ್ಷಗಳಿಗೆ ಹೋಲಿಸಿದರೆಉತ್ತಮವಾಗಿಯೂ ಇದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಹೂಡಿಕೆ ಮತ್ತು ಕೇಂದ್ರ ಮಂಜೂರು ಮಾಡಿದ ನೆರವಿನ ಪ್ರಮಾಣ ಇಂದಿನವರೆಗೆ, ರಾಜ್ಯ ಮತ್ತುಕೇಂದ್ರಾಡಳಿತ ಪ್ರದೇಶವಾರು ಪಟ್ಟಿ:
ರಾಜ್ಯ/ಕೇಂದ್ರಾಡಳಿತಪ್ರದೇಶ
|
ಪ್ರಧಾನಮಂತ್ರಿಆವಾಸ್ಯೋಜನೆಯಡಿಮಂಜೂರಾದಕಡಿಮೆಖರ್ಚಿನಮನೆಗಳು
|
ಅಂಗೀಕೃತವಾದಹೂಡಿಕೆ
(ಕೋಟಿರೂ.ಗಳಲ್ಲಿ)
|
ಕೇಂದ್ರದಿಂದಮಂಜೂರಾದನೆರವು
(ಕೋಟಿರೂ.ಗಳಲ್ಲಿ)
|
ಆಂಧ್ರ ಪ್ರದೇಶ
|
1,95,047
|
10,697
|
2,954
|
ಬಿಹಾರ
|
88,293
|
3,909
|
1,453
|
ಛತ್ತೀಸ್‍ಗಢ
|
30,075
|
2,760
|
445
|
ಗೋವಾ
|
11
|
1.12
|
0.22
|
ಗುಜರಾತ್
|
1,44,687
|
9,581
|
2,025
|
ಹರ್ಯಾಣ
|
4,299
|
338
|
224
|
ಹಿಮಾಚಲ ಪ್ರದೇಶ
|
4,890
|
222
|
96
|
ಜಮ್ಮು ,ಕಾಶ್ಮೀರ
|
6,243
|
292
|
104
|
ಜಾರ್ಖಂಡ
|
64,567
|
2,411
|
1,007
|
ಕರ್ನಾಟಕ
|
1,46,548
|
6,288
|
2,492
|
ಕೇರಳ
|
28,275
|
943
|
451
|
ಮಧ್ಯ ಪ್ರದೇಶ
|
2,09,711
|
15,572
|
3,247
|
ಮಹಾರಾಷ್ಟ್ರ
|
1,26,081
|
13,458
|
1,915
|
ಒಡಿಶಾ
|
48,855
|
2,108
|
824
|
ಪಂಜಾಬ್
|
42,681
|
1.199
|
600
|
ರಾಜಸ್ಥಾನ
|
37,856
|
2,646
|
685
|
ತಮಿಳು ನಾಡು
|
2,27,956
|
8,279
|
3,482
|
ಉತ್ತರ ಪ್ರದೇಶ
|
20,682
|
1,056
|
466
|
ಉತ್ತರಾಖಂಡ
|
7,904
|
510
|
201
|
ಪಶ್ಚಿಮ ಬಂಗಾಲ
|
1,44,369
|
5,870
|
2,175
|
ಈಶಾನ್ಯ ರಾಜ್ಯಗಳು
|
|
|
|
ಅರುಣಾಚಲ ಪ್ರದೇಶ
|
|
|
|
...
(Release ID: 1488458)
Visitor Counter : 224