ಪ್ರಧಾನ ಮಂತ್ರಿಯವರ ಕಛೇರಿ

29.01.2017ರಂದು ಆಕಾಶವಾಣಿಯ ಮೂಲಕ ಪ್ರಧಾನಮಂತ್ರಿಯವರು ಮಾಡಿದ ‘ಮನ್ ಕಿ ಬಾತ್’ ಭಾಷಣದ ಕನ್ನಡ ಪಠ್ಯ

Posted On: 29 JAN 2017 1:39PM by PIB Bengaluru

 29.01.2017ರಂದು ಆಕಾಶವಾಣಿಯ ಮೂಲಕ ಪ್ರಧಾನಮಂತ್ರಿಯವರು ಮಾಡಿದ ಮನ್ ಕಿ ಬಾತ್ ಭಾಷಣದ ಕನ್ನಡ ಪಠ್ಯ

ನನ್ನ ಪ್ರೀತಿಯ ದೇಶವಾಸಿಗಳೇನಿಮಗೆಲ್ಲರಿಗೂ ನಮಸ್ಕಾರ. ಜನವರಿ 26ರಂದು, ನಮ್ಮ ಗಣರಾಜ್ಯೋತ್ಸವವನ್ನುನಾವೆಲ್ಲರೂ ದೇಶದ ಮೂಲೆ ಮೂಲೆಗಳಲ್ಲಿ ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಿದೆವು. ಭಾರತದ ಸಂವಿಧಾನ ಮತ್ತು ನಾಗರಿಕರ ಕರ್ತವ್ಯನಾಗರಿಕರ ಹಕ್ಕುಗಳುಪ್ರಜಾಪ್ರಭುತ್ವದ ಬಗ್ಗೆ ನಮ್ಮ ಬದ್ಧತೆ,ಇವೆಲ್ಲವೂಒಂದು ರೀತಿಯಲ್ಲಿ ನಮ್ಮ ಸಂಸ್ಕಾರಗಳ ಹಬ್ಬವಾಗಿದೆ.  ಇದು ಮುಂಬರುವ ನಮ್ಮ ಪೀಳಿಗೆಗೆ ನಮ್ಮ ಪ್ರಜಾಪ್ರಭುತ್ವ ಮತ್ತು ಅವರ ಪ್ರಜಾಸತ್ತಾತ್ಮಕ ಬಾಧ್ಯತೆಗಳ ಬಗ್ಗೆ ಜಾಗರೂಕತೆಯನ್ನು ಮೂಡಿಸುತ್ತದೆ ಮತ್ತು ಅವರಿಗೆ ಸಂಸ್ಕೃತಿ, ನೈತಿಕ ಮೌಲ್ಯಗಳು ಮತ್ತು ನಮ್ಮ ಪ್ರಜಾಪ್ರಭುತ್ವದಲ್ಲಿ ಅಂತರ್ಗತವಾಗಿರುವರೂಢಿಗಳ ಬಗ್ಗೆ ಅರಿವು ಮೂಡಿಸುತ್ತದೆ.   ಆದರೆ ಇಂದಿಗೂ ನಮ್ಮ ದೇಶದಲ್ಲಿ ನಾಗರಿಕರ ಕರ್ತವ್ಯಹಕ್ಕುಗಳ ಕುರಿತಂತೆ ಎಷ್ಟು ವ್ಯಾಪಕವಾಗಿ ಮತ್ತು ಆಳವಾಗಿ ಚರ್ಚೆ ಆಗಬೇಕಿತ್ತೋ ಎಷ್ಟು ವಿಸ್ತೃತವಾಗಿ ಚರ್ಚೆಗಳು ಆಗಿಲ್ಲ.  ಎಲ್ಲ ಹಂತಗಳಲ್ಲೂಎಲ್ಲ ಸಮಯದಲ್ಲೂ ನಮ್ಮ ಹಕ್ಕುಗಳಿಗೆ ನಾವು ಎಷ್ಟು ಒತ್ತು ನೀಡುತ್ತೇವೋ ಅಷ್ಟೇ ಒತ್ತನ್ನು ನಮ್ಮ ಕರ್ತವ್ಯಗಳ ಮೇಲೂ ನೀಡಬೇಕೆಂದು ನಾನು ಭಾವಿಸುತ್ತೇನೆ. ನಾಗರಿಕರ ಹಕ್ಕು ಮತ್ತು ಕರ್ತವ್ಯಗಳೆಂಬುದು ರೈಲ್ವೆ ಹಳಿಗಳಂತೆ, ಅದರ ಮೇಲೆ ಭಾರತದ ಪ್ರಜಾಪ್ರಭುವತ್ವದ ರೈಲು ವೇಗವಾಗಿ ಚಲಿಸಬಲ್ಲುದಾಗಿದೆ.

ನಾಳೆ ಜನವರಿ 30. ನಮ್ಮ ಪೂಜ್ಯ ಬಾಪೂಜಿಯವರ ಪುಣ್ಯತಿಥಿ. ಜನವರಿ 30 ರಂದು ನಾವೆಲ್ಲ ಬೆಳಗ್ಗೆ 11 ಗಂಟೆಗೆ ದೇಶಕ್ಕೆ ಪ್ರಾಣವನ್ನೇ ಕೊಟ್ಟ ಹುತಾತ್ಮರಿಗೆ 2 ನಿಮಿಷಗಳ ಕಾಲ ಮೌನ ಆಚರಿಸುವ ಮೂಲಕ ಶೃದ್ಧಾಂಜಲಿ ಅರ್ಪಿಸೋಣ. ಒಂದು ಸಮಾಜದ ರೂಪದಲ್ಲಿರಾಷ್ಟ್ರದ ರೂಪದಲ್ಲಿ ಜನವರಿ 30 ರಂದು ನಾವೆಲ್ಲ ಬೆಳಗ್ಗೆ 11 ಗಂಟೆಗೆ 2 ನಿಮಿಷಗಳ ಕಾಲ ಮೌನ ಶ್ರದ್ಧಾಂಜಲಿ ಅರ್ಪಿಸುವುದು ನಮ್ಮ ಸಹಜ ಸ್ವಭಾವವಾಗಬೇಕು. ಈ ಎರಡು ನಿಮಿಷಗಳ ಮೌನ ನಮ್ಮ ಹುತಾತ್ಮರಿಗೆ ನಾವು ಸಾಮೂಹಿಕಸಂಕಲ್ಪದೊಂದಿಗೆ ನೀಡುವ ಶೃದ್ಧಾಂಜಲಿ ಆಗಬೇಕು.

ನಮ್ಮ ದೇಶದಲ್ಲಿಸೈನ್ಯ ಮತ್ತು ಭದ್ರತಾ ಪಡೆಗಳ ಬಗ್ಗೆ ಒಂದು ಸಹಜವಾದ ಗೌರವದ ಭಾವನೆ ಇದೆ.  ಈ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅದರ ಮುನ್ನಾ ದಿನ ವಿವಿಧ ಶೌರ್ಯ ಪ್ರಶಸ್ತಿಗಳಿಗೆ ಭಾಜನರಾದ ಯುವ ನಾಯಕರಿಗೆ ಮತ್ತು ಅವರ ಕುಟುಂಬದವರಿಗೆ ನಾನು ಅಭಿನಂದನೆ ಸಲ್ಲಿಸಿ, ಗೌರವಿಸಿದ್ದೇನೆ. ಈ ಶೌರ್ಯ ಪುರಸ್ಕಾರಗಳಲ್ಲಿ ವಿವಿಧ ವರ್ಗಗಳಿದ್ದು, ಅವುಗಳಲ್ಲಿ ಕೀರ್ತಿ ಚಕ್ರಶೌರ್ಯ ಚಕ್ರಪರಮ್ ವಿಶಿಷ್ಟ ಸೇವಾ ಪದಕವಿಶಿಷ್ಟ ಸೇವಾ ಪದಕಗಳೂ ಸೇರಿವೆ.  ನೀವೆಲ್ಲರೂ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುವ ಕಾರಣ, ಅದರಲ್ಲೂ ನಮ್ಮ ಯುವಕರಿಗೆ ನಾನು ಮನವಿ ಮಾಡಲು ಬಯಸುವುದೇನೆಂದರೆ, ನೀವು ಒಂದು ಕೆಲಸ ಮಾಡಬಹುದು. ಈ ಬಾರಿ ಯಾವ ಯಾವ ವೀರರಿಗೆ ಶೌರ್ಯ ಪ್ರಶಸ್ತಿಗಳು ಲಭಿಸಿದೆಯೋ ಅವರ ವಿವರವನ್ನು ಅಂತರ್ಜಾಲದಲ್ಲಿ ಹುಡುಕಿ ತೆಗೆಯಿರಿ ಮತ್ತು ಅವರ ಕುರಿತು ಎರಡು ಒಳ್ಳೇ ಮಾತುಗಳನ್ನು ಬರೆದು ನಿಮ್ಮ ಸ್ನೇಹಿತರು, ಸಂಗಾತಿಗಳೊಂದಿಗೆ ಹಂಚಿಕೊಳ್ಳಿ. ಯಾವಾಗ ನಾವು ಅವರ ಶೌರ್ಯದ,ವೀರತ್ವದಪರಾಕ್ರಮದ ವಿಷಯಗಳನ್ನು ಆಳವಾಗಿ ಅರಿತುಕೊಳ್ಳುತ್ತೇವೋ ಆಗ ನಮಗೆ ಅಚ್ಚರಿ ಎನಿಸುತ್ತದೆಹೆಮ್ಮೆ ಮೂಡುತ್ತದೆ ಮತ್ತು ಪ್ರೇರಣೆಯೂ ದೊರಕುತ್ತದೆ.

ನಾವೆಲ್ಲರೂ ಜನವರಿ 26 ರಂದು ಸಂಭ್ರಮದ ಮತ್ತು ಉತ್ಸಾಹಭರಿತ ಸಂಗತಿಗಳಲ್ಲಿ ಆನಂದವಾಗಿದ್ದರೆ ಕಾಶ್ಮೀರದಲ್ಲಿ ದೇಶದ ರಕ್ಷಣೆಗೆ ನಿಯುಕ್ತಿಗೊಂಡಿದ್ದ ನಮ್ಮ ಸೇನೆಯ ಕೆಲವು ಯೋಧರು ಹಿಮಕುಸಿತದಿಂದಾಗಿ ಹುತಾತ್ಮರಾಗಿದ್ದಾರೆ. ನಾನು ಈ ಎಲ್ಲ ವೀರ ಯೋಧರಿಗೆ ಶೃದ್ಧಾಂಜಲಿ ಅರ್ಪಿಸುತ್ತೇನೆ ಮತ್ತು ತಲೆಬಾಗಿ ವಂದಿಸುತ್ತೇನೆ.

