ಸಂಪುಟ

ಸರ್ಕಾರದ ಇ-ಮಾರುಕಟ್ಟೆ ತಾಣ (ಜಿಇಎಂ ಎಸ್.ಪಿ.ವಿ.) ಎಂದು ಕರೆಯಲಾಗುವ ವಿಶೇಷ ಉದ್ದೇಶದ ವಾಹಕ (ಸ್ಪೆಷಲ್ ಪರ್ಸಸ್ ವೆಹಿಕಲ್) ಸ್ಥಾಪನೆಗೆ ಸಂಪುಟದ ಅನುಮೋದನೆ

Posted On: 12 APR 2017 6:07PM by PIB Bengaluru

ಸರ್ಕಾರದ ಇ-ಮಾರುಕಟ್ಟೆ ತಾಣ (ಜಿಇಎಂ ಎಸ್.ಪಿ.ವಿ.) ಎಂದು ಕರೆಯಲಾಗುವ ವಿಶೇಷ ಉದ್ದೇಶದ ವಾಹಕ (ಸ್ಪೆಷಲ್ ಪರ್ಸಸ್ ವೆಹಿಕಲ್) ಸ್ಥಾಪನೆಗೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈ ಕೆಳಗಿನ ಅಂಶಗಳಿಗೆ ತನ್ನ ಅನುಮೋದನೆ ನೀಡಿದೆ:-

1. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳಿಗೆ ಅಗತ್ಯವಾದ ಸರಕು ಮತ್ತು ಸೇವೆಗಳ ಸಂಗ್ರಹಣೆಗೆ ಅವಕಾಶ ನೀಡಲು ಕಂಪನಿಗಳ ಕಾಯಿದೆ 2013ರ ಅಡಿ ನೋಂದಣಿಯಾದ ಸೆಕ್ಷನ್ 8ರ ಕಂಪನಿಯ ರಾಷ್ಟ್ರೀಯ ಸಾರ್ವಜನಿಕ ದಾಸ್ತಾನು ಪೋರ್ಟಲ್ ಆಗಿ ಸರ್ಕಾರದ ಇ-ಮಾರುಕಟ್ಟೆ ತಾಣ (ಜಿಇಎಂ ಎಸ್.ಪಿ.ವಿ.) ಎಂದು ಕರೆಯಲಾಗುವ ವಿಶೇಷ ಉದ್ದೇಶದ ವಾಹಕ (ಸ್ಪೆಷಲ್ ಪರ್ಸಸ್ ವೆಹಿಕಲ್) ಸ್ಥಾಪನೆಗೆ. ಜಿಇಎಂ ಎಸ್.ಪಿ.ವಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವಾಲಯಗಳು/ಇಲಾಖೆಗಳು, ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ (ಸಿಪಿಎಸ್.ಯುಗಳು ಮತ್ತು ಎಸ್.ಪಿ.ಎಸ್.ಯು.ಗಳು), ಸ್ವಾಯತ್ತ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸಾಮಾನ್ಯವಾಗಿ ಬಳಸುವ ಸರಕುಗಳು ಮತ್ತು ಸೇವೆಗಳನ್ನು ಪಾರದರ್ಶಕ ಮತ್ತು ಸಮರ್ಥ ಮಾದರಿಯಲ್ಲಿ ದಾಸ್ತಾನು ಮಾಡಿಕೊಳ್ಳಲು ಎರಡೂ ತುದಿಯ ಮಾರುಕಟ್ಟೆ ತಾಣದ ಆನ್ ಲೈನ್ ಸಂಪರ್ಕ ಒದಗಿಸುತ್ತದೆ. 

2. ಡಿಜಿಎಸ್ ಅಂಡ್ ಡಿ 2017ರ ಅಕ್ಟೋಬರ್ 31ರಹೊತ್ತಿಗೆ ತನ್ನ ಕಾರ್ಯಚಟುವಟಿಕೆಯನ್ನು ನಿಲ್ಲಿಸಲಿದೆ ಮತ್ತು ಬರಖಾಸ್ತು ಮಾಡಲಿದೆ. ಒಂದೊಮ್ಮೆ 2017ರ ಅಕ್ಟೋಬರ್ 31ರೊಳಗೆ ಡಿಜಿಎಸ್ ಅಂಡ್ ಡಿಯನ್ನು ಬರಖಾಸ್ತು ಮಾಡಲು ಆಗದಿದ್ದಲ್ಲಿ, ಸೂಕ್ತ ಸಮಜಾಯಿಸಿ ನೀಡಿ ಅದನ್ನು ಮುಚ್ಚುವ ದಿನಾಂಕವನ್ನು 2018ರ ಮಾರ್ಚ್ 31ರವರೆಗೆ ಇಲಾಖೆ ವಿಸ್ತರಿಸಬಹುದಾಗಿದೆ.
 

****


(Release ID: 1487786) Visitor Counter : 56
Read this release in: English