ನನ್ನ ಯುವ ಮಿತ್ರರೇನಾನು ನಿರಂತರವಾಗಿ ಮನ್ ಕಿ ಬಾತ್ (ಮನದಾಳದ ಮಾತು) ಕಾರ್ಯಕ್ರಮ ನೀಡುತ್ತಿರುವುದು ನಿಮಗೆಲ್ಲ ಗೊತ್ತಿದೆ. ಜನವರಿಫೆಬ್ರವರಿ,ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಎಲ್ಲರ ಮನೆಯಲ್ಲೂ ತೀವ್ರ ಪರೀಕ್ಷೆಯ ತಿಂಗಳುಗಳಾಗಿರುತ್ತವೆ. ಮನೆಯಲ್ಲಿ ಒಂದಿಬ್ಬರು ಮಕ್ಕಳ ಪರೀಕ್ಷೆ ಇರುತ್ತದೆಆದರೆ ಸಂಪೂರ್ಣ ಕುಟುಂಬವೇ ಪರೀಕ್ಷೆಯ ಒತ್ತಡ ಎದುರಿಸುತ್ತಿರುತ್ತದೆ. ಹಾಗಾಗಿ ಇದು ನನ್ನ ವಿದ್ಯಾರ್ಥಿ ಮಿತ್ರರೊಂದಿಗೆ, ಅವರ ಪೋಷಕರೊಂದಿಗೆ ಮತ್ತು ಶಿಕ್ಷಕರೊಂದಿಗೆ ಮಾತನಾಡಲು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ.  ಏಕೆಂದರೆ ಎಷ್ಟೋ ವರ್ಷಗಳಿಂದ ನಾನು ಎಲ್ಲೆ ಹೋದರೂಯಾರನ್ನೇ ಭೇಟಿಮಾಡಿದರೂ ಅವರಿಗೆ ಪರೀಕ್ಷೆ ಎಂಬುದು ಒಂದು ದೊಡ್ಡ ಆತಂಕದ ವಿಷಯ ಎನಿಸಿದ್ದನ್ನು ಗಮನಿಸಿದ್ದೇನೆ. ಸಮಸ್ಯೆಗೆ ಸಿಲುಕಿದ ಕುಟುಂಬಗಳು ಕಿರುಕುಳ ಅನುಭವಿಸುವ ವಿದ್ಯಾರ್ಥಿಗಳು,ಚಿಂತಾಕ್ರಾಂತರಾದ ಶಿಕ್ಷಕರು- ಒಂದು ರೀತಿಯ ವಿಚಿತ್ರವಾದ ಮನೋವೈಜ್ಞಾನಿಕ ವಾತಾವರಣ ಪ್ರತಿಯೊಂದು ಮನೆಯಲ್ಲೂ ಕಂಡುಬರುತ್ತದೆ. ಇಂಥ ಪರಿಸ್ಥಿತಿಯಿಂದ ನಾವು ಹೊರಬರಬೇಕು ಎಂದು ನನಗೆ ಯಾವಾಗಲೂ ಅನ್ನಿಸಿದೆಹಾಗಾಗಿ ಇಂದು ನಾನು ನನ್ನ  ಯುವ ಮಿತ್ರರೊಂದಿಗೆ ಸ್ವಲ್ಪ ವಿಸ್ತಾರವಾಗಿ ಮಾತನಾಡಬಯಸುತ್ತೇನೆ. ನಾನು ಈ ವಿಷಯದ ಮೇಲೆ ಮಾತನಾಡುತ್ತೇನೆ ಎಂದು ಘೋಷಿಸಿದಾಗ ಬಹಳಷ್ಟು ಜನ ಪೋಷಕರುಶಿಕ್ಷಕರುವಿದ್ಯಾರ್ಥಿಗಳು ನನಗೆ ಸಂದೇಶಪ್ರಶ್ನೆಗಳು ಮತ್ತು ಸಲಹೆಗಳನ್ನು ಕಳುಹಿಸಿದ್ದಾರೆ ಮತ್ತು ತಮ್ಮ ದುಗುಡವನ್ನೂ ವ್ಯಕ್ತಪಡಿಸಿದ್ದಾರೆ ಮತ್ತುಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ. ಹೀಗೆ ಹರಿದು ಬಂದ ಇದನ್ನೆಲ್ಲ ನೋಡಿದ ನಂತರ ನನ್ನ ಮನಸ್ಸಿನಲ್ಲಿ ಬಂದ ಕಲ್ಪನೆಗಳನ್ನು ಇಂದು ನಿಮ್ಮೊಂದಿಗೆ ಇಂದು ಹಂಚಿಕೊಳ್ಳಬಯಸುತ್ತೇನೆ. ಸೃಷ್ಟಿ ಎಂಬುವವರಿಂದ ಒಂದು ದೂರವಾಣಿ ಸಂದೇಶ ಬಂದಿದೆ. ಸೃಷ್ಟಿ ಏನು ಹೇಳುತ್ತಾರೆ ಎಂಬುದನ್ನು ನೀವೂ ಕೇಳಿ:-

 ’ಸಾರ್ಪರೀಕ್ಷೆ ಸಮಯದಲ್ಲಿ ಹೆಚ್ಚಾಗಿ ನಮ್ಮ ಮನೆಗಳಲ್ಲಿನೆರೆಹೊರೆಯಲ್ಲಿನಮ್ಮ ಸಮಾಜದಲ್ಲಿ ಬಹಳ ಹೆದರಿಕೆಯ ಮತ್ತು ಭೀತಿಯ ವಾತಾವರಣ ಸೃಷ್ಟಿಯಾಗುತ್ತದೆ ಎಂಬುದನ್ನು ಹೇಳಬಯಸುತ್ತೇನೆ. ಹಾಗಾಗಿ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಕ್ಕುವುದಂತೂ ದೂರದ ಮಾತು ಅಲ್ಲದೇ ತುಂಬಾ ನಿರುತ್ಸಾಹಗೊಳ್ಳುತ್ತಾರೆ. ನಾನು ನಿಮ್ಮನ್ನು ಕೇಳಬಯಸುವುದಿಷ್ಟೇ ’ ಈ ವಾತಾವರಣ ಖುಷಿಯಿಂದ ತುಂಬಿರಲು ಸಾಧ್ಯವಿಲ್ಲವೇ?’

ಪ್ರಶ್ನೆಯನ್ನು ಸೃಷ್ಟಿ ಕೇಳಿರಬಹುದು ಆದರೆಈ ಪ್ರಶ್ನೆ ನಿಮ್ಮೆಲ್ಲರ ಮನದಲ್ಲಿಯೂ ಇರುವುದಾಗಿದೆ. ಪರೀಕ್ಷೆ ನಮ್ಮೊಳಗೆ ಒಂದು ಸಂತಸದ ಸಂದರ್ಭವಾಗಿರಬೇಕು. ವರ್ಷಪೂರ್ತಿ ಶ್ರಮಪಟ್ಟ ಬಳಿಕಒಬ್ಬಬ್ಬರಿಗೂ ಅದನ್ನು ವ್ಯಕ್ತಪಡಿಸುವ ಅವಕಾಶ ಲಭಿಸಿದೆ ಎಂಬ ಸಂಭ್ರಮದಉತ್ಸಾಹದ ಸಮಯ ಇದಾಗಬೇಕು. ಪರೀಕ್ಷೆಯೆಂಬುದು ಕೆಲವರಿಗಷ್ಟೇ ಸಂತಸ (ಪ್ಲೆಶರ್) ಆಗಿರುತ್ತದೆಆದರೆ ಹಲವರಿಗೆ ಪರೀಕ್ಷೆ ಒಂದು ಒತ್ತಡ (ಪ್ರೆಶರ್) ಆಗಿರುತ್ತದೆ. ಇದನ್ನು ಪ್ಲೆಶರ್ ಎಂದು ಭಾವಿಸುತ್ತೀರೋ ಅಥವಾ ಪ್ರೆಶರ್ ಎಂದೋ ಎಂಬುದನ್ನು ನೀವೇ ನಿರ್ಣಯಿಸಬೇಕಿದೆ. ಯಾರು ಪ್ಲೆಶರ್ ಎಂದು ಪರಿಗಣಿಸುತ್ತಾರೋ ಅವರು ಸಾಧನೆ ಮಾಡುತ್ತಾರೆ. ಆದರೆ ಪ್ರೆಶರ್ ಎಂದುಕೊಳ್ಳುವವರು ಪಶ್ಚಾತ್ತಾಪ ಪಡುತ್ತಾರೆ. ಅದಕ್ಕಾಗಿಯೇ ನನ್ನ ದೃಷ್ಟಿಯಲ್ಲಿ ಪರೀಕ್ಷೆ ಎಂಬುದು ಒಂದು ಉತ್ಸವಅದನ್ನು ಒಂದು ಹಬ್ಬವಾಗಿ ಪರಿಗಣಿಸಿ. ಹಬ್ಬಉತ್ಸವಗಳಲ್ಲಿ ನಮ್ಮಲ್ಲಿರುವ ಉತ್ತಮವಾದ್ದು ಹೊರಹೊಮ್ಮುತ್ತದೆ.  ಉತ್ಸವದ ಸಮಯದಲ್ಲೇ ಸಮಾಜದ ಶಕ್ತಿಯ ನೈಜತೆಯ ಸಾಕಾರವಾಗುತ್ತದೆ. ಎಲ್ಲದಕ್ಕೂ ಉತ್ತಮ ಅಭಿವ್ಯಕ್ತಿಯ ಅಗತ್ಯವಿದೆ. ಸಾಮಾನ್ಯವಾಗಿ ನಾವು ನಮ್ಮ ಬಗ್ಗೆ ಯೋಚಿಸುತ್ತೇವೆ ನಾವು ಎಷ್ಟು ಅಶಿಸ್ತಿನಿಂದ ಕೊಡಿದ್ದೇವೆ ಎಂದು ನಮಗೆ ಅನ್ನಿಸುತ್ತದೆ. ಆದರೆ ನಾವು 40-45 ದಿನಗಳ ಕಾಲ  ಆಚರಿಸುವ ಕುಂಭಮೇಳದ ವ್ಯವಸ್ಥೆಯನ್ನು ನೋಡಿದರೆ, ಈ ತಾತ್ಕಾಲಿಕ ವ್ಯವಸ್ಥೆಯ ನಡುವೆಯೂ ಜನರು ಅನುಸರಿಸುತ್ತಾ ಬಂದಿರುವ ಶ್ರೇಷ್ಠ ಶಿಸ್ತುಪಾಲನೆಯನ್ನು ಪ್ರದರ್ಶಿಸುತ್ತದೆ. ಇದು ಉತ್ಸವದ ಶಕ್ತಿಯಾಗಿದೆ. ಹೀಗಾಗಿ, ಪರೀಕ್ಷೆಯ ಸಮಯದಲ್ಲಿ ಕೂಡ ಕುಟುಂಬದಲ್ಲಿಸ್ನೇಹಿತರಲ್ಲಿನೆರೆಹೊರೆಯಲ್ಲಿ ಒಂದು ಉತ್ಸವದ ವಾತಾವರಣ ನಿರ್ಮಾಣವಾಗಬೇಕು. ಆಗ ಈ ಪ್ರೆಶರ್ ಪ್ಲೆಶರ್ ಆಗಿ ಬದಲಾವಣೆಯಾಗುತ್ತದೆ. ಈ ಹಬ್ಬದ ವಾತಾವರಣವು ಹಗುರವಾದ ಪರಿಸರವನ್ನು ಸೃಷ್ಟಿಸುತ್ತದೆ. ಹೀಗಾಗಿ ನಾನು, ತಂದೆತಾಯಿಯರಿಗೆ ಈ ಮೂರು ನಾಲ್ಕು ತಿಂಗಳ ಅವಧಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸುವಂತೆ ಮನವಿ ಮಾಡುತ್ತೇನೆ. ಇಡೀ ಕುಟುಂಬ ಒಂದು ತಂಡದಂತೆ ಈ ಉತ್ಸವದ ಯಶಸ್ಸಿಗಾಗಿ ಶ್ರಮಿಸಿ ತಮ್ಮ ತಮ್ಮ ಪಾತ್ರವನ್ನು ಹುರುಪಿನಿಂದ ನಿಭಾಯಿಸಬೇಕು. ಆಗ ನೀವೇ ಬದಲಾವಣೆಯನ್ನು ನೋಡುತ್ತೀರಿ. ವಾಸ್ತವವಾಗಿ,ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮತ್ತು ಕಚ್‌ನಿಂದ ಕಾಮ್‌ ರೂಪ್‌ವರೆಗೆಅಮ್ರೇಲಿಯಿಂದ ಅರುಣಾಚಲ ಪ್ರದೇಶದವರೆಗೆ ಈ ಮೂರ‍್ನಾಲ್ಕು ತಿಂಗಳುಗಳು ಪರೀಕ್ಷೆಗಳ ಸಮೃದ್ಧಿಯೇ ಕಾಣುತ್ತದೆ. ನಾವು ಪ್ರತಿವರ್ಷ  ಈ ಮೂರ‍್ನಾಲ್ಕು ತಿಂಗಳುಗಳನ್ನು ನಮ್ಮದೇ ಆದ ರೀತಿಯಲ್ಲಿ ನಮ್ಮ ನಮ್ಮ ಪರಂಪರೆಗನುಸಾರವಾಗಿನಮ್ಮ ಕುಟುಂಬದ ಪರಿಸ್ಥಿತಿಗಳನ್ನು ಆಧರಿಸಿ ಉತ್ಸವವಾಗಿ ಪರಿವರ್ತಿಸುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿಯೇ ನಿಮಗೆಲ್ಲರಿಗೂ ನಾನು ಹೆಚ್ಚು ನಗುತ್ತಿರಿ ಮತ್ತು ಹೆಚ್ಚು ಅಂಕ ಪಡೆಯಿರಿ (‘smile more score more’)ಎಂದು ಹೇಳಬಯಸುತ್ತೇನೆ!. ಈ ಕಾಲದಲ್ಲಿ ನೀವು ಎಷ್ಟು ಸಂತೋಷದಿಂದ ಇರುತ್ತೀರೋ ಅಷ್ಟು ಹೆಚ್ಚು ಅಂಕಗಳನ್ನು ಪಡೆಯುತ್ತೀರಿ. ಸುಮ್ಮನೆ ನೀವೇ ಹೀಗೆ ಮಾಡಿ ನೋಡಿ. ನೀವು ಸಂತೋಷದಿಂದ ಇದ್ದಾಗನಗುತ್ತಾ ಇದ್ದಾಗ ನಿರುಮ್ಮಳವಾಗಿರುತ್ತೀರಿ. ಆ ಅನುಭವ ಹೊಂದುವುದನ್ನು ನೀವೇ ಗಮನಿಸಿರಬಹುದು. ನೀವು ಸಹಜವಾಗಿ ನಿರುಮ್ಮಳವಾದಾಗ ನಿಮಗೆ ವರ್ಷಗಳಷ್ಟು ಹಳೆಯ ಸಂಗತಿಗಳೂ ಸಹಜವಾಗೇ ನೆನಪಿಗೆ ಬರುತ್ತವೆ. ಒಂದು ವರ್ಷಕ್ಕೆ ಮೊದಲು ತರಗತಿಯಲ್ಲಿ ಶಿಕ್ಷಕರು ಏನು ಹೇಳಿದ್ದರೋ ಅದರ ಪೂರ್ಣ ದೃಶ್ಯವೇ ಕಣ್ಣ ಮುಂದೆ ತೇಲಿಬರುತ್ತದೆ. ನೆನಪನ್ನು ಮರುಕಳಿಸುವ ಶಕ್ತಿ ನಿಮ್ಮ ನಿರುಮ್ಮಳತೆಯಿಂದ ಅಧಿಕವಾಗುತ್ತದೆ ಎಂಬುದು ನಿಮಗೆ ಗೊತ್ತಿರಬೇಕು. ನೀವು ಒತ್ತಡದಲ್ಲಿದ್ದರೆ ಎಲ್ಲ ಬಾಗಿಲುಗಳು ಮುಚ್ಚಿದಂತಿರುತ್ತವೆ. ವಿಚಾರಗಳು ಹೊಳೆಯುವುದಿಲ್ಲ. ವಿಚಾರಧಾರೆ ಸ್ಥಗಿತಗೊಂಡು ಅದೇ ಒಂದು ಭಾರವೆನಿಸುತ್ತದೆ. ಪರೀಕ್ಷೆಯಲ್ಲೂ ನಿಮಗೆ ಪುಸ್ತಕಅಧ್ಯಾಯಪುಟ ಸಂಖ್ಯೆಪುಟದಲ್ಲಿ ಮೇಲೆ ಬರೆದಿದ್ದ, ಇಲ್ಲ ಕೆಳಗೆ ಬರೆದಿರುವ ಇವೆಲ್ಲವೂ ನೆನಪಿಗೆ ಬರುತ್ತವೆಆದರೆ ಆ ಒಂದು ನಿರ್ದಿಷ್ಟ ಶಬ್ದ ನೆನಪಿಗೆ ಬಾರದೇ ಇರುವುದನ್ನು ನೀವು ಗಮನಿಸಿರಬಹುದು. ಆದರೆ ಪರೀಕ್ಷೆ ಮುಗಿಸಿ ಕೋಣೆಯಿಂದ ಹೊರ ಬಂದ ಕೂಡಲೇ ಇದ್ದಕ್ಕಿದ್ದಂತೆ ನಿಮಗೆ ಅದು ನೆನಪಾಗುತ್ತದೆಹೌದಲ್ವಾ ಇದೇ ಶಬ್ದವಲ್ಲವೇ ಎಂದು. ಒಳಗೆ ಯಾಕೆ ನೆನಪಾಗಲಿಲ್ಲ. ನಿಮಗೆ ಒತ್ತಡ ಇತ್ತು. ಹೊರಗಡೆ ಹೇಗೆ ನೆನಪಾಯ್ತುಯಾರೂ ನಿಮಗೆ ಹೇಳಿಕೊಡಲಿಲ್ಲ. ಆದರೆ ನಿಮ್ಮ ನೆನಪಿನಾಳದಿಂದ ಅದು ಹೊರಬಂತುಏಕೆಂದರೆ ನೀವು  ವಿಶ್ರಾಂತ ಸ್ಥಿತಿಯಲ್ಲಿ ಆಗಿರುತ್ತೀರಿ. ಆದ್ದರಿಂದ ಜ್ಞಾಪಕ ಶಕ್ತಿಯನ್ನು ಕ್ರೊಡೀಕರಿಸುವ ಉತ್ತಮ ಉಪಾಯವೆಂದರೆ ಅದು ಬಿಗುಮಾನವಿಲ್ಲದೆ ಇರುವುದು ಮಾತ್ರ. ನನ್ನ ಸ್ವಂತ ಅನುಭವದಿಂದ ಹೇಳುತ್ತಿದ್ದೇನೆ - ಒತ್ತಡದಲ್ಲಿದ್ದರೆ ನಾವು ವಿಷಯಗಳನ್ನು ಮರೆತುಬಿಡುತ್ತೇವೆಅದೇ ನಿರುಮ್ಮಳವಾಗಿದ್ದಾಗ ಕಲ್ಪನೆಯೇ ಮಾಡಿಕೊಳ್ಳದಂತಹ ಹಲವಾರು ವಿಷಯಗಳು ನೆನಪಿಗೆ ಬರುತ್ತವೆ ಮತ್ತು ಅವು ಬಹಳ ಉಪಯುಕ್ತವಾಗಿರುತ್ತವೆ. ಅಂದರೆ ನಿಮಗೆ ಜ್ಞಾನವಿಲ್ಲವೆಂದಲ್ಲನಿಮ್ಮ ಬಳಿ ಮಾಹಿತಿ ಇಲ್ಲವೆಂದಲ್ಲನೀವು ಕಷ್ಟಪಟ್ಟಿಲ್ಲ ಎಂದೂ ಅಲ್ಲ, ಆದರೆ ಒತ್ತಡವಿದ್ದಾಗ ನಿಮ್ಮ ಜ್ಞಾನಮಾಹಿತಿ ಹುದುಗಿ ಹೋಗಿ ಒತ್ತಡವೇ ನಿಮ್ಮ ಮೇಲೆ ಸವಾರಿ ಮಾಡುತ್ತದೆ. ಅದಕ್ಕಾಗಿಯೇ ಸಂತುಷ್ಟ ಮನಸ್ಥಿತಿಯೇ ಹೆಚ್ಚು ಅಂಕ ಗಳಿಕೆಯ ಗುಟ್ಟು’ ಎಂಬುದು ತಿಳಿಯುವುದು ಅವಶ್ಯಕ. ಒಮ್ಮೊಮ್ಮೆ ನಾವು ಸರಿಯಾದ ದೃಷ್ಟಿಕೋನದಿಂದ ಪರೀಕ್ಷೆಯನ್ನು ನೋಡುತ್ತಿಲ್ಲ ಎಂದೆನಿಸಬಹುದು. ಅದು ಜೀವನ್ಮರಣದ ಪ್ರಶ್ನೆ ಎಂದೂ ಅನ್ನಿಸಬಹುದು. ನೀವು ಯಾವ ಪರೀಕ್ಷೆ ಬರೆಯಲು ಹೋಗುತ್ತಿದ್ದೀರೊ ಅದು ನೀವು ವರ್ಷಪೂರ‍್ತಿ ಕಲಿತದ್ದರ ಪರೀಕ್ಷೆ. ಇದು ನಿಮ್ಮ ಜೀವನದ ಪರೀಕ್ಷೆಯಲ್ಲ. ನೀವು ಎಂಥ ಜೀವನ ನಡೆಸಿದ್ದೀರಿನಡೆಸುತ್ತಿದ್ದೀರಿ ಮತ್ತು ಭವಿಷ್ಯದಲ್ಲಿ ಹೇಗೆ ಜೀವಿಸಬಯಸುವಿರಿ ಎಂಬುದರ ಪರೀಕ್ಷೆ ಅಲ್ಲ. ನಿಮ್ಮ ಜೀವನದಲ್ಲಿ ತರಗತಿಯಲ್ಲಿ ಕುಳಿತು ಬರೆದ ಪರೀಕ್ಷೆ ಹೊರತಾಗಿ ಎಷ್ಟೋ ಇತರ ಪರೀಕ್ಷೆ ಎದುರಿಸಿದ ಸಂದರ್ಭಗಳು ಬಂದಿರಬಹುದು. ಹಾಗಾಗಿ ಪರೀಕ್ಷೆಗಳು ಜೀವನದ ಸಫಲತೆ ಮತ್ತು ವಿಫಲತೆಯೊಂದಿಗೆ ಯಾವ ಸಂಬಂಧ ಹೊಂದಿಲ್ಲ.  ಇಂಥ ಒತ್ತಡದಿಂದ ಮುಕ್ತರಾಗಿ. ನಮ್ಮ ಮುಂದೆ ಸ್ಫೂರ್ತಿದಾಯಕವಾಗಿ ಮಾಜಿ ರಾಷ್ಟ್ರಪತಿಗಳಾದ ಡಾ.ಎ ಪಿ ಜೆ ಅಬ್ದುಲ್ ಕಲಾಂರ ಪ್ರೇರಣೆಯ ಉದಾಹರಣೆ ಇದೆ. ಅವರು ವಾಯುಸೇನೆಯಲ್ಲಿ ಭರ್ತಿಯಾಗಲು ಪರೀಕ್ಷೆ ಎದುರಿಸಿ ವಿಫಲರಾದರು. ಅವರು  ವಿಫಲತೆಯಿಂದ ನೊಂದಿದ್ದರೆಜೀವನದಲ್ಲಿ ಸೋತೆ ಎಂದುಕೊಂಡಿದ್ದರೆ ಭಾರತಕ್ಕೆ ಇಂಥ ದೊಡ್ಡ ವಿಜ್ಞಾನಿ ಸಿಗುತ್ತಿದ್ದರೆಇಂಥ ಉತ್ತಮ ರಾಷ್ಟ್ರಪತಿ ಸಿಕ್ಕುತ್ತಿದ್ದರೆಇಲ್ಲ. ಎಂದಿಗೂ ಸಿಗುತ್ತಿರಲಿಲ್ಲ. ಒಬ್ಬರು ರಿಚಾ ಆನಂದ್ ಎಂಬುವರು ನನಗೆ ಒಂದು ಪ್ರಶ್ನೆ ಕಳುಹಿಸಿದ್ದಾರೆ:-

 ’ಇಂದಿನ ದಿನಗಳಲ್ಲಿ ಶಿಕ್ಷಣದ ಮುಂದಿರುವ ದೊಡ್ಡ ಸವಾಲೆಂದರೆ ಶಿಕ್ಷಣ ಎಂಬುದು ಪರೀಕ್ಷೆಗೆ ಕೇಂದ್ರೀಕೃತವಾಗಿದೆ. ಗಳಿಸುವ ಅಂಕಗಳು ಹೆಚ್ಚು ಮಹತ್ವ ಪಡೆದಿವೆ. ಏಕೆಂದರೆ ಸ್ಪರ್ಧೆ ಬಹಳ ಹೆಚ್ಚಾಗಿದೆ. ಜೊತೆಗೆ ವಿದ್ಯಾರ್ಥಿಗಳಲ್ಲೂ ಸಹ ಆತಂಕ ಬಹಳ ಹೆಚ್ಚಾಗಿದೆ. ಹೀಗಾಗಿ ಶಿಕ್ಷಣದ ಇಂದಿನ ವ್ಯವಸ್ಥೆ ಮತ್ತು ಭವಿಷ್ಯದ ಬಗ್ಗೆ ನಿಮ್ಮ ವಿಚಾರಗಳನ್ನು ತಿಳಿದುಕೊಳ್ಳಬಯಸುತ್ತೇನೆ

ಇಲ್ಲಿ ಇವರು ಸ್ವತಃ ಉತ್ತರ ಕೊಟ್ಟಿದ್ದಾರೆ. ಆದರೆ ರಿಚಾಜೀ ಅವರು ಇದರಲ್ಲಿ ನನ್ನ ಮಾತುಗಳನ್ನೂ ಸೇರಿಸಲು ಬಯಸಿದ್ದಾರೆ. ಅಂಕಗಳು ಮತ್ತು ಅಂಕಪಟ್ಟಿ ಸೀಮಿತ ಉದ್ದೇಶ ಮಾತ್ರ ಈಡೇರಿಸುತ್ತದೆ. ಜೀವನದಲ್ಲಿ ಅದೇ ಸರ್ವಸ್ವವಲ್ಲ. ನೀವು ಎಷ್ಟು ಜ್ಞಾನ ಪಡೆದಿರುವಿರಿ ಎಂಬುದರ ಮೇಲೆ ಜೀವನ ಸಾಗುತ್ತದೆ. ನೀವು ಅರಿತಿದ್ದನ್ನು ಅಳವಡಿಸಿಕೊಂಡಿದ್ದೀರಾ ಎಂಬುದರ ಮೇಲೆ ಜೀವನ ನಡೆಯುತ್ತದೆ. ನಿಮ್ಮ ಧ್ಯೇಯ ಮತ್ತು ಗುರಿ ಸಾಧಿಸುವಲ್ಲಿ ಎರಡರ ಮಧ್ಯೆ ಸಮತೋಲನ ಇದೆಯೇ ಎಂಬುದರ ಮೇಲೆ ಜೀವನ ಸಾಗುತ್ತದೆ. ನೀವು ಇವುಗಳಲ್ಲಿ ಭರವಸೆಯಿಟ್ಟರೆ ಅಂಕಗಳು ನಿಮ್ಮ ಬೆನ್ನತ್ತಿ ಬರುತ್ತವೆ. ಅಂಕಗಳ ಹಿಂದೆ ಓಡುವ ಪ್ರಮೇಯ ಬರುವುದಿಲ್ಲ. ಜೀವನದಲ್ಲಿ ನಿಮಗೆ ಜ್ಞಾನ ಉಪಯೋಗಕ್ಕೆ ಬರುತ್ತದೆ. ಕೌಶಲ್ಯ ಉಪಯೋಗವಾಗುತ್ತದೆ. ಆತ್ಮವಿಶ್ವಾಸ ಉಪಯೋಗವಾಗುತ್ತದೆಸಂಕಲ್ಪ ಶಕ್ತಿ ಉಪಯೋಗಕ್ಕೆ ಬರುತ್ತದೆ. ನೀವೇ ನನಗೆ ಹೇಳಿ, ನಿಮಗೆ ಒಬ್ಬರು ಕುಟುಂಬ ವೈದ್ಯರಿದ್ದಾರೆ, ನಿಮ್ಮ ಕುಟುಂಬದ ಸದಸ್ಯರೆಲ್ಲರೂ ಅವರ ಬಳಿಗೇ ಹೋಗುತ್ತೀರಿ. ಅವರು ನಿಮ್ಮ ಕುಟುಂಬದ ವೈದ್ಯರು.  ನೀವು, ನಿಮ್ಮ ಕುಟುಂಬದ ವೈದ್ಯರಿಗೆ, ಎಷ್ಟು ಅಂಕ ಪಡೆದು ಉತ್ತೀರ್ಣರಾದಿರಿ ಎಂದು ಬಹುಶಃ  ಕೇಳಿರಲಿಕ್ಕಿಲ್ಲ. ನಿಮಗೆ ಅವರು ಒಬ್ಬ ವೈದ್ಯರ ರೂಪದಲ್ಲಿ ಉತ್ತಮರುನಿಮಗೆ ಅವರಿಂದ ಉಪಯೋಗವಾಗುತ್ತಿದೆ ಎಂದುನೀವು ಅವರು ನೀಡುವ ಚಿಕಿತ್ಸೆಯನ್ನು ಪಡೆಯುತ್ತಿದ್ದೀರಿ, ಅವರ ಸೇವೆಯನ್ನು ಪಡೆಯುತ್ತಿದ್ದೀರಿ. ನೀವು ಯಾವುದಾದರೂ ದೊಡ್ಡ ಕಾನೂನು ಹೋರಾಟಕ್ಕೆ ವಕೀಲರ ಬಳಿ ಹೋಗುವಿರಿಆಗ ನೀವು ಆ ವಕೀಲರ ಅಂಕ ಪಟ್ಟಿಯನ್ನು ನೋಡುತ್ತೀರಾನೀವು ಅವರ ಅನುಭವಜ್ಞಾನ ಮತ್ತು ಸಫಲತೆಯ ಹಾದಿಯನ್ನು ನೋಡುತ್ತೀರಿ. ಹಾಗಾಗಿ ಈ ಅಂಕಗಳೆಂಬ ಹೊರೆ ನಮ್ಮನ್ನು ಸರಿಯಾದ ಮಾರ್ಗದಲ್ಲಿ ಪಯಣಿಸುವುದನ್ನು ನಿಲ್ಲಿಸಬಹುದು. ಆದರೆ ಇದರರ್ಥ ಓದುವುದೇ ಬೇಡ ಎಂದಲ್ಲ. ಪರೀಕ್ಷೆಗಳಿಗಾಗಿ ಓದುವುದು ಅವಶ್ಯಕ. ನಾನು ಎಲ್ಲಿದ್ದೆಇಂದು ಎಲ್ಲಿದ್ದೀನಿ ಎಂಬುದನ್ನು ಅರಿಯಲು ಇದು ಅವಶ್ಯಕ. ನೀವು ನಿಮ್ಮ ಜೀವನದ ಬಗ್ಗೆ ಸ್ವಯಂ ಅವಲೋಕನ ಮಾಡಿಕೊಂಡಾಗ ಸೂಕ್ಷ್ಮವಾಗಿ ಗಮನಿಸಿದರೆ ಅಂಕಗಳ ಬೆನ್ನತ್ತಿದರೆಒಮ್ಮೊಮ್ಮೆ ಕಿರು ದಾರಿಗಳನ್ನು ಹುಡುಕುವಿರಿಆಯ್ದ ವಿಷಯಗಳ ಮೇಲಷ್ಟೇ ಕೇಂದ್ರೀಕರಿಸುವಿರಿ. ಆದರೆ ನೀವು ಆಯ್ದ ವಿಷಯಗಳನ್ನು ಬಿಟ್ಟು ಬೇರೆ ಯಾವುದೇ ವಿಷಯ ಬಂದರೆನೀವು ಸಿದ್ಧಪಡಿಸಿಕೊಂಡ ಪ್ರಶ್ನೆಗಳ ಹೊರತಾಗಿ ಬೇರೆ ಪ್ರಶ್ನೆ ಎದುರಾದಾಗ ನೀವು ಒಮ್ಮೆಲೇ ನಿರಾಸೆ ಹೊಂದುವಿರಿ, ಕುಸಿದು  ಹೋಗುವಿರಿ. ಆದರೆ ನೀವು ಜ್ಞಾನವನ್ನೇ ಕೇಂದ್ರವಾಗಿರಿಸಿಕೊಂಡರೆ ಹಲವಾರು ವಿಷಯಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತೀರಿ. ಆದರೆ ಅಂಕಗಳ ಮೇಲೆ ಗಮನವಿಟ್ಟರೆ ನಿಧಾನವಾಗಿ ನಿಮ್ಮಲ್ಲೇ ಮುದುರಿಕೊಳ್ಳುತ್ತಾ ಹೋಗುತ್ತೀರಿ ಹಾಗೂ ಅಂಕಗಳನ್ನು ಪಡೆಯಲು ನಿಮ್ಮನ್ನು ನೀವು ನಿರ್ದಿಷ್ಟ ಪರಿಧಿಗೆ ಸೀಮಿತಗೊಳಿಸುವಿರಿ. ಹೀಗಾಗಿ ಕೆಲವೊಮ್ಮೆ ಪರೀಕ್ಷೆಗಳಲ್ಲಿ ಅಂಕ ಪಡೆಯುವಲ್ಲಿ ಬುದ್ಧಿವಂತರಾದರೂ, ಜೀವನದಲ್ಲಿ ವಿಫಲರಾಗುತ್ತೀರಿ.

ರಿಚಾ ಜೀ ಅವರು ಪ್ರತಿಸ್ಪರ್ಧೆ ಬಗ್ಗೆಯೂ ಹೇಳಿದ್ದಾರೆ.  ಇದರ  ಅರ್ಥ ಇನ್ನೊಬ್ಬರೊಂದಿಗೆ ಸ್ಪರ್ಧೆ. ಇದು ಒಂದು ದೊಡ್ಡ ಮನೋವೈಜ್ಞಾನಿಕ ಹೋರಾಟವಾಗಿದೆ. ನಿಜವಾಗಿ ಹೇಳುವುದಾದರೆ ಜೀವನ ಮುಂದುವರೆಸಲು ಪ್ರತಿಸ್ಪರ್ಧೆ ಉಪಯುಕ್ತವಲ್ಲ. ಜೀವನ ಮುಂದುವರಿಸಲು ಅನುಸ್ಪರ್ಧೆ’’ಇರಬೇಕುಅಂದರೆ ನಮಗೆ ನಾವೇ ಸ್ಪರ್ಧೆಯೊಡ್ಡಿಕೊಳ್ಳಬೇಕು. ಕಳೆದು ಹೋದ ದಿನಕ್ಕಿಂತ ಮುಂಬರುವ ದಿನ ಹೇಗೆ ಉತ್ತಮವಾಗಿರಬೇಕುಹಳೆಯ ಫಲಿತಾಂಶಗಳಿಗಿಂತ ಮುಂದಿನ ಫಲಿತಾಂಶ ಹೇಗೆ ಹೆಚ್ಚು ಉತ್ತಮಗೊಳಿಸಬೇಕು? ಎಂದು ನಿಮಗೆ ನೀವು ಸ್ಪಷ್ಟಪಡಿಸಿಕೊಳ್ಳಬೇಕು. ನಾನು ನಿಮಗೆ ಕ್ರೀಡಾ ಕ್ಷೇತ್ರದ ಒಂದು ಉದಾಹರಣೆ ನೀಡುತ್ತೇನೆ.. ಯಶಸ್ವಿ ಕ್ರೀಡಾಳುಗಳ ಗುಟ್ಟು ಏನು ಅಂದರೆ ಅವರು ತಮ್ಮೊಳಗೇ ಸ್ಫರ್ಧೆ ನಡೆಸುತ್ತಾರೆ. ನಾವು ಶ್ರೀಯುತ ಸಚಿನ್ ತೆಂಡುಲ್ಕರ್ ಅವರ ಉದಾಹರಣೆಯನ್ನು ತೆಗೆದುಕೊಂಡರೆ20 ವರ್ಷಗಳ ಕಾಲನಿರಂತರವಾಗಿ ತಮ್ಮದೇ ದಾಖಲೆ ಮುರಿಯುತ್ತಾ ತಮ್ಮನ್ನೇ ತಾವು ಸೋಲಿಸಿಕೊಳ್ಳುತ್ತಾ ಪ್ರತಿ ಬಾರಿಯೂ ಮುನ್ನಡೆಯುತ್ತಿದ್ದರು. ತುಂಬಾ ಅದ್ಭುತವಾದ ಜೀವನ ಯಾತ್ರೆ ಅವರದು. ಏಕೆಂದರೆ ಅವರು ಪ್ರತಿಸ್ಪರ್ಧೆ ಹೊರತಾಗಿ ಅನುಸ್ಪರ್ಧೆಯ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದರು.

ಸ್ನೇಹಿತರೆ, ಜೀವನದ ಪ್ರತಿ ಕ್ಷೇತ್ರದಲ್ಲಿಯೂ, ಅದರಲ್ಲೂ ನೀವು ಪರೀಕ್ಷೆ ಎದುರಿಸುವಾಗ, ನೀವು ಹಿಂದೆ ಶಾಂತಿಯಿಂದ 2 ಗಂಟೆ ಓದುತ್ತಿದ್ದರೆ ಈಗ ಅದನ್ನು 3 ಗಂಟೆಗೆ ವಿಸ್ತರಿಸಬಹುದೇಹಿಂದೆ ಬೆಳಗ್ಗೆ ಬೇಗ ಏಳಲು ನಿರ್ಧರಿಸಿದ್ದರೂ ತಡವಾಗುತ್ತಿತ್ತುಈಗ ನೀವು ಸರಿಯಾದ ಸಮಯಕ್ಕೆ ಎದ್ದೇಳುತ್ತಿದ್ದೀರಾಹಿಂದೆ ಪರೀಕ್ಷೆ ಒತ್ತಡದಿಂದ ನಿದ್ದೆ ಬರುತ್ತಿರಲಿಲ್ಲಈಗ ನಿದ್ದೆ ಬರುತ್ತದೆಯೇನಿಮ್ಮನ್ನು ನೀವೇ ಪರೀಕ್ಷಿಸಿಕೊಂಡರೆ ನಿಮ್ಮ ಗಮನಕ್ಕೆ ಬರುತ್ತದೆ - ಪ್ರತಿಸ್ಪರ್ಧೆಯಲ್ಲಿ ಪರಾಜಯಹತಾಶೆನಿರಾಸೆ ಮತ್ತು ಅಸೂಯೆ ಹುಟ್ಟಿಕೊಳ್ಳುತ್ತವೆ. ಆದರೆ ಅನುಸ್ಪರ್ಧೆ ಆತ್ಮ ಮಂಥನಆತ್ಮ ಚಿಂತನೆಗೆ ಎಡೆಮಾಡಿಕೊಡುತ್ತದೆ. ಸಂಕಲ್ಪ ಶಕ್ತಿಯನ್ನು ದೃಢಗೊಳಿಸುತ್ತದೆ. ನಿಮ್ಮನ್ನು ನೀವೇ ಸೋಲಿಸಿದಾಗ ಮುನ್ನಡೆಯುವ ಉತ್ಸಾಹ ತುಂಬುತ್ತದೆ. ಬಾಹ್ಯ ಶಕ್ತಿಯ ಅವಶ್ಯಕತೆ ನಮಗಿರುವುದಿಲ್ಲ. ನಮ್ಮೊಳಗೇ ಒಂದು ಶಕ್ತಿ ಹುಟ್ಟಿಕೊಳ್ಳುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ - ನೀವು ಯಾರೊಂದಿಗಾದರೂ ಪ್ರತಿಸ್ಪರ್ಧೆ ಮಾಡಿದಲ್ಲಿ ಆಗ 3 ಸಾಧ್ಯತೆಗಳು ದೊಡ್ಡದಾಗಿ ಕಂಡುಬರುತ್ತವೆ. ಒಂದು ನಾನು ಅವನಿಗಿಂತ ಉತ್ತಮ,  ಎರಡನೆಯದ್ದು ನೀವು ಅವರಿಗಿಂತ ಬಹಳ ಕಡಿಮೆ ಎಂದು ಇಲ್ಲವೇ ನೀವು ಅವರಿಗೆ ಸರಿಸಮಾನರಾಗಿದ್ದೀರಿ ಎಂದು. ನೀವು ಉತ್ತಮರಾದರೆ ಅಸಡ್ಡೆ ಮಾಡುತ್ತೀರಿ. ಅತಿಯಾದ ವಿಶ್ವಾಸ ಹೊಂದಿರುತ್ತೀರಿ. ಒಂದೊಮ್ಮೆ ಅವರಿಗಿಂತ ಕೆಳಮಟ್ಟಕ್ಕಿದ್ದರೆ ದುಃಖಿತರಾಗಿ ನಿರಾಸೆ ಹೊಂದುತ್ತೀರಿ. ಅಸೂಯೆ ಮೂಡುತ್ತದೆ.  ಅದು ನಿಮ್ಮನ್ನು ನಾಶಪಡಿಸುತ್ತಾ ಸಾಗುತ್ತದೆ. ಸರಿಸಮನಾಗಿದ್ದರೆ ಸುಧಾರಣೆಯ ಅವಶ್ಯಕತೆ ಇದೆ ಎಂಬುದನ್ನು ನೀವು ಮನಗಾಣುವುದೇ ಇಲ್ಲ. ಜೀವನ ಹೇಗೆ ಸಾಗಿದೆಯೋ ಹಾಗೇ ಮುಂದುವರಿಯುತ್ತದೆ. ಹಾಗಾಗಿ ನಿಮ್ಮೊಂದಿಗೇ ನೀವು ಸ್ಪರ್ಧಿಸಿ ಎಂದು ನಾನು ಆಗ್ರಹಿಸುತ್ತೇನೆ. ಹಿಂದೆ ಏನು ಮಾಡಿದ್ದೆಮುಂದೆ ಹೇಗೆ ಮಾಡುತ್ತೇನೆಹೇಗೆ ಇನ್ನೂ ಅದನ್ನು ಉತ್ತಮಗೊಳಿಸುತ್ತೇನೆ ಎಂಬುದರ ಬಗ್ಗೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ನಿಮ್ಮಲ್ಲಿ ಧನಾತ್ಮಕ ಪರಿವರ್ತನೆ ಆಗುವುದನ್ನು ನೀವೇ ಗಮನಿಸುತ್ತೀರಿ.

ಶ್ರೀಯುತ ಎಸ್. ಸುಂದರ್ ಅವರು ಪೋಷಕರ ಪಾತ್ರದ ಕುರಿತಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರು ಬರೆಯುತ್ತಾರೆಪರೀಕ್ಷೆ ಸಂದರ್ಭದಲ್ಲಿ ಪೋಷಕರ ಪಾತ್ರ ಬಹಳ ಮಹತ್ವಪೂರ್ಣವಾದದ್ದು ಎಂದು. ಮುಂದುವರಿದು ಅವರು ಬರೆಯುತ್ತಾರೆ - ’ ನನ್ನ ತಾಯಿ ಅಶಿಕ್ಷಿತಳಾಗಿದ್ದಳುಆದರೂ ಕೂಡ ನನ್ನ ಜೊತೆ ಕುಳಿತುಕೊಂಡು ಗಣಿತದ ಲೆಕ್ಕಗಳನ್ನು ಮಾಡಲು ಹೇಳುತ್ತಿದ್ದಳುಉತ್ತರವನ್ನು ಹೋಲಿಸಿ ನೋಡುತ್ತಿದ್ದಳುಹೀಗೆ ನನಗೆ ಸಹಾಯ ಮಾಡುತ್ತಿದ್ದಳು. ಎಂದು. ನನ್ನ ತಾಯಿ 10 ನೇ ತರಗತಿಯ ಪರೀಕ್ಷೆಯನ್ನೂ ಪಾಸ್ ಮಾಡಿಲ್ಲಆದರೆ ತಮಗೆ ಅವರ ಸಹಾಯವಿಲ್ಲದೆ ಸಿ ಬಿ ಎಸ್ ಸಿ ಪರೀಕ್ಷೆ ತೇರ್ಗಡೆ ಹೊಂದುವುದು ಅಸಾಧ್ಯವಾಗಿತ್ತು ಎಂದು ಬರೆಯುತ್ತಾರೆ.

ಸುಂದರ್ ಜೀನಿಮ್ಮ ಮಾತು ಸರಿಯಾಗಿದೆ. ನೀವು ಇಂದಿಗೂ ಗಮನಿಸಿರಬಹುದುನನಗೆ ಪ್ರಶ್ನೆಗಳನ್ನು ಕೇಳುವವರುಸಲಹೆಗಳನ್ನು ನೀಡುವವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ. ಏಕೆಂದರೆ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದಂತೆ ತಾಯಂದಿರು ಜಾಗೃತರಾಗಿರುವುದುಸಕ್ರಿಯರಾಗಿರುವುದುಬಹಳಷ್ಟು ವಿಷಯಗಳನ್ನು ಸರಳಗೊಳಿಸುತ್ತದೆ. ಪೋಷಕರಲ್ಲಿ ಹೇಳಬಯಸುವುದಿಷ್ಟೇ, - ಒಪ್ಪಿಕೊಳ್ಳುವುದುಕಲಿಸುವುದು ಮತ್ತು ಸಮಯ ನೀಡುವುದು ಈ 3 ವಿಷಯಗಳತ್ತ ಹೆಚ್ಚು ಗಮನ ಕೊಡಿ. ಏನಿದೆಯೋ ಅದನ್ನು ಒಪ್ಪಿಕೊಳ್ಳಿನಿಮ್ಮ ಶಕ್ತಿ ಸಾಮರ್ಥ್ಯಕ್ಕನುಸಾರ ಅವರಿಗೆ ಮಾರ್ಗದರ್ಶನ ನೀಡಿನಿಮಗೆ ಎಷ್ಟೇ ಒತ್ತಡವಿದ್ದರೂ ಸಮಯ ನೀಡಿ. ಒಮ್ಮೆ ನೀವು ಒಪ್ಪಿಕೊಳ್ಳುವುದನ್ನು ಕಲಿತರೆ ಹೆಚ್ಚಿನ ಸಮಸ್ಯೆ ಅಲ್ಲೇ ಕೊನೆಗೊಳ್ಳುತ್ತದೆ. ಎಲ್ಲ ಪೋಷಕರಿಗೂ ಈ ಅನುಭವ ಆಗಿರಬಹುದು. ಪೋಷಕರ ಮತ್ತು ಶಿಕ್ಷಕರ ನಿರೀಕ್ಷೆ ಸಮಸ್ಯೆಗಳ ಮೂಲದಲ್ಲಡಗಿರುತ್ತದೆ. ಸ್ವೀಕಾರ ಸಮಸ್ಯೆಗಳ ಪರಿಹಾರಕ್ಕೆ ದಾರಿದೀಪವಾಗುತ್ತದೆ. ಅಪೇಕ್ಷೆಗಳು ದಾರಿಯನ್ನು ಕಠಿಣಗೊಳಿಸುತ್ತವೆ. ಇದ್ದಂತೆಯೇ ಪರಿಸ್ಥಿತಿಗಳನ್ನು ಸ್ವೀಕರಿಸುವುದು ಹೊಸ ದಾರಿಗಳನ್ನು ತೆರೆಯಲು ಅವಕಾಶ ನೀಡುತ್ತದೆ. ಅದಕ್ಕಾಗಿಯೇ ಏನಿದೆಯೋ ಅದನ್ನು ಸ್ವೀಕರಿಸಿ. ಆಗ ನೀವೂ ಭಾರ ಮುಕ್ತರಾಗುತ್ತೀರಿ. ನಾವು ಆಗಾಗ ಮಕ್ಕಳ ಸ್ಕೂಲ್ ಬ್ಯಾಗ್ ಕುರಿತು ಚರ್ಚೆ ನಡೆಸುತ್ತೇವೆ. ಆದರೆಪೋಷಕರ ಅಪೇಕ್ಷೆಗಳುನಿರೀಕ್ಷೆಗಳು ಮಕ್ಕಳ ಸ್ಕೂಲ್ ಬ್ಯಾಗ್‌ಗಿಂತ ಹೆಚ್ಚು ಭಾರವಾಗಿ ಪರಿಣಮಿಸಿರುತ್ತವೆ ಎಂದು ನನಗನ್ನಿಸುತ್ತದೆ.

ಹಲವು ವರ್ಷಗಳ ಹಿಂದಿನ ಮಾತುನನ್ನ ಪರಿಚಯದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಮ್ಮ ದೇಶದ ಪ್ರಥಮ ಲೋಕಸಭಾ ಸ್ಪೀಕರ್ ಗಣೇಶ್ ದಾದಾ ಮಾವಲಂಕರ್ಅವರ ಪುತ್ರ ಎಂ.ಪಿ. ಕೂಡಾ ಆಗಿದ್ದ ಪುರುಷೋತ್ತಮ್ ಮಾವಲಂಕರ್ ಅವರುಇವರನ್ನು ನೋಡಲು ಬಂದಿದ್ದರು. ಅಲ್ಲಿ ನಾನೂ ಇದ್ದೆ. ಅವರು ಆರೋಗ್ಯದ ಬಗ್ಗೆ ಒಂದೇ ಒಂದೂ ಪ್ರಶ್ನೆಯನ್ನೂ ಕೇಳಲಿಲ್ಲ.  ಅವರು ಅಲ್ಲಿ ಕೂತುಅಲ್ಲಿಯ ಸ್ಥಿತಿಅವರ ಆರೋಗ್ಯದ ಬಗ್ಗೆ ಏನನ್ನೂ ಮಾತಾಡದೇ ಬಂದ 2 ನಿಮಿಷಕ್ಕೇ ನಗೆ ಚಟಾಕಿಗಳನ್ನು ಹಾರಿಸಲು ಆರಂಭಿಸಿದರು. ಅಲ್ಲಿಯ ವಾತಾವರಣವನ್ನು ತಿಳಿಗೊಳಿಸಿದರು. ಒಂದು ರೀತಿ ನಾವು ಅಸ್ವಸ್ಥರಾಗಿರುವವರನ್ನು ಭೇಟಿಯಾಗಲು ಹೋಗಿ ಅವರ ರೋಗದ ಬಗ್ಗೆ ಹೆದರಿಸುತ್ತೇವೆ. ಪೋಷಕರಿಗೆ ನಾನು ಹೇಳಬಯಸುವುದೇನೆಂದರೆ ಆಗಾಗ ನಾವೂ ಮಕ್ಕಳೊಂದಿಗೆ ಇದೇ ರೀತಿ ನಡೆದುಕೊಳ್ಳುತ್ತೇವೆ. ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ನಕ್ಕು ನಲಿಯುವ ಅವಕಾಶ ನೀಡಬೇಕೆಂದು ನಿಮಗೆ ಅನ್ನಿಸಿಲ್ಲವೇ? ನೀವೂ ಹೀಗೆ ಮಾಡಿ ನೋಡಿ ವಾತಾವರಣವೇ ಬದಲಾಗುತ್ತದೆ.

ನನಗೆ ಒಂದು ಅದ್ಭುತವಾದ ಫೋನ್ ಕರೆ ಬಂದಿದೆ. ಅವರು ತಮ್ಮ ಹೆಸರು ಹೇಳಲು ಇಷ್ಟಪಡಲಿಲ್ಲ. ಫೋನ್ ಕರೆ ಕೇಳಿದ ಮೇಲೆ ಇವರೇಕೆ ತಮ್ಮ ಹೆಸರು ಹೇಳಲು ಇಷ್ಟ ಪಡಲಿಲ್ಲ ಎಂದು ನಿಮಗೇ ತಿಳಿಯುತ್ತದೆ.

ಪ್ರಧಾನಮಂತ್ರಿಯವರೇ ನಮಸ್ಕಾರನಾನು ನನ್ನ ಹೆಸರು ಹೇಳಲಾರೆಏಕೆಂದರೆ ಬಾಲ್ಯದಲ್ಲಿ ನಾನು ಅಂಥ ಒಂದು ಕೆಲಸ ಮಾಡಿದ್ದೆ. ಬಾಲ್ಯದಲ್ಲಿ ಒಮ್ಮೆ ನಕಲು ಹೊಡೆಯಲು ಯತ್ನಿಸಿದ್ದೆ. ಅದಕ್ಕಾಗಿ ಬಹಳ ಸಿದ್ಧತೆ ಮಾಡಿಕೊಂಡಿದ್ದೆ. ನಕಲು ಮಾಡುವ ವಿಧಾನಗಳನ್ನು ಹುಡುಕಲು ಪ್ರಯತ್ನಿಸಿದೆಅದರಿಂದ ಬಹಳ ಸಮಯ ವ್ಯರ್ಥವಾಯ್ತು. ನಕಲು ಮಾಡುವ ಪ್ರಯತ್ನಕ್ಕೆ ಎಷ್ಟು ಬುದ್ಧಿವಂತಿಕೆ ಬಳಸಿದೆನೋ ಅದೇ ಸಮಯದಲ್ಲಿ ಓದಿ ಅಷ್ಟೇ ಅಂಕಗಳನ್ನು ಗಳಿಸಬಹುದಾಗಿತ್ತು. ನಕಲು ಮಾಡಿ ಉತ್ತೀರ್ಣನಾಗಲು ಪ್ರಯತ್ನಿಸಿದಾಗ ಸಿಕ್ಕಿಬಿದ್ದೆ. ಅದರಿಂದ ನನ್ನ ಅಕ್ಕಪಕ್ಕದ ಸ್ನೇಹಿತರಿಗೂ ನನ್ನಿಂದ ತೊಂದರೆಯಾಯ್ತು.

ನಿಮ್ಮ ಮಾತು ಸರಿಯಾಗಿದೆ. ಈ ಸುಲಭ ಹಾದಿಗಳೇ ನಕಲು ಮಾಡಲು  ಅನುಚಿತ ಕಾರ್ಯಕ್ಕೆ ಕಾರಣವಾದವು.ಒಮ್ಮೊಮ್ಮೆ ಆತ್ಮ ವಿಶ್ವಾಸ ಇಲ್ಲದ ಕಾರಣ ಪಕ್ಕದವರು ಬರೆದಿರುವುದನ್ನು ನೋಡಲು ಕಾರಣವಾಗುತ್ತದೆ. ತಾನು ಬರೆದದ್ದು ಸರಿಯೋ ಅಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಹಾಗೂ ಕೆಲವೊಮ್ಮೆ ಸರಿಯಾಗಿ ಬರೆದಿದ್ದರೂ ಸಹ ಪಕ್ಕದವರು ತಪ್ಪಾಗಿ ಬರೆದಿದ್ದರೆ ಅದೇ ತಪ್ಪನ್ನು ನಾವೂ ಸ್ವೀಕರಿಸಿ ತಪ್ಪು ಮಾಡುತ್ತೇವೆ. ಆದ್ದರಿಂದ ನಕಲು ಮಾಡುವುದರಿಂದ ಎಂದಿಗೂ ಲಾಭವಿಲ್ಲ. ‘ವಂಚನೆ ಮಾಡುವುದು ಕೀಳು,ಹೀಗಾಗಿ ದಯವಿಟ್ಟು ನಕಲು ಮಾಡಬೇಡಿ’. ನಕಲು ಮಾಡುವುದು ನಿಮ್ಮನ್ನು ಕೆಟ್ಟವರನ್ನಾಗಿಸುತ್ತದೆ. ಆದ್ದರಿಂದ ನಕಲು ಮಾಡಬೇಡಿ. ನೀವು ಹಲವು ಬಾರಿ  ನಕಲು ಮಾಡಬೇಡಿ ಎಂಬ ಉಪದೇಶ ಕೇಳಿರಬಹುದು. ನಾನೂ ನಿಮಗೆ ಇದೇ ಮಾತನ್ನು ಹೇಳುತ್ತಿರುವೆ. ಯಾವುದೇ ರೂಪದಲ್ಲಿಯೇ ನೋಡಿ ಅದು ನಿಮ್ಮನ್ನು ಮತ್ತು ನಿಮ್ಮ ಜೀವನವನ್ನು ವಿಫಲತೆಯತ್ತ ಎಳೆದೊಯ್ಯುತ್ತದೆ. ಪರೀಕ್ಷೆಯಲ್ಲಿ ನಿರೀಕ್ಷಕರು ನಿಮ್ಮನ್ನು ಹಿಡಿದರೆನಿಮ್ಮ ಜೀವನವೇ ಹಾಳಾಗುತ್ತದೆ. ಒಂದೊಮ್ಮೆ ಸಿಕ್ಕಿ ಹಾಕಿಕೊಳ್ಳದಿದ್ದರೆಜೀವನಪೂರ್ತಿ ನೀವು ವಾಮಮಾರ್ಗದಿಂದ ಉತ್ತೀರ್ಣರಾಗಿದ್ದೀರಿ ಎಂಬ ಹೊರೆ ನಿಮ್ಮ ಆತ್ಮಸಾಕ್ಷಿಗೆ ಇದ್ದೇ ಇರುತ್ತದೆ. ನಿಮ್ಮ ಮಕ್ಕಳಿಗೆ ತಿಳಿ ಹೇಳಬೇಕೆಂದಾಗ ಅವರ ಕಣ್ಣಲ್ಲಿ ಕಣ್ಣಿಟ್ಟು ಹೇಳಲಾಗುವುದಿಲ್ಲ. ಒಮ್ಮೆ ನಕಲು ಮಾಡುವ ಅಭ್ಯಾಸವಾದರೆಜೀವನದಲ್ಲಿ ಮತ್ತಿನ್ನೇನೂ ಕಲಿಯುವ ಇಚ್ಛೆ ಇಲ್ಲದಂತಾಗುತ್ತದೆ. ಆಗ ನೀವು ಯಾವ ಕೊನೆ ತಲುಪುತ್ತೀರಿ?

ಅಂದರೆ ನೀವು ನಿಮ್ಮ ಹಾದಿಗಳನ್ನು ಕಂದಕವಾಗಿ ಪರಿವರ್ತಿಸಿಕೊಳ್ಳುತ್ತಿದ್ದೀರಿ ಎಂದು ತಿಳಿದುಕೊಳ್ಳಿ. ನಾನು ನೋಡಿದ್ದೇನೆಕೆಲ ಜನರು ನಕಲು ಮಾಡುವ ವಿಧಾನಗಳನ್ನು ಹುಡುಕುವುದರಲ್ಲೇ ತಮ್ಮ ಬುದ್ಧಿವಂತಿಕೆಯನ್ನು ಬಳಸುತ್ತಾರೆ ಮತ್ತು ಹಣ ಹೂಡುತ್ತಾರೆ ಎಂದರೆ ತಮ್ಮ ಸಂಪೂರ್ಣ ಕ್ರೀಯಾಶೀಲತೆಯನ್ನು ನಕಲು ಮಾಡುವ ವಿಧಿವಿಧಾನಗಳಲ್ಲೇ ಕಳೆದುಬಿಡುತ್ತಾರೆ. ಅದೇ ಕ್ರೀಯಾಶೀಲತೆಯನ್ನುಸಮಯವನ್ನು ತಮ್ಮ ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿಸಿದರೆ ಬಹುಶಃ ನಕಲು ಮಾಡುವ ಪ್ರಮೇಯವೇ ಇರುವುದಿಲ್ಲ. ಸ್ವಂತ ಪರಿಶ್ರಮದಿಂದ ದೊರೆಯುವ ಪರಿಣಾಮ ಅದ್ಭುತವಾದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಈಗ ನಾನು ಸ್ವೀಕರಿಸಿದ ಒಂದು ದೂರವಾಣಿ ಕರೆಯನ್ನು ನೀವೂ ಕೇಳಿ:-

ಪ್ರಧಾನಮಂತ್ರಿಯವರೇ ನಮಸ್ಕಾರ, ನನ್ನ ಹೆಸರು ಮೋನಿಕಾ ಮತ್ತು ನಾನು 12ನೇ ತರಗತಿ ವಿದ್ಯಾರ್ಥಿನಿಯಾಗಿರುವ ಹಿನ್ನೆಲೆಯಲ್ಲಿ, ನಾನು ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳನ್ನು ಕೇಳಲು ಇಚ್ಛಿಸುತ್ತೇನೆ. ನನ್ನ ಮೊದಲ ಪ್ರಶ್ನೆ, ನಮ್ಮ ಪರೀಕ್ಷೆ ಸಮಯ ಸಮಯದಲ್ಲಿ ಉಂಟಾಗುವ ಒತ್ತಡ ನಿವಾರಿಸಲು ನಾವೇನು ಮಾಡಬೇಕು. ಮತ್ತು ನನ್ನ ಎರಡನೇ ಪ್ರಶ್ನೆ, ಏಕೆ ಪರೀಕ್ಷೆಗಳು ಆಟವೇ ಬೇಡ, ಕೇವಲ ಓದು ಓದು ಎನ್ನುವುದಾಗಿದೆ. ಧನ್ಯವಾದಗಳು.

ಪರೀಕ್ಷೆ ಸಮಯದಲ್ಲಿ ಆಟವಾಡುವ ಬಗ್ಗೆ ನಾನು, ನಿಮ್ಮೊಂದಿಗೆ ಮಾತಾಡಿದರೆ ನಿಮ್ಮ ಶಿಕ್ಷಕರು ಮತ್ತು ತಂದೆತಾಯಂದಿರುಇವರೆಂಥ ಪ್ರಧಾನಿಮಕ್ಕಳ ಪರೀಕ್ಷೆ ಸಮಯದಲ್ಲಿ ಆಟವಾಡಿ ಎಂದು ಹೇಳುತ್ತಿದ್ದಾರೆ ಎಂದು ನನ್ನ ಮೇಲೆ ಕೋಪಿಸಿಕೊಳ್ಳುತ್ತಾರೆಬೇಸರಪಟ್ಟುಕೊಳ್ಳುತ್ತಾರೆ. ಏಕೆಂದರೆ ಸಾಮಾನ್ಯವಾಗಿ ವಿದ್ಯಾರ್ಥಿಗಳು ಆಟದತ್ತ ಗಮನಹರಿಸಿದರೆ ಓದಿನೆಡೆಗೆ ಗಮನ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ಗ್ರಹಿಕೆಯೇ ತಪ್ಪು. ಸಮಸ್ಯೆಯ ಮೂಲವೇ ಅಲ್ಲಿದೆ. ಸರ್ವತೋಮುಖ ಬೆಳವಣಿಗೆ  ಹೊಂದಬೇಕೆಂದರೆ ಕೇವಲ ಪುಸ್ತಕಗಳಷ್ಟೇ ಅಲ್ಲಅದರ ಹೊರತಾಗಿಯೂ ಒಂದು ವಿಶಾಲವಾದ ಜೀವನವಿದೆ. ಅದನ್ನೂ ಕಲಿಯುವ ಮತ್ತು ಜೀವಿಸಲು ಕೂಡಾ ಇದೇ ಸಮಯವಾಗಿರುತ್ತದೆ. ಮೊದಲು ಎಲ್ಲ ಪರೀಕ್ಷೆಗಳನ್ನು ಮುಗಿಸಿನಂತರ ಆಡುತ್ತೇನೆಇದನ್ನು ಮಾಡುತ್ತೇನೆ ಅದನ್ನು ಮಾಡುತ್ತೇನೆ ಎಂದರೆ ಅದು ಅಸಂಭವ. ಜೀವನ ರೂಪಿಸಿಕೊಳ್ಳಲು ಇದೇ ಸಮಯವಾಗಿರುತ್ತದೆ. ಇದನ್ನೇ ಪಾಲನೆ ಎನ್ನುತ್ತೇವೆ.  ನನ್ನ ದೃಷ್ಟಿಯಲ್ಲಿ ಪರೀಕ್ಷೆಯಲ್ಲಿ 3 ವಿಷಯಗಳು ಬಹಳ ಮುಖ್ಯವಾಗಿರುತ್ತವೆ. ಸೂಕ್ತ ವಿಶ್ರಾಂತಿದೇಹಕ್ಕೆ ಬೇಕಾದಷ್ಟೇ ನಿದ್ದೆ ಮತ್ತು 3 ನೆಯದಾಗಿ ಮೆದುಳಿನ ಚಟುವಟಿಕೆ ಹೊರತಾಗಿ ದೈಹಿಕ ಚಟುವಟಿಕೆ ಅವಶ್ಯಕವಾಗಿರುತ್ತದೆ.  ಇಷ್ಟೆಲ್ಲಾ ಮುಂದಿರುವಾಗ ಒಂದೆರಡು ನಿಮಿಷ ನೀಲಾಕಾಶವನ್ನು ನೋಡಿಸ್ವಲ್ಪ ಗಿಡಮರಗಳತ್ತ ಗಮನ ಹರಿಸಿನಿಮ್ಮ ಮನಸ್ಸನ್ನು ಸ್ವಲ್ಪ ಪ್ರಫುಲ್ಲಗೊಳಿಸಿ ಆಗ ನೋಡಿ ಒಂದು ಹೊಸ ಹುರುಪಿನೊಂದಿಗೆ ನಿಮ್ಮ ಕೋಣೆಗೆ ಮರಳಿ ಮತ್ತೆ ಓದಲಾರಂಭಿಸುವಿರಿ. ನೀವು ಏನೇ ಮಾಡುತ್ತಾ ಇದ್ದರೂ ಸ್ವಲ್ಪ ವಿರಾಮ ಪಡೆಯಿರಿ. ಎದ್ದು ಹೊರಗಡೆ ಹೋಗಿ ಬನ್ನಿ,ಅಡುಗೆ ಮನೆಗೆ ಹೋಗಿ ನಿಮಗಿಷ್ಟವಾದ ವಸ್ತುವನ್ನು ಹುಡುಕಿನಿಮಗಿಷ್ಟವಾದ ಬಿಸ್ಕೆಟ್ ಸಿಕ್ಕರೆಅದನ್ನು ತಿನ್ನಿರಿ, ನಗೆ ಚಟಾಕಿ ಆಲಿಸಿ ಇಲ್ಲ ಹೇಳಿಸ್ವಲ್ಪ ನಕ್ಕು ನಲಿಯಿರಿ. ಐದೇ ನಿಮಿಷವಾದರೂ ಸರಿಯೇ ವಿರಾಮ ಪಡೆಯಿರಿ. ನಿಮ್ಮ ಕೆಲಸ ಸರಳಗೊಳ್ಳುತ್ತಿದೆ ಎಂಬ ಅನುಭವ ನಿಮಗಾಗುತ್ತದೆ.  ಇದು ಎಲ್ಲರಿಗೂ ಇಷ್ಟವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲಆದರೆ ಇದು ನನ್ನ ಅನುಭವ. ಇಂಥ ಸಮಯದಲ್ಲಿ ದೀರ್ಘ ಶ್ವಾಸ ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು. ಆಗ ನೋಡಿ ಎಷ್ಟು ಆರಾಮದಾಯಕವೆನಿಸುತ್ತದೆ. ದೀರ್ಘ ಶ್ವಾಸ ತೆಗೆದುಕೊಳ್ಳಲು ಕೋಣೆಯಲ್ಲೇ ಉಳಿಯುವ ಅವಶ್ಯಕತೆಯಿಲ್ಲ. ಸ್ವಲ್ಪ ಬಯಲಿಗೆ ಬನ್ನಿಮಹಡಿ ಮೇಲೆ ಹೋಗಿ,5 ನಿಮಿಷ ದೀರ್ಘ ಶ್ವಾಸ ತೆಗೆದುಕೊಂಡು ನಂತರ ಓದಲು ಕುಳಿತುಕೊಳ್ಳಿ. ನೀವು ಗಮನಿಸಿನಿಮ್ಮ ಶರೀರ ಹಗುವರವಾದ ಅನುಭವಿಸುತ್ತದೆ.  ಶಾರೀರಿಕ ಹಗುರದ ಜೊತೆಗೆ ಮಾನಸಿಕ ವಿಶ್ರಾಂತಿಯೂ ಲಭಿಸುತ್ತದೆ.  ಕೆಲವರಿಗೆ ರಾತ್ರಿ ಬಹಳ ಹೊತ್ತಿನವರೆಗೆ ಎಚ್ಚರವಿರುವುದರಿಂದ ಹೆಚ್ಚು ಓದಬಹುದು ಎನ್ನಿಸುತ್ತದೆ - ಅದು ಹಾಗಲ್ಲನಿಮ್ಮ ಶರೀರಕ್ಕೆ ಎಷ್ಟು ನಿದ್ರೆಯ ಅವಶ್ಯಕತೆ ಇದೆಯೋ ಅದನ್ನು ನೀಡಿ. ಅದರಿಂದ ನೀವು ಓದುವ ಸಮಯ ವ್ಯರ್ಥವಾಗುವುದಿಲ್ಲ. ಅದು ಓದುವ ಸಾಮರ್ಥ್ಯವನ್ನು ಕಾಯ್ದುಕೊಳ್ಳುತ್ತದೆ. ನಿಮ್ಮ ಗ್ರಹಣ ಶಕ್ತಿ ಹೆಚ್ಚುತ್ತದೆ. ಲವಲವಿಕೆ ಬರುತ್ತದೆನಿಮ್ಮ ಕ್ಷಮತೆಯಲ್ಲಿ ಒಟ್ಟಾರೆ ವೃದ್ಧಿ ಕಂಡುಬರುತ್ತದೆ. ನಾನು ಚುನಾವಣೆ ವೇಳೆಯಲ್ಲಿ ಭಾಷಣಗಳನ್ನು ಮಾಡಿದಾಗಕೆಲವೊಮ್ಮೆ ನನ್ನ ಧ್ವನಿ ಹೂತು ಹೋಗುತ್ತದೆ. ನನ್ನನ್ನು ಒಬ್ಬ ಜನಪದ ಗಾಯಕರು ಭೇಟಿಯಾಗಲು ಬಂದಿದ್ದರು. ನೀವು ಎಷ್ಟು ಹೊತ್ತು ನಿದ್ದೆ ಮಾಡುವಿರಿ ಎಂದು ಅವರು ನನ್ನನ್ನು ಕೇಳಿದರು. ಯಾಕಣ್ಣಾ ನೀವೇನು ವೈದ್ಯರೇಎಂದು ನಾನು ಕೇಳಿದೆ. ಇಲ್ಲಇಲ್ಲ.. ನೀವು ಚುನಾವಣೆ ಸಮಯದಲ್ಲಿ ಭಾಷಣ ಮಾಡುತ್ತಾ ನಿಮ್ಮ ಧ್ವನಿ ಹಾಳಾಗುವುದಕ್ಕೆ ಮತ್ತು ಇದಕ್ಕೆ ಸಂಬಂಧವಿದೆ ಎಂದರು. ನೀವು ಪೂರ್ಣ ನಿದ್ದೆ ಮಾಡಿದಾಗ ನಿಮ್ಮ ಧ್ವನಿ ತಂತುಗಳಿಗೆ ಸಂಪೂರ್ಣ ವಿಶ್ರಾಂತಿ ದೊರೆಯುತ್ತದೆ. ನಾನು ನನ್ನ ನಿದ್ದೆಭಾಷಣ ಮತ್ತು ಧ್ವನಿಯ ಬಗ್ಗೆ ಯೋಚಿಸುವುದೇ ಇಲ್ಲ. ಅವರು ಇದಕ್ಕಾಗಿ ನನಗೆ ಒಂದು ಬಗೆಯ ಗಿಡ ಮೂಲಿಕೆಯನ್ನು ನೀಡಿದ್ದಾರೆ. ಹಾಗಾಗಿ ನಾವು ನಿಜವಾಗಿಯೂ ಇವುಗಳ ಮಹತ್ವ ಅರಿತುಕೊಳ್ಳಬೇಕು. ನೀವೂ ಪ್ರಯತ್ನಿಸಿ ನೋಡಿನಿಮಗೆ ಲಾಭವಾಗುತ್ತದೆ. ಇದರರ್ಥ ನಿದ್ರಿಸುತ್ತಲೇ ಇರಿ ಎಂದಲ್ಲ. ಆದರೆ ಕೆಲವರು ನಿದ್ದೆಗೆಡುವ ಅವಶ್ಯಕತೆಯಿಲ್ಲನಿದ್ರಿಸುತ್ತಲೇ ಇರಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ ಎನ್ನಬಹುದು. ಹಾಗೆ ಮಾಡಬೇಡಿಇಲ್ಲದಿದ್ದರೆ ನಿಮ್ಮ ಕುಟುಂಬದವರು ನನ್ನ ಮೇಲೆ ಕೋಪಿಸಿಕೊಳ್ಳಬಹುದು. ನಿಮ್ಮ ಅಂಕ ಪಟ್ಟಿ ಬಂದ ದಿನ ಅವರಿಗೆ ನೀವು ಕಾಣಿಸುವುದಿಲ್ಲಬದಲಾಗಿ ನಾನು ಕಾಣಿಸುತ್ತೇನೆ. ದಯವಿಟ್ಟು ಹಾಗೆ ಮಾಡಬೇಡಿ. ಅದಕ್ಕೆ ನಾನು ಹೇಳುತ್ತೇನೆ‘P for prepared and P for play’, ಅಂದರೆ ತಯಾರಾಗಿರಿ ಮತ್ತು ಆಟವಾಡುತ್ತಿರಿ. ಯಾರು ಆಡುತ್ತಾರೋ ಅವರು ಅರಳುತ್ತಾರೆ. ಆಡುವ ವ್ಯಕ್ತಿ ಹೊಳೆಯುತ್ತಾನೆ’.  ಮನಸ್ಸುಬುದ್ಧಿ ಮತ್ತು ಶರೀರವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಇದೊಂದು ಉತ್ತಮ ಔಷಧ.

ನನ್ನ ಪ್ರಿಯ ಯುವ ಮಿತ್ರರೇನೀವು ಪರೀಕ್ಷಾ ತಯಾರಿಯಲ್ಲಿ ಮಗ್ನರಾಗಿದ್ದಾಗ ನಾನು ನಿಮ್ಮನ್ನು ನನ್ನ ಮನದಾಳದ ಮಾತಿನಲ್ಲಿ ಹಿಡಿದಿಟ್ಟಿರುವೆ. ಇಂದಿನ ನನ್ನ ಮಾತುಗಳು ಬಹುಶಃ ನಿಮಗೆ ವಿರಾಮವನ್ನು ನೀಡೇ ನೀಡುತ್ತವೆ. ಆದರೆ ಇದರೊಟ್ಟಿಗೆ ನಾನು ಹೇಳಿದ ಮಾತುಗಳನ್ನು ಹೊರೆಯಾಗಲು ಬಿಡಬೇಡಿ. ಸಾಧ್ಯವಾದರೆ ಮಾಡಿ ಇಲ್ಲ ಬಿಟ್ಟು ಬಿಡಿ. ಇಲ್ಲವಾದಲ್ಲಿ ಇದೇ ಒಂದು ಹೊರೆಯಾಗಬಲ್ಲದು. ನಿಮ್ಮ ಕುಟುಂಬದವರು ಮತ್ತು ತಂದೆತಾಯಿಯರಿಗೆ ಭಾರವಾಗದಂತೆ ಇರಲು ಹೇಗೆ ಸಲಹೆ ನೀಡಿದೆನೋ ಹಾಗೆಯೇ ಅದು ನನಗೂ ಅನ್ವಯಿಸುತ್ತದೆ. ನಿಮ್ಮ ಸಂಕಲ್ಪವನ್ನು ನೆನಪಿಸಿಕೊಳ್ಳುತ್ತಾಆತ್ಮ ವಿಶ್ವಾಸದೊಂದಿಗೆ ಪರೀಕ್ಷೆ ಬರೆಯಲು ಸಿದ್ಧರಾಗಿ. ನಿಮಗೆಲ್ಲಾ ನನ್ನ ಶುಭಹಾರೈಕೆಗಳು. ಎಲ್ಲ ಪರೀಕ್ಷೆಗಳನ್ನೂ ಮೆಟ್ಟಿ ನಿಲ್ಲಲು ಅವನ್ನು ಒಂದು ಉತ್ಸವವಾಗಿ ಪರಿವರ್ತಿಸಿಕೊಳ್ಳಿ. ಆಗ ಪರೀಕ್ಷೆಯೆನ್ನುವುದು ಮತ್ತೆ ಪರೀಕ್ಷೆಯಾಗಿ ಉಳಿಯುವುದಿಲ್ಲ. ಈ ಮಂತ್ರವನ್ನು ಜಪಿಸುತ್ತಾ ಮುನ್ನಡೆಯಿರಿ.

ನನ್ನ ಪ್ರಿಯ ದೇಶವಾಸಿಗಳೇಫೆಬ್ರವರಿ 1, 2017 ಕ್ಕೆ ಭಾರತೀಯ ಕರಾವಳಿ ಕಾವಲು ಪಡೆ(ಕೋಸ್ಟ್ ಗಾರ್ಡ್)ಗೆ 4೦ ವರ್ಷಗಳು ತುಂಬಲಿವೆ. ಈ ಸಂದರ್ಭದಲ್ಲಿ ನಾನು ಕರಾವಳಿ ಕಾವಲು ಪಡೆಯ  ಎಲ್ಲ ಅಧಿಕಾರಿಗಳು ಮತ್ತು ಯೋಧರಿಗೆ ರಾಷ್ಟ್ರಕ್ಕೆ ಅವರು ಸಲ್ಲಿಸುತ್ತಿರುವ ಸೇವೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕರಾವಳಿ ಭದ್ರತಾ ಪಡೆ ನಮ್ಮ ದೇಶದಲ್ಲಿ ನಿರ್ಮಾಣಗೊಂಡು 126 ಹಡಗುಗಳು ಮತ್ತು 62 ವಿಮಾನಗಳೊಂದಿಗೆ ವಿಶ್ವದಲ್ಲೇ ಅತಿ ದೊಡ್ಡದಾದ 4 ಕರಾವಳಿ ಕಾವಲು ಪಡೆಗಳಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ವಯಂ ರಕ್ಷಾಮಃ’’ ಎಂಬುದು ಕರಾವಳಿ ಕಾವಲು ಪಡೆ ಮಂತ್ರ. ತಮ್ಮ ಈ ಆದರ್ಶ ವಾಕ್ಯವನ್ನು ಪರಿಪೂರ್ಣವಾಗಿಸುತ್ತಾದೇಶದ ಸಮುದ್ರ ತೀರಗಳ ಮತ್ತು ಸಮುದ್ರ ಪರಿಸರವನ್ನು ಸುರಕ್ಷಿತವಾಗಿಡಲು ಕರಾವಳಿ ಕಾವಲು ಪಡೆ ಯೋಧರು ಪ್ರತಿಕೂಲ ಪರಿಸ್ಥಿತಿಗಳಲ್ಲೂ ಹಗಲಿರುಳು ಕಾರ್ಯನಿರತರಾಗಿರುತ್ತಾರೆ. ಕಳೆದ ವರ್ಷ  ಕರಾವಳಿ ಕಾವಲು ಪಡೆ ಸಿಬ್ಬಂದಿ ತಮ್ಮ ಕರಾವಳಿ ಭದ್ರತೆಯ ಜವಾಬ್ದಾರಿಗಳ ಜೊತೆಗೆ ನಮ್ಮ ದೇಶದ ಸಮುದ್ರ ತೀರವನ್ನು ಸ್ವಚ್ಛವಾಗಿಡುವ ಅಭಿಯಾನವನ್ನೇ ಕೈಗೆತ್ತಿಕೊಂಡರು ಮತ್ತು ಸಾವಿರಾರು ಜನ ಇದರಲ್ಲಿ ಭಾಗವಹಿಸಿದ್ದರು. ಸಮುದ್ರ ತೀರದ ರಕ್ಷಣೆ ಜೊತೆಗೆ ಸ್ವಚ್ಛತೆ ಬಗ್ಗೆ ಕೂಡ ಇವರು ಚಿಂತನೆ ನಡೆಸಿದ್ದರು. ಇದು ನಿಜವಾಗಿಯೂ ಪ್ರಶಂಸನಾರ್ಹ ಸಂಗತಿ. ಕರಾವಳಿ ಕಾವಲು ಪಡೆಯಲ್ಲಿ ಪುರುಷರಷ್ಟೇ ಅಲ್ಲ, ಜೊತೆಗೆ ಮಹಿಳೆಯರೂ ಸಹ ಹೆಗಲೊಡ್ಡಿ ಕಾವಲು ಕರ್ತವ್ಯಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ ಎಂಬುದು ಬಹುಶಃ ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಕರಾವಳಿ ಭದ್ರತಾ ಪಡೆಯ ನಮ್ಮ ಮಹಿಳಾ ಅಧಿಕಾರಿಗಳು ಪೈಲಟ್ ಗಳಾಗಿ ವೀಕ್ಷಕರಾಗಿ, ಅಷ್ಟೇ ಅಲ್ಲ ಹೋವರ್‌ಕ್ರಾಫ್ಟ್ ಗಳ ಮುಂದಾಳುಗಳಾಗಿ ಕೂಡಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತೀಯ ಕರಾವಳಿ ಗಡಿ ಸುರಕ್ಷತೆ ಮತ್ತು ಸಮುದ್ರದ ಸುರಕ್ಷೆ ಒಂದು ಮಹತ್ವ ಪೂರ್ಣ ವಿಷಯವಾಗಿದ್ದು ವಿಶ್ವ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಗಾಗಿ ಭಾರತೀಯ ಕರಾವಳಿ ಭದ್ರತಾ ಪಡೆಯ 40ನೇ ವರ್ಷಾಚರಣೆಗೆ ಅಭಿನಂದನೆ ಸಲ್ಲಿಸುತ್ತೇನೆ.

ಫೆಬ್ರವರಿ 1 ರಂದು ವಸಂತ ಪಂಚಮಿ ಹಬ್ಬವಿದೆ. ವಸಂತ - ಸರ್ವಶ್ರೇಷ್ಠ ಋತು ಎಂದು ಸ್ವೀಕೃತವಾಗಿದೆ. ವಸಂತ -ಋತುಗಳ ರಾಜ. ನಮ್ಮ ದೇಶದಲ್ಲಿ ವಸಂತ ಪಂಚಮಿ ಸರಸ್ವತಿ ಪೂಜೆಯ ಒಂದು ದೊಡ್ಡ ಹಬ್ಬ. ಇದನ್ನು ವಿದ್ಯಾ, ಜ್ಞಾನದ ಆರಾಧನೆಯ ಸಮಯ ಎಂದು ನಂಬಲಾಗಿದೆ. ಇಷ್ಟೇ ಅಲ್ಲದೆ ವೀರ ಹೃದಯಗಳಿಗೆ ಪ್ರೇರಣೆಯ ಸಮಯವೂ ಆಗಿದೆ. ಮೇರಾ ರಂಗ ದೆ ಬಸಂತಿ ಚೋಲಾ’ ಇದಕ್ಕೆ ಸೂಕ್ತ ಉದಾಹರಣೆಯಾಗಿದೆ. ಈ ವಸಂತ ಪಂಚಮಿಯ ಶುಭ ಸಂದರ್ಭದಂದು ನನ್ನ ದೇಶ ಬಾಂಧವರಿಗೆ ಶುಭಾಶಯಗಳು.

ನನ್ನ ಪ್ರೀತಿಯ ದೇಶವಾಸಿಗಳೇ, ಮನ್ ಕಿ ಬಾತ್ ನಲ್ಲಿ ಆಕಾಶವಾಣಿಯು ತನ್ನ ತತ್ವ ಸಿದ್ಧಾಂತಗಳೊಂದಿಗೆ ಸದಾ ಹೊಸ ರೂಪ ತುಂಬುತ್ತಾ ಬಂದಿದೆ. ಕಳೆದ ತಿಂಗಳಿನಿಂದ ನನ್ನ ಮನದಾಳದ ಮಾತು ಮುಗಿದ ತಕ್ಷಣವೇ ಪ್ರಾದೇಶಿಕ ಭಾಷೆಗಳಲ್ಲೂ ಮನದಾಳದ ಮಾತನ್ನು ಬಿತ್ತರಿಸುವ ಕೆಲಸ ಆರಂಭಿಸಿದ್ದಾರೆ. ಇದಕ್ಕೆ ವ್ಯಾಪಕವಾದ ಬೆಂಬಲ ದೊರೆತಿದೆ. ದೂರ ದೂರದಿಂದ ಜನರು ಪತ್ರ ಬರೆಯುತ್ತಿದ್ದಾರೆ. ನಾನು ಆಕಾಶವಾಣಿಗೆ ಅವರ ಸ್ವಯಂ ಪ್ರೇರಿತ ಈ ಕೆಲಸಕ್ಕೆ ನನ್ನ ಹೃದಯಾಂತರಾಳದಿಂದ ಮೆಚ್ಚುಗೆ ಸಲ್ಲಿಸುತ್ತೇನೆ. ಮನ್ ಕಿ ಬಾತ್ ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಒಂದು ಒಳ್ಳೆ ಅವಕಾಶ ನೀಡಿದೆ. ನಿಮ್ಮೆಲ್ಲರಿಗೂ ಶುಭ ಹಾರೈಕೆಗಳುಧನ್ಯವಾದ.

***



(Release ID: 1481874) Visitor Counter : 251


Read this release in: